ಪುಟ:ದಕ್ಷಕನ್ಯಾ .djvu/೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನಾ. ಯಮುನೆಯು ಚಂದ್ರಮತಿಗೆ ಸವಿಾಪಬಂಧುವಲ್ಲವಾದರೂ, ಶೀಲ-ಸತ್ಯ-ಕರ್ತವ್ಯದಕ್ಷತೆಗಳೆಂಬ ತನ್ನ ಸದ್ವರ್ತನೆಗಳಿಂದ ಚಂದ್ರಮತಿಗೆ ಪರಮಾಪ್ತ ಬಂಧುವಾಗಿರುವಳು, ತಾರಾಪತಿರಾಯನೂ, ಇವಳನ್ನು ತನ್ನ ಒಡಹುಟ್ಟಿದವಳೆಂದೇ ಭಾವಿಸಿ, ಸನ್ಮಾನಿಸುತ್ತಿರುವನು. ಇವಳಲ್ಲದೆ, ಚಂದ್ರಮತಿಯ ಕೃತ್ತಾಪವನ್ನು ಸಮಾಧಾನಪಡಿಸಲು, ಮತ್ತಾರಿಗೂ ಶಕ್ತಿ ಸಾಲದು, ಆ ಮಾತು ಹಾಗಿರಲಿ, ಇಂದು ಚಂದ್ರಮತಿಗೆ, ಬಹು ದಿನಗಳಿಂದ ತಡೆದಿದ್ದ ಸುಸಾ (ಸೊಸೆ) ವಿಯೋಗವ್ಯಸನವು, ಮತ್ತೆ ಕಾಣಿ ಸಿಕೊಂಡಿರುವುದು ! ಪುತ್ರನ, ಪೂರ್ವದ ವೈಭವಸ್ಸಿತಿಯ, ನೆನಪಿಗೆ ಬಂದು, ಇವಳ ಮನಸ್ಸನ್ನು ತುತ್ತು ಮುರಾಗುವಂತೆ ಮಾಡಿರುವುದು. ಮನದಳಲನ್ನು ತಡೆಯಲಾರದೆ, ಮೈಮರೆದು ಹಲಬುವಂತಾಗಿರುವುದು, ಯಮುನೆಯ ಮುಂದೆ ಕುಳಿತು ಸಮಾಧಾನ ಮಾಡುತ್ತಿರುವಳು ! ಆದ ರೇನು ? ಇನ್ನೂ ಸಮಾಧಾನವಾಗಿಲ್ಲ, ಚಂದ್ರಮತಿಯು, ಬಾರಿಬಾರಿಗೂ ತಲೆಯೆತ್ತಿ ದೈನ್ಯದಿಂದ,-ಅಯ್ಯೋ, ಸುನಂದಾ ! ನೀನೆಲ್ಲಿರುವೆ ? ತಾಯಿ! ನೀನು ಹೋಗಿ, ನಿನ್ನ ಮಕ್ಕಳೂ ಮರೆಯಾಗಿ, ನಾನು ಜೀವಿಸುತ್ತಿರ ಬೇಕೇ ? ತವರ್ಮನೆಗೆಂದು ಹೋದವಳು, ಒಂದೇ ಬಾರಿಗೆ, ಎಲ್ಲರನ್ನೂ ತೊರೆದು, ಹೊರಟುಹೋಗಬಹುದೇ ? ಮತ್ತೆ ನೋಡಬೇಕೆಂದು ಅತ್ತುಅತ್ತು ಸಾಯುತ್ತಿದ್ದರೂ, ಕಾಣಿಸಿಕೊಳ್ಳದಿರುವುದೇ? ” ಎಂದೀಸರಿಯಾಗಿ ಮನಬಂದಂತೆ ಹಲಬುತ್ತಿದ್ದಳು. ಯಮುನೆಗೆ ಮುಂದೆ, ಸಹಿಸಲಾಗಲಿಲ್ಲ. ಕೂಗಿಹೇಳಿದಳು- ಅಮ್ಮಾಯಾ ! ಅಳಬೇಡಿ ! ಅಳಬೇಕಾದುದೇನೂ ಆಗಿಲ್ಲ, ತಾಳ್ಮೆಯನ್ನು ತೆಗೆದುಕೊಳ್ಳಿರಿ.' ಚಂದ್ರಮತಿ-ದುಃಖವನ್ನು ತಡೆಗಟ್ಟಿ, ಗದ್ದ ದಸ್ವರದಿಂದ-ಯಮುನಾ ! ಹೇಗೆಸಹಿಸಲಿ ? ಹೇಳು ! ಮಗನು ಜೋಗಿಯಾಗಿ, ಯಾವಾಗ ನೋಡಿದರೂ, ಸುಖಲೇಶವಿಲ್ಲದೆ ಮರುಗುತ್ತಿರುವನು, ಸೊಸೆಯಾದ ವಳು ಒಂಟಿಯಾಗಿಯೇ ಹಗಲಿರಳೂ ಕೊರಗುತ್ತಿರುವಳು. ಇದನ್ನು