ಪುಟ:ದಕ್ಷಕನ್ಯಾ .djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತಿ ಹಿ ತ ಷಿ ಟೆ

    • ?

o ದೇವನು ಕಷ್ಟಪಟ್ಟು, ಸಂಪಾದಿಸಿಟ್ಟ ಆಸ್ತಿಯೆಲ್ಲಕ್ಕೂ, ಈ ನಾಗರಿಕನೆನ್ನಿ ಸಿ. ಕೊಳ್ಳುವ ಮಗನೇ, ಸ್ವಾಮಿಯಾಗತಕ್ಕವನು, ಈತನು, ಕೊಡುವ ಹಿಡಿಭಿ ಕೈಗೆ ಕಯ್ಯೋಡ್ಡಿ, ಜೀವಿಸುವುದು ಮತ್ತು ಈ ಮಗನ ಹೆಂಡತಿಗೆ ತೊತ್ತಾ ಗಿರುವುದು, ಇವೆರಡು ವೃತ್ತಿಯಲ್ಲಿಯೇ ಇವಳಿಗೆ ಹಕ್ಕು ನಿಲ್ಲುವುದಂತೆ ! ಮತ್ತಾವುದಕ್ಕೂ ಅವಳಲ್ಲಿ, ಸ್ವಾತಂತ್ರ್ಯವೇ ಇಲ್ಲವಂತೆ ! ನಮ್ಮ ಸುಷ್ಯ ದ್ವಾ ತೃವರ್ಗವು ಮಾತ್ರ, ಎಂದೆಂದಿಗೂ ಹಾಗೆ, ಆಚರಿಸಬಾರದೆಂಬುದೇ ನಮ್ಮ ಭರವಸೆ, ಹೆತ್ತ ತಾಯಿಯರನ್ನು, ತಮ್ಮ ಜನ್ಮದಾತೆಯರನ್ನು , ಪ್ರತ್ಯ ಕ್ಷದೇವತಾಸ್ವರೂಪಿಯರನ್ನು, ಯಾವಪುತ್ರರು, ತ್ರಿಕರಣಶುದ್ದಿಯಿಂದ ಸೇ। ವಿಸುವರೋ, ಅವರೇ ಸುಪುತ್ರರು; ಅವರೇ ಸಿದ್ದಾರ್ಥಿಗಳು ; ಅವರೇ ನಮ್ಮ ನಿರಂತರದ ಧನ್ಯವಾದಗಳಿಗೂ ಪಾತ್ರರಾದವರು. ವಿವರಣೆಯಿಂದೇನು ? ಪ್ರಕೃತದಲ್ಲಿ, ನಮ್ಮ ಧನ್ಯವಾದಕ್ಕೆ ಪಾತ್ರನಾದವನೆಂದರೆ, ತಾರಾ ಪತಿಯೇ ಸರಿ! ಈತನು ತಾಯನ್ನು ಮನದಲ್ಲಿಯಾದರೂ ಕಡೆಗಣಿಸ ಲಾರನು. ತಾಯಿಯೇ ಈತನಿಗೆ ಇಷ್ಟ ದೇವತೆ, ತಾಯಿಯ ಇಷ್ಟ ವನ್ನು ನಡೆಯಿಸುವುದೇ ಈತನ ತಪಶ್ಚರ್ಯೆ, ಈ ಮೂತೃದೈವವನ್ನು ಬಿಟ್ಟು, ಇವನಿಗೆ ಮಾವ ದೈವದಲ್ಲಿಯ 'ಮನಸ್ಸು ಹೋಗುತ್ತಿರಲಿಲ್ಲ ಈತನು ಎಷ್ಟೇ ಸಂಕಟದಲ್ಲಿ ಸಿಕ್ಕಿ ತಪಿಸುತ್ತಿರಲಿ, ಮಾತೃದೇವತೆಯ ಕರುಣಾ ಮೃತವೂರಿತವಾದ ಕಂಠವು, ಕಿವಿಗೆ ಮುಟ್ಟಿತೆಂದರೆ ಸಾಕು, ಉತ್ಸಾಹ ಶಕ್ತಿಯಿಂದ ದಿಗ್ಗನೆದ್ದು ಬಂದು, ತಾಯಿಯಬಳಿಯಲ್ಲಿ ನಿಲ್ಲುವನು. ಈ ಬಗೆಯ ಅನ್ಯಾದೃಶವಾದ ಭಕ್ತಿಯಿಂದೆಯೇ, ಈ ಮಾತೆಯ ಸುಖಸಮಾಧಾ ನಕ್ಕೆಂದು, ಯಮುನೆಯನ್ನು, ಸೇವಾ ಕಾರ್ಯದಲ್ಲಿ ಕಟ್ಟುಮಾಡಿರುವನು. ಚಂದ್ರಮತಿಯೆಂದರೆ, ಸಾಮಾನ್ಯ ಸ್ತ್ರೀಯಾಗಿಲ್ಲ! ಅವಳಲ್ಲಿರುವ ಧಮ್ಮ ಶ್ರದ್ಧೆ, ಸತ್ಯನಿಷ್ಠೆ, ಭೂತದಯೆ, ದೈವಭಕ್ತಿ, ಇತ್ಯಾದಿ ಸದ್ಗುಣಗಳು ಅನ್ಯಾದೃ ಶಗಳಾಗಿರುವುವು. ಈ ಸದ್ಭಾವನಾ ಪ್ರಭಾವವೇ, ಯಮುನೆಯು ಇವ ಇನ್ನು ಪರಮೇಶ್ವರಿಯೆಂದೇ ಭಾವಿಸಿ, ಸೇವಿಸುವಂತೆ ಮಾಡಿರುವುದು.