ಪುಟ:ದಕ್ಷಕನ್ಯಾ .djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೦ ಸ ತಿ ಹಿ ತೈ ಷಿ ಣಿ ಯನ್ನು ನೋಡಿ ಮುಗ್ಗರಾಗಿರುವೆವೆಂಬಿರೋ ? ಸಾಧು | ಸತಿಯರೇ ? ಸಾಧು ! ನಿರ್ಮತ್ಸರ ಪ್ರೇಮವೆಂಬುದು, ನಿಮ್ಮಲ್ಲಿಯೇ ಬಗೆಗೊಳ್ಳುತ್ತಿರ ಬೇಕು, ಆದರೆ, ಮತ್ತೆಯೂ ನೋಡಿರಿ ! ರಮಣಿಯ ವಿಶಾಲಾಕ್ಷದಿಂದ ಹೊರಹೊರಡುತ್ತಿರುವ ಆಲೋಲಕಟಾಕ್ಷವು, ಅವಳ ಸ್ವಭಾವಸಹಜಸೌಂದ ಗ್ಯಕ್ಕೆ ರಂಜನವನ್ನು ೦ಟುಮಾಡುತ್ತಿರುವುದು, ಅದು ಸಾಲದೆಂದು ಅವಳು ಧರಿಸಿರುವ ಜರತಾರಿ ಅಂಚಿನ ಗುಲಾಬಿಬಣ್ಣದ ಪಟ್ಟೇಸೀರೆಯೂ, ಆ ಎಣ್ಣೆಗೆಂಪು ಬಣ್ಣದ ಕುಪ್ಪಸವೂ, ಆ ಚಿನ್ನ ರನ್ನದ ತೊಡವುಗಳೂ ಮತ್ತಷ್ಟು ಮನೋಹರವಾಗಿ ಕಾಣುತ್ತಿವೆಯಲ್ಲವೇ ? ಇರಲಿ. ಎಷ್ಟಿದ್ದರೂ ರಮಣಿಯ ಮುಖಚಂದ್ರನನ್ನು ಇಂದು ರಾಹು, ತುಡುಕಿದಂತೆ ತೋರುತ್ತಿದೆ. ರಮಣಿಯ ಕಟಾಕ್ಷದಲ್ಲಿ ರಸವಿಷಯಗಳಾ ವುವೂ ಪ್ರಸರವಾಗುತ್ತಿಲ್ಲ, ಮಂದಗತಿಯಿಂದ ಚಿತ್ರದ ಹಲಗೆಯಮೇ ಪರಮೇಶ್ವರನೇ ಹೇಳಬೇಕು, ಹೇಗೂ ರಮಣಿಯ ಬಾಯಿಂದ-ಇದಕ್ಕಿ ನ್ನೇನು ಮಾಡಲಿ ? ಏನುಪಾಯವಿದೆ ? ಇದರ ಉದ್ದೇಶವಾವುದು ?? ಎಂಬೀ ಪ್ರಶ್ನೆಗಳೇ ಮತ್ತೆ ಮತ್ತೆಯೂ ಹೊರಬೀಳುತ್ತಿವೆ. ಆದರೇನು ? ಎಷ್ಟು ಹೊತ್ತಾದರೂ, ತಕ್ಕ ಸಮಾಧಾನವೇನೂ ದೊರೆಯಲಿಲ್ಲ. ಯೋಚಿ ಸುತ್ತಿದ್ದಂತೆಯೇ ರಮಣಿಯು, ವೃಸ್ತಳಾಗಿ ಕುಳಿತಳು. ಎಷ್ಟು ಹೊತ್ತು ಕುಳಿತಳೊ ಹೇಳುವಂತಿಲ್ಲ. ಬಲುಹೊತ್ತಿನ ಮೇಲೆ, ಹಿಂದಳಿಂದ • ಗಂಗಾಬಾಯಿ ! ನಿದ್ರಿಸು ತೀರೇನು ? ' ಎಂಬ ಕೂಗೊಂದು ಹೊರಟು, ನಿದ್ರಿಸುತ್ತಿದ್ದ ರಮಣಿಯ ಕಿವಿಯನ್ನು ಕೊರೆದುಕೊಂಡು ಹೋಯಿತು, ರಮಣಿಯು ತಲೆಯೆತ್ತಿ ನೋಡಿದಳು; ಕಿರುಮನೆಯ ಕದದ ಬಳಿಯಲ್ಲಿ, ಕಿರುನಗೆಯಿಂದ ನೋಡು ನಿಂತಿದ್ದ ಯಮುನೆಯನ್ನು ಕಂಡು, ಸ್ಥಿರಭಾವದಿಂದ ಹೇಳಿದಳು-ಏನು ? ಬಂದೆ ? ಯಮುನಾ ! ಬಾ, ಕುಳಿತುಕೊ.