ಪುಟ:ದಕ್ಷಕನ್ಯಾ .djvu/೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧? ಯಮುನೆ-ಹಾಗೋ ? ನನಗೆ ತಿಳಿದಿರಲಿಲ್ಲ ! ಇರಲಿ ; ಅಮ್ಮಾಯಿಯ ವರಿಗೆ ಹೇಳಿಕೊಳ್ಳಬಲ್ಲೆನು, ಆದರೆ ನೋಡು ; ಮೋಸದಮದ್ದ ನ್ನು ತರಲಿಕ್ಕೆಂದು ಹೋಗಿ ಈವರೆಗೂ ಕಾದಿರಬೇಕಾಯ್ತು ; ಇದೇ ಇಷ್ಟು ಹೊತ್ತಾಗಲು ಕಾರಣ. ಗೋಪಾಲ-ಹಾ ! ಹಾಗೆಂದರೇನು ? ಎಂತಹುದು ? ಎಲ್ಲಿತ್ತು ? ಕೊಟ್ಟ ವರಾರು ? ಯಮುನೆ-ಹೋ ! ತಾಳುತಾಳು !! ಇಷ್ಟೇಕೆಗಾಬರಿ ? ಮೋಸದಮ Qಂದರೆ ಈ ಕಟ್ಟ ಜಾತಿಯ ಊಬ್ಬು ಸರೋಗಕ್ಕೆ ಗೊತ್ತಾದ ಒಂದು ಬಗೆಯ ಔಷಧ ! ಇದೂ ಒಂದು ಬಗೆಯ ರಸವರ್ಗಕ್ಕೆ ಸೇರಿ ದುದು, ಇಲ್ಲಿಗೆ ಹೊಸದಾಗಿ ಬಂದಿರುವ ರಾಜವೈದ್ಯರಲ್ಲಿಯೇ ಇರುವುದು ; ಅವರೇ ನನಗೆ ಇದನ್ನು ಕೊಟ್ಟರು. ಅವರ ಬಳಿಯಲ್ಲಿ ಇದರ ಮಹತ್ವವನ್ನು ತಿಳಿಯುತ್ತ ಕುಳಿತಿದ್ದುದರಿಂದಲೇ ಇಷ್ಟು ಹೊತ್ತು ಕಳೆದುಹೋಯಿತು. ಗೋಪಾಲ-ಅದೆಲ್ಲಿದೆ ? ತೋರಿಸಿರಿ ನೋಡುವ ! ಯಮುನೆಯು ಬಗಲೊಳಗೆ ಅಡಗಿಸಿಕೊಂಡಿದ್ದ ಚಿಕ್ಕ ಪೆಟ್ಟಿಗೆಯೊಂ ದನ್ನು ಹೊರತೆಗೆದು, ಅದರೊಳಗಿಂದ ಹಿತ್ತಾಳೆಯ ಭರಣಿಯನ್ನೂ, ಅದರ ಮೇಗಡೆಗೆ ಸುತ್ತಿದ್ದ ಕಾಗದಗಳನ್ನೂ ದೂರದಲ್ಲಿಯೇ ತೋರಿಸಿ, ನೋಡು, ಇದನ್ನು ಈಗಲೇ ತೆಗೆಯಬಾರದೆಂದು ಹೇಳಿರುವರು. ಅವರು ಹೇಳಿರುವ ಅಧವಾ ಈ ಸೂಚೀಪತ್ರದಲ್ಲಿ ಕಾಣಿಸಿರುವ ನಿಯಮವನ್ನು ಅನುಸರಿಸಿಯೇ ಇದನ್ನು ಉಪಯೋಗಿಸಬೇಕಂತೆ ! ಇಲ್ಲವಾದರೆ ಅವಗುಣವೇ ಕಂಡು ಬರುವದಂತೆ !! ಗೋಪಾಲ--ಇದನ್ನು ಯಾರಿಗಾಗಿ ತಂದಿರಿ ? ಈ ಮನೆಯಲ್ಲಿ ಈ ರೋಗಿ ಗಳಾದರೂ ಯಾರು ? ಯಮುನೆ-ನನಗಾಗಿಯೇ ತಂದೆನು. ಆದರೆ, ಈ ರೋಗದಿಂದ ನರಲು ರುವವರೆಲ್ಲರಿಗೂ ಇದನ್ನೇ ಉಪಯೋಗಿಸಬಹುದಂತೆ. ಪಾಪ !