ಪುಟ:ದಕ್ಷಕನ್ಯಾ .djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತಿ ಹಿ – ಷಿ ಣಿ ನಿನ್ನ ಕೆಲಸಕ್ಕೆ ಅಡ್ಡಿಯಾದೆನೇನೋ ? ಇನ್ನು ತಡೆಮಾಡಿಕೊಳ್ಳದೆ ಹೊರಡು. ಗೋಪಾಲನು ತಲೆದೂಗುತ್ತ ಹೊರಟುಹೋದನು. ಯಮುನೆ-ಪ್ರಹರಿಗಳ ಕಡೆ ತಿರುಗಿ, ಉರ್ಸ್ಮಾ ! ಹೇಳಿದುದೆಲ್ಲವೂ ನೆನಪಿರಲಿ ; ರಾತ್ರಿ ಏಳುಗಂಟೆಯಾಗಿದ್ದರೂ, ಜಮೀನ್ದಾರರೇನೋ ಇನ್ನೂ ಮನೆಗೆ ಬಂದಿಲ್ಲ, ಅವರ ಮನಸ್ಸು ಬರುಬರುತ್ತ ವಿರಕ್ತಿ ಯನ್ನೇ ಹೊಂದುತ್ತಿದೆ. ಗೃಹಸ್ವಾಮಿಯ ಉಪೇಕ್ಷೆಯಿಂದ ಗೃಹಕ್ಕೆ ಹಾನಿ ತಟ್ಟದಂತೆ ನೋಡಿಕೊಳ್ಳುವ ಭಾರವು, ನಿಮ್ಮ ಮೇಲೆ ಬಿದ್ದಿದೆ. ನೋಡಿರಿ, ನೀವು ಲಂಚಕ್ಕಾಗಲೀ ಇತರ ದುರಾ ಚಾರಕ್ಕಾಗಲೀ ಮರುಳಾಗುವುದಾದರೆ, ನರಕದಲ್ಲಿಯೂ ನಿಮಗೆ ಸ್ಥಳವಿರುವುದಿಲ್ಲ, ಇನ್ನು ನಿಮ್ಮ ಅಲ್ಲಾ ದೇವರಾಣೆಗೂ ಸತ್ಯ ವನ್ನು ವಿಾರದಿರಬೇಕು. ಉರ್ಸ್ಮಾ-ಅಮ್ಮ! ಅಲ್ಲಾ ದೇವರಾಣೆ,-ಖುರಾನಿನಾಣೆ ನಾವು ಮಾತಿಗೆ ತಪ್ಪಲಿಕ್ಕಿಲ್ಲ. ನಮ್ಮಲ್ಲಿ ಮೋಸಕ್ಕೆ ಜಾಗವಿಲ್ಲ ; ಧೈರ್ಯವಾಗಿರಿ. ಎಲ್ಲಾ ಭಾರವೂ ನಮ್ಮ ದಿರಲಿ. ಯಮುನೆ-ಹೂಂ ! ನೋಡಿರಿ, ಇದೀಗ ನಿಮ್ಮ ಗುಣಕ್ಕೆ ಬೆಲೆಕಟ್ಟುವ ಮಾತು, ಇದೇ ನಿಮ್ಮಲ್ಲಿ ಸ್ಥಿರವಾಗಿರಬೇಕಾದುದು, ಈಗ ನಾನು ತಂದಿರುವ ಮೋಸದ ಮದ್ದಾದರೂ, ನಿಮ್ಮಂತವರ ಸಹಾಯದಿಂ ದಲೇ, ಪ್ರಯೋಜನಕ್ಕೆ ಬರಬೇಕು ; ಇಲ್ಲದಿದ್ದರಾಗದು. ಇನ್ನು ಹೆಚ್ಚು ಮಾತು ಬೇಡ' ಎಂದು ಹೇಳಿ ಹೊರಟುಹೋದಳು. (ಪ್ರ ತ್ಯುತ್ಪನ್ನ ಮತಿಯರಲ್ಲಿರುವ : ಮೋಸದಮದ್ದು' ಎಂತಹದೆಂಬು ದನ್ನು ಯಾರೂ-ಹೇಗೂ ಮುಂದಾಗಿ ಹೇಳಲಾರರಲ್ಲವೆ !)