ಪುಟ:ದಕ್ಷಕನ್ಯಾ .djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ಈಕೆಗೆ ಪತಿವಿಯೋಗವಾದ ಕಾಲದಲ್ಲಿ, ಪುತ್ರನು, ಇನ್ನೂ ಲೋಕಾನುಭವ ಶೂನ್ಯನಾಗಿಯೇ ಇದ್ದುದರಿಂದ « ಸಮಾಜಶಾಸನ' ವೆಂಬ ಘೋರ ವಿಪತ್ತಿಗೆ ಒಳಪಟ್ಟು, ಇವಳ ತಲೆಯು, ನುಣುಪಾಗಿಹೋಗಿತ್ತು ! ಪುತ್ರನು ಪ್ರಾಪಂಚಿಕ ಸ್ಪಿತಿ ಗತಿಗಳನ್ನು ಚೆನ್ನಾಗಿ ತಿಳಿದುಕೊಳ್ಳುವಂತಾದಬಳಿಕ, ತಾಯ ದುರವಸ್ಥೆಗಾಗಿ ವ್ಯಥೆಪಡದಿರಲಿಲ್ಲ. ಆದರೂ, ಉಪಾಯಾಂತರ ವಿಲ್ಲದೆ, ಆ ವಿಚಾರದಲ್ಲಿ ಏನನ್ನೂ ಮಾಡಲಾರದೆ ಮೌನವನ್ನೇ ಹಿಡಿದಿರಬೇ ಕಾಯ್ತು, ಅದು ಹೇಗಾದರೂ ಇರಲಿ, ಸದ್ಯಸ್ಥಿತಿಯಲ್ಲಿ ಚಂದ್ರಮತಿಯು, ಉಟ್ಟಿದ್ದುದು ಬಿಳಿಯಬಟ್ಟೆ, ಕೊರಳುತುಂಬ ತುಳಸೀಮಣಿ, ಹಣೆಯಲ್ಲ ಸಣ್ಣ ಅಕ್ಷತೆಯುಚುಕ್ಕಿ, ಕಯ್ಯಲ್ಲಿ ಜಪಸರ, ನೋಡುವವರಿಗೆಲ್ಲಾ ಇವಳಲ್ಲಿ ಪೂಜ್ಯ ಭಾವನೆಯುಂಟಾಗುವಂತೆ ಮಾಡುತ್ತಿರುವ ತೇಜಸ್ಸು, ಸರ್ವಾಂಗದ ಲ್ಲಿಯೂ ವ್ಯಾಪಿಸಿಕೊಂಡಿರುವುದು. ಆದರೆ, ಸುಹೃದರೇ ! ನಮ್ಮ ಜಮೀನ್ದಾರ ತಾರಾಪತಿರಾಯನನ್ನು ಈ ಕಾಲದ ಮಹಾಶಯರಂತೆ ತಿಳಿಯಬೇಡಿರಿ ? ಈ ಕಾಲದ ನಾಗರಿಕ ತೆಯ ತತ್ವವೆನ್ನುವುದು : ಜೀರ್ಣವಸ್ತುಗಳನ್ನು ಕಾಲಿಂದೊಗೆದು, ನೂತನ ವಸ್ತ್ರಗಳನ್ನು ಧರಿಸಬೇ ಕೆಂದು ಹೇಳುವ ನೀತಿಮಾತ್ರವಾಗಿದೆ, ಆ ನೀತಿ ಯೆಂಬುದರ ತತ್ವಾರ್ಧವೇನೆಂಬುದನ್ನು ಯೋಚಿಸುವುದು ಹಾಗಿರಲಿ ; ಹಳೆ ಯದನ್ನೊಗೆದು, ಹೊಸದನ್ನು ಹಿಡಿಯಬೇ' ಕೆಂಬ ಒಂದೇಅರ್ಧದಿಂದ ಕೆಲ ವುಮಂದಿ ಮಹಾಶಯರು, ತಮ್ಮನ್ನು ಹೆತ್ತ ತಾಯ್ತಂದೆಗಳನ್ನಾ ದರೂ, ಕಡೆಗಣಿಸುತ್ತಿರುವರು ! ಏಕೆಂದರೆ : ಕಯ್ಯಲ್ಲಾಗದ ಈ ಮುದಿಹದ್ದುಗ ಆಂದ ಕೆಲಸವೇನಾದಿತೆಂ' ದು, ಬಹು ಧಾರಾಳಬುದ್ದಿಯಿಂದ ಹೇಳುವರು. ಅದು ಸಾಲದೆಂದರೆ, ಅಧಿಕಾರಿಯಾದವನೊಬ್ಬನು, ವೈದಿಕನಾಗಿರುವ ತನ್ನ ವೃದ್ಧ ಪಿತನನ್ನು , ಪಿತನೆಂದು ಹೇಳಿಕೊಳ್ಳುವುದು ಕೂಡ, ಅಪಮಾನಕರವಂತೆ! ಇದಲ್ಲವೇ ಪಿತೃಭಕ್ತಿ ? ಅಷ್ಟೇ ಅಲ್ಲ ! ಅಂತವನ ತಾಯಿಯಾದವಳಿಗೆ ದು ರ್ದೈವದಿಂದ ಪತಿವಿಯೋಗವಾಯ್ತಂದರೆ ಹೇಳುವುದೇನು ? ಅವಳ ಪತಿ