ಪುಟ:ದಕ್ಷಕನ್ಯಾ .djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಸ ತಿ ಹಿ ತ ಷಿ ಣಿ ಇತ್ತ ಬನ್ನಿರಿ, ಮನೆಯಮುಂಗಡೆಯ ಪಡಸಾಲೆಯಮೇಲೆ, ದಂಡಪಾಣಿಗ ಳಾದ ಮುಸಲ್ಮಾನ ಪಹರೆಯವರು ಕುಳಿತಿರುವರು. ಅವರಿಬ್ಬರೂ ಕಿವಿಮಾ ತನಾಡುತ್ತಿರುವರು. ಇಬ್ಬರಮುಖದಲ್ಲಿಯೂ ಕೌತುಕದ ಚಿಹ್ನೆ ಗಳೇ ಕಾಣುತ್ತಿವೆ. ಅದೇನಿರಬಹುದು ! ನಮಗೆಗೊತ್ತೇ ? ಮೊದಲನೆಯ ಸಹ ರೆಯವನು, ಎರಡನೆಯವನನ್ನು ಕುರಿತು, : ಅರೆ , ಉರ್ಸ್ಮಾ ! ಯಮು ನಾಬಾಯಿ ಅವರು, ಹೇಳಿದ್ದು ಯಾತರಮಾತು ? ನಿನಗೆ ಗೊತ್ತಾಯ್ತ?' ಉರ್ಸ್ಮಾ-ಅಲೀರ್ಖಾ ! ನೀನರಿತಿದ್ದು ಇಷ್ಟೇನೋ ? ಅವರು ಹೇಳಿ ದೈ೦ದರೆ- : ಮನೆಕಡೆ ಜೋಕೆ ! ಕಳ್ಳ-ಮೋಸತನಗಳೇನಾದರೂ ನಡೆದಾವು ? ಹುಷಾರಿರಿ !!” ಎಂತಲ್ಲವೋ ? ಅಲೀರ್ಖಾ-ಅದುಸರಿ ; ಇನ್ನೂ ಕಿವಿಯಲ್ಲಿ ಹೇಳಿದರಲ್ಲ ? ಉರ್ಸ್ಮಾಓ! ಆ ಮಾತು ? « ದಿವಾನ-ಗೊಲ್ಲ, ಇಬ್ಬರಮೇಲೆ ನಿಮ್ಮ ಕಣ್ಣಿರಬೇಕು, ಅವರು ಹೋಗಿಬರೋದು ಮಾಡೋದನ್ನ ತಿಳಿದು, ನನ್ನಲ್ಲಿ ಹೇಳುತ್ತಿರಬೇಕು ” ಇದನ್ನೇ ಹೇಳಿದ್ದು. ಅಲ್ಲೇರ್ಖಾ--ಇನ್ನೊಂದು, ಕಡೆಮಾತು ? ಉರ್ಸ್ಮಾ-ಅದೋ ? ಅದೇ ಮುಖ್ಯವಾದುದು. - ಯಾರು ಬಂದು ಕೇಳಲಿ ; ನಾನು ಈ ಕಡೆ ಬಂದು ಹೋಗಿದ್ದೇನೆಂದು ಹೇಳಬಾ - ರದು, ಎಚ್ಚರಿಕೆ !” ಇದನ್ನೇ. ಅಲೀರ್ಖಾ-ಕುತೂಹಲದಿಂದ ಅದ್ಯಾಕಂತೆ ಅಷ್ಟೊಂದು ಗುಟ್ಟು ?? ಉರ್ಸ್ಮಾ-ಛ ! ಎಂಥ ಹುಚ್ಚನಾಗಿದ್ದೀಯ ನೀನು ? ಮನೆಕಡೆ ಕಣ್ಣಿರ ಬೇಕೆಂದರೆ-ಇದು ಗೊತ್ತಾಗಲಿಲ್ಲ ? ನಿನ್ನ ದೇನು ? ಬಿಡು, ತಂಬಾ ಕು ಒಂದರಲ್ಲೇ ನಿನ್ನ ಮನಸ್ಸು ! ಅಲ್ಲೇರ್ಖಾ-ಅದು ಹೇಗಾದರೂ ಇರಲಯ್ಯಾ ! ಇಷ್ಟಕ್ಕೇ ಬಿಟ್ಟು ಬಿಡು, ಅದೋನೋಡು ! ಗೊಲ್ಲಯ್ಯನೇ ಬರುತ್ತಿದ್ದಾನೆ. ಅವನ ಕಿವಿಗೇನಾದರೂ ಬಿದ್ದೀತು ? ಈk