ಪುಟ:ದಕ್ಷಕನ್ಯಾ .djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೧೯ « ಸಾಕು ; ಸಂಗ್ರಹವೆಂದು ಹೇಳಿದುದೇ ಇಷ್ಟಾಯಿತು. ಇನ್ನು ಕಧಾಭಾಗವು ಮುಂದಾಗಲಿ.” ಪ್ರಿಯಸೋದರಿಯರೇ ! ಏಸು ? ಆ ಅಪರಿಚಿತ ತರುಣನ ಚಿತ್ತಾಕರ್ಷಣಮಾಡಿದ ಮನೋ। ಮೋಹಿನಿಯನ್ನು ನೀವೂ ನೋಡಬೇಕೆಂಬರಲ್ಲವೋ ? ಚರಿತ್ರೆಗೆ ಮುಖ್ಯ ಪಾತ್ರವನ್ನೇ ಉಪೇಕ್ಷಿಸಬಹುದೋ ? ಅಲ್ಲದೆ ಸ್ವಜಾತ್ಯಭಿಮಾನದಿಂದೇ। ನಾದರೂ ಮತ್ಸರಿಸುವಿರೋ ? ಕೂಡದು ; ಹಾಗೆಂದೂ ಮಾಡಕೂಡದು. ನಿಮ್ಮ ಹೃತ್ಥೋಶದಲ್ಲಿ ನಿಷ್ಕಲಂಕವಾದ - ದೈವೀಪ್ರೇಮ' ವೊಂದೇ ನೆಲಸಿದ್ದು, ಅದು ನಿಮ್ಮ ಸೋದರಿಯರೆಲ್ಲರನ್ನೂ ಆದರಿಸುವಂತಿರಬೇಕು !! ಇಷ್ಟು ಮಟ್ಟಿಗಾಗಿದ್ದರೆಯೇ, ನಿಮ್ಮಲ್ಲಿ ಸ್ತ್ರೀಜನಕ್ಕೆ ಉಚಿತವಾದ ಕೋಮು ಅತೆಯುಂಟೆಂದು ಹೇಳಬಹುದು, ಹಾಗಿಲ್ಲದೆ ಹೇಳಲಾಗದು. ಹಾಗಿದ್ದರೆ, ಇತ್ತ ಬನ್ನಿರಿ ; ವಿಲಾಸಮಂದಿರದ ಈ • ಚಿತ್ರಶಾಲೆ ' ಯನ್ನು ನೋಡಿರಿ ! ನೆಲದಮೇಲೆ ಹಾಸಿರುವ ರತ್ನಗಂಬಳಿಯೂ, ಗೋಡೆಗೆ ತಗಲಿಸಲ್ಪಟ್ಟಿರುವ ಚಿತ್ರಗಳೂ, ಸಾಲಾಗಿ ನಿಂತಿರುವ ಬೀರುಗಳೂ, ಸುತ್ತಲೂ ಕುರ್ಚಿಗಳಿಂದಾಮಸಲ್ಪಟ್ಟು, ನಡುವೆ ನಿಂತಿರುವ ದೊಡ್ಡಮೇ ಜವೂ, ಮೇಜಿನಮೇಲೆ ಬೇರೆಬೇರೆಯಾಗಿ ಇರಿಸಲ್ಪಟ್ಟಿರುವ ಚಿತ್ರ ಕೆಲಸದ ಸಾಮಗ್ರಿಗಳೂ, ಹಲಗೆಗಳೂ, ಮತ್ತೂ ಹೆಣಿಗೆ ಕಸೂತಿ ಕೆಲಸಕ್ಕೆ ಬೇಕಾ ಗುವ ಸಾಮಗ್ರಿಗಳೂ, ಇವೆಲ್ಲಕ್ಕೂ ಮಿರುವನ್ನುಂಟುಮಾಡುವಂತೆ ಹೊಳೆ ಹೊಳೆಯುತ್ತ ಮೇಜಿನಮೇಗಡೆ ಮಧ್ಯಭಾಗಕ್ಕೆ ಸರಿಯಾಗಿ ಇಳಿಬಿಟ್ಟಿರುವ ದೀಪವೂ, ಇವೆಲ್ಲವೂ ನಿಮಗೆ ಎಷ್ಟರ ಉತ್ಸಾಹವನ್ನುಂಟುಮಾಡುವುದೋ ಒಮ್ಮೆ ಹೇಳಿರಿ ? ನೀವೂ ಇಲ್ಲಿ ಕುಳಿತು ಕೆಲಸಮಾಡಬೇಕೆಂದಿರುವಿರಲ್ಲವೇ ? ಇಲ್ಲ; ಕುರ್ಚಿಯಮೇಲೆ ಕುಳಿತು, ಮೇಜಿನಮೇಲೆ ಮೊಣಕಯೂರಿ, ಚಿಗುರಂತೆ ಹೊಳೆಯುತ್ತಿರುವ ಅಂಗೈಗಳನ್ನು ಎರಡು ಕೆನ್ನೆಗೂ ಮರೆಯಾ ಗಿಟ್ಟು, ಮುಂದಿದ್ದ ಚಿತ್ರದ ಹಲಗೆಯನ್ನೇ ನೋಡುತ್ತಿರುವ ಈ ರಮಣಿ