ಪುಟ:ದಕ್ಷಕನ್ಯಾ .djvu/೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ಸ ತಿ ಹಿ ತ ಷಿ ಣಿ ಇದರಲ್ಲಿಯೂ ನಾಲ್ಕಾರು ಕಿರುಮನೆಗಳೂ, ಮಧ್ಯದಲ್ಲಿ ಮಂಟಪವೂ ಇರುವುವು. ಎಲ್ಲಕ್ಕೂ ಬಲವಾದ ಬಾಗಿಲುಗಳುಂಟು. ಇಲ್ಲಿಯೇ ಜಮಾ ಸ್ಟಾರನ ಸ್ವಂತ ಬರೆವಣಿಗೆಗೂ, ಮಲಗುವುದಕ್ಕೂ, ಸಮಾಲೋಚಿಸಲಿಕ್ಕೂ, ಇನ್ನೂ ಇತರ ಕಾಲಕ್ಷೇಪಗಳಿಗೂ ಬೇರೆಬೇರೆ ಸ್ಥಳಗಳೇರ್ಪಟ್ಟಿರುವುವು. ಜಮೀನ್ದಾರನು, ಸ್ನಾನ ಮತ್ತು ಭೋಜನಕಾಲಗಳನ್ನು ಬಿಟ್ಟು ಉಳಿದ ಕಾಲದಲ್ಲೆಲ್ಲಾ ಇಲ್ಲಿಯೇ ಇರುವನು. ಈ ಓಲಗಶಾಲೆಯಂತೆಯೇ ಇದಕ್ಕೆ ಇದಿರಾಗಿ ಲಕ್ಷ್ಮಿನಿಲಯ ಕೂ, ಮಧ್ಯಭವನಕ್ಕೂ ನಡುದಾಯದಲ್ಲಿ ಮತ್ತೊಂದು ಮಂಟಪವಿರು ವುದು, ಅದು, ದಿವಾನ ಮತ್ತು ಕರಣಿಕರೂ ಇತರ ಆಶ್ರಿತವಿದ್ಯಾರ್ಥಿ ವರ್ಗವೂ ಕುಳಿತು, ಲೆಕ್ಕ ಪತ್ರಗಳು ಬರೆಯಲಿಕ್ಕೂ, ಓದಲಿಕ್ಕೂ, ಗೊ ತಾದ ಸ್ಥಳವಾಗಿರುವುದು, ಮನೆಯ ಮುಂಗಡೆಯಲ್ಲಿಯೂ ಹೂದೋಟ ವಿರುವುದು, ತೋಟದ ಸುತ್ತಲೂ ಬಹುದೂರದವರೆಗೆ ಪ್ರಾಕಾರದ ಗೋಡೆಗಳು ಆವರಿಸಿಕೊಂಡಿರುವುವು. ಲಕ್ಷ್ಮಿನಿಲಯಕ್ಕೂ, ವಿಲಾಸಭವನಕ್ಕೂ ಸಂಧಿಸಿರುವ ಮಧ್ಯಭವ ನದ ಮೇಗಡೆಯ ಉಪ್ಪರಿಗೆಯೇ, ಅಂತಃಪುರಾಂಗನೆಯರ ವಿಹಾರಕ್ಕೆಂದು ಬಿಟ್ಟಿರುವ ಬಿಸಿಲುಮಾಳಿಗೆಯಾಗಿದೆ. ಈ ಮಾಳಿಗೆಯು, ಮನೆಯಮುಂದಿನ ಪ್ರಾಕಾರದ ಬಾಗಿಲವರೆಗೂ, ಕಬ್ಬಿಣದ ಕಂಬಗಳನ್ನು ನೆಟ್ಟು, ಮೇಗಡೆ ಬಲವಾಗಿ ಸೇತುವೆಯಂತೆ ಕಟ್ಟಲ್ಪಟ್ಟಿರುವುದರಿಂದ, ಹೆಂಗುಸರು, ಬೀದಿ ಯಲ್ಲಿ ನಡೆವ ವಿನೋದಗಳನ್ನು ನೋಡಲಿಕ್ಕೂ ಅನುಕೂಲವಾಗಿರುವುದು. ಈ ಮಾಳಿಗೆಯಲ್ಲಿ ಉದ್ದಕ್ಕೂ ನಾನಾಬಗೆಯ ಬಣ್ಣದಗಿಡಗಳೂ, ಹೂಬ ಳ್ಳಿಗಳೂ ಶೇಖರಿಸಲ್ಪಟ್ಟಿರುವುವು ಈ ಬಗೆಯಲ್ಲಿ ತುಂಬಿ ತುಳುಕುತ್ತಿರುವ ಬಗೆಬಗೆಯ ಹೂಗಳ ಕಂಪಿನಿಂದ ಮಾರುತನೂ, ಇಲ್ಲಿಗೆ ಆಯಾಸಪರಿಹಾರ ಕ್ಕೆಂದು ಬರುವವರನ್ನು ಉಲ್ಲಾಸಗೊಳಿಸುತ್ತಿರುವನು. ಇದಕ್ಕೆಂದೇ ಬಂ ದಿದ್ದಾ ಸ್ವರ್ಗಸುಂದರಿಯ ದರ್ಶನಲಾಭವು, ಯುವಕನನ್ನು ಭ್ರಾಂತನ ಸ್ನಾಗಿ ಮಾಡಿದ ಸ್ಥಲವಾದರೂ ಇದೇ ಸರಿ.