ಪುಟ:ದಕ್ಷಕನ್ಯಾ .djvu/೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ಸ ತಿ ಹಿ ತ ಷಿ ಣಿ ಗೋಪಾಲ ಇರಲಿ ; ಈ ಕಡೆ ಯಮುನಾಬಾಯಿ ಬರಲಿಲ್ಲ ವೋ ? ಉರ್ಸ್ಮಾ-ಆಗ ಹೋದವರು ಇನ್ನೂ ಬಂದಿಲ್ಲ. ಗೋಪಾಲ ನಿಜವಾಗಿ ಬೀದಿಗೆ ಹೋದರೇ ? ಚೆನ್ನಾಗಿ ನೋಡಿದಿರಾ ? ಉಸ್ಮಾ -ಶರಭಾವದಿಂದ - ಏನು ? ಸುಳ್ಳು ಹೇಳುತ್ತೇವೆಯೇ ? ನಿಮ್ಮ ಇದಿರಾಗಿಯೇ ಹೋಗಲಿಲ್ಲ ವೇ ? ನಾವು ಚೆನ್ನಾಗಿ ನೋಡಿಯೇ ಹೇಳಿದ್ದೇವೆ. ಆಗಲೇ ಅವರು, ಪಡುವಲದಿಕ್ಕಿಗೆ ಹೋದವರು ಇನ್ನೂ ಬಂದಿಲ್ಲ, ಇದೇನೋ ನಿಜವಾದಮಾತು. ಗೋಪಾಲ-ಅದಕ್ಕಲ್ಲವಯ್ಯಾ , ಕೂಗಾಡಬೇಡ , ತುರ್ತು ಕೆಲಸವಿದೆ. ಅದಕ್ಕಾಗಿ ಅವರನ್ನು ಕೇಳಿದ್ದು. - ಬೀದಿಯ ಕಡೆಗೆ ನೋಡುತ್ತ ಕುಳಿತಿದ್ದ ಅಲ್ಲಿಖಾನನು ಗೋಪಾ ಕ್ರನನ್ನು ನೋಡಿ : ಅಯ್ಯಾ' ನೋಡಿರಿ, ಆಕಡೆಯಿಂದಲೇ ಅವರು ಬ ರುತ್ತಿದ್ದಾರೆ. ಈಗಲಾದರೂ ನಮ್ಮ ಮಾತು ನಂಬಿಕೆಯಾಯ್ತಲ್ಲವೆ?' ಗೋಪಾಲನು ತಿರುಗಿನೋಡಿದನು , ಯಮುನೆಯು ಬರುತ್ತಿ ದ್ದು ದನ್ನು ಕಂಡನು, ಆವರೆಗೂ ಕಳವಳಗೊಂಡಿದ್ದ ಅವನ ಮನಸ್ಸು ಸ್ವಲ್ಪ ಸಮಾಧಾನಹೊಂದಿದಂತಾಯ್ತು , ತಲೆದೂಗುತ್ತ ಮುಂದು ಮುಂದಕ್ಕೆ ಬಂದು ರಸ್ತೆಯ ಬಳಿಯಲ್ಲಿ ನಿಂತನು. ಅಷ್ಟರಲ್ಲಿಯೇ ಬಂದ ಯಮುನೆಯೂ ಇದಿರಾಗಿ ನಿಂತು, ಕಿರುನಗೆಯಿಂದ ಕೇಳಿ ದಳು, : ಏನು ? ಗೋಪಾಲ! ಇದೆಲ್ಲಿಗೆ ಹೊರಟೆ ? ಗೋಪಾಲ-ಅಂಗಡಿಯವರೆಗೆ ಹೋಗಬೇಕಾದ ಕೆಲಸವಿತ್ತು. ಯಮುನೆ-ಅಂಚೆಯಮನೆಗೆ ಹೋಗಿದ್ದೆಯಾ ? ಗೋಪಾಲ-ಎಲ್ಲಿ ? - ಮನೆಯಲ್ಲಿರು; ಬೇಗಬರುತ್ತೇನೆ' ಎಂದು ಹೋಗಿ, ನೀವು ಇಷ್ಟು ಹೊತ್ತು ಮಾಡಿದಿರಿ. ಈವರೆಗೂ ನೋಡಿ ನೋಡಿ ಬೇಸತ್ತು ಕಡೆಗೆ ಹೊರಟಿರುತ್ತೇನೆ, ನಿಮ್ಮನ್ನು ಅಮ್ಮಾಯಿಯವರು ಕೂಗಿಕೂಗಿ ಸಾಕಾಗಿ ಸುಮ್ಮನಾದರು.