ಪುಟ:ದಕ್ಷಕನ್ಯಾ .djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ود ಸ ತಿ ಹಿ – ಷಿ ಣಿ ಗಂಗಾ-ನಮ್ಮ ಆ ಆಶೆಯೊಂದರಿಂದಲೇ ಫಲವುಂಟಾಗುವುದೇನು ? ಎಷ್ಟೋ ಕಷ್ಟಗಳನ್ನು ಸಹಿಸಿ, ಪಡೆಯಬೇಕಾದ ಫಲವು, ಕಷ್ಟ ಪಡದೆಯೇ ಉಂಟಾಗಿರುವುದಲ್ಲವೇ ? ಯಮುನಾ-ಯಾವುದು ? ಗಂಗಾ-ಯಾವುದೆಂದರೆ ಈಗ ನಮಗೆ ಮಕ್ಕಳಿಲ್ಲವೆ ? ಯಮುನಾ--ನಿಮ್ಮ ಸವತಿಯ ಮಕ್ಕಳನ್ನು ಹೇಳುವಿರೋ ? ಗಂಗಾ-ಅಹುದು ; ಅವರು ಮಕ್ಕಳಲ್ಲವೋ ? ಯಮುನಾಹೇಗಾದುವು ? ಎಷ್ಟಾದರೂ ಬಿಟ್ಟೇಹೋಗಿವೆ ! ಗಂಗಾ-ಏನು ? ಬಿಟ್ಟಿದೆ ! ಹೇಗೆ ? ಯಜಮಾನರಿಗೆ ಮಕ್ಕಳೇ ಅಹು - ದಷ್ಟೆ ; ಅವರ ಮಕ್ಕಳು, ನನಗೂ ಆಗಲಾರವೋ ? ಬೇರೆಯೇ ಆಗಬೇಕೋ ? ಅವುಗಳೇ ನಮ್ಮ ವು, ಬೇರೆ ಬೇಕಾಗಿಲ್ಲ.' ಯಮುನಾ -ಹಾಗೆ ಹೇಳುವುದಾದರೂ ಮಗಳೊಬ್ಬಳೇ ! ಗಂಗಾ-ಅದೇಕೆ ? ಮಗನಿಲ್ಲವೆ ? ಯಮುನಾ-ಎಲ್ಲಿ ? ತಾಯಿ, ಕಾಲಾಧೀನಳಾದಳೆಂಬ ವರ್ತಮಾನಬಂದ ಮೂರು ನಾಲ್ಕು ತಿಂಗಳೊಳಗಾಗಿ ಮಗನೂ, ಕಾಲವಶನಾದ ನೆಂದು ವರ್ತಮಾನ ಬಂದಿತು, ಅದರ ಮೇಲೆಯೇ ಅಮ್ಮಾ ಯಾ ಯವರ ಒಲಾತ್ಕಾರಕ್ಕೆ, ಯಜಮಾನರು ಕಟ್ಟು ಬೀಳಬೇಕಾಯಿತು. ಗಂಗಾ-ಹುಬ್ಬುಗಂಟಿಕ್ಕಿ- ಯಾವ ಸುಖಸಾಧನೆಯಾಗಬೇಕೆಂದು ಮಾಡಿಕೊಳ್ಳಬೇಕಾಯ್ತು ? ಹಾಗೆಯೇ ಇದ್ದರಾಗುತ್ತಿರಲಿಲ್ಲವೇ? ಯಮುನಾ-ಹಾಗೆನ್ನಲಾದೀತೇ ? ಅವರು, ದ್ವಿತೀಯ ವಿವಾಹ ಮಾಡಿ ಕೊಂಡುದು, ಯುಕ್ತ ವಿಚಾರವೇ ಸರಿ. ಆದರೂ, ಪ್ರಯತ್ನ ಸಾಥ ಲ್ಯವೆನ್ನಿ ಸುವಂತೆ ಮಕ್ಕಳಾಗಲಿಲ್ಲ. ಆಗಿದ್ದ ಮಗನಿಗೂ ಅಪದೆಸೆ ಯುಂಟಾಯ್ತು.