ಪುಟ:ದಕ್ಷಕನ್ಯಾ .djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ 3 ಹಿತ್ಯ ಷಿ ಣಿ ನೋಡಿಯೂ ಈ ಹಾಳು, ಹೆತ್ತ ಒಡಲನ್ನು ಹೇಗೆತಾನೇ ಹಿಡಿದುಕ ಟೈಲಿ ? ಮಗನಿಗೆ ಮತ್ತೆ ಮಕ್ಕಳಾಗಲಿಲ್ಲ; ಆಗಿದ್ದ ಮಕ್ಕಳೂ ಉ ಳಿಯಲಿಲ್ಲ, ಇನ್ನು ಸುಖಸಂಗತಿಯ ಆಶೆಯಾದರೂ, ಇರುವುದೇ? ಯಮುನೆ-ತಾಯಿಾ ! ಅಳಬಾರದು, ತಮ್ಮ ಮಗನ ಸುಖ-ಸಮಾಧಾ ನಗಳಿಗೆ ಕೊರತೆಯಿಲ್ಲ. ಚಂದ್ರಮತಿ-ಬೆದರಿ ನೋಡುತ್ತ ಯಮುನೆ ! ಏನಿದು ? ಕನಸೋ ? - ನಿಜವಾಗಿಯೂ ಹೇಳುತ್ತಿರುವೆಯೋ ? ಇನ್ನು , ತಾರಾಪತಿಯ ಅದೃಷ್ಟದಲ್ಲಿ ಸುಖವೂ, ಬರೆದಿದೆಯೋ ? ನಿಜವಾಗಿ ಹೇಳು ?' ಯಮುನೆ-ಕನಸಲ್ಲ ; ನಿಜವಾಗಿಯೂ ಹೇಳುತ್ತಿರುವೆನು ಸಹಧರ್ಮಿಣಿ, ಸವಿಾಪದಲ್ಲಿದ್ದೂ ಸುಖಕ್ಕೆ ಕೊರತೆಯೇನು ? ಚಂದ್ರಮತಿ-ವಿಸ್ಮಯ ಕೌತುಕಗಳಿಂದ : ಯಮುನೆ ! ನೀನೇನುಹೇಳು ದೆಯೋ, ನನಗೆ ಗೊತ್ತಾಗುತ್ತಿಲ್ಲ, ಗಂಗೆಯು, ಇಲ್ಲಿಗೆ ಬಂದು, ೮ ವರ್ಷಗಳಾದರೂ, ಒಂದುದಿನವಾಗಲಿ ಗಂಡಹೆಂಡಿರು, ವಿನೋ ದದಲ್ಲಿದ್ದುದನ್ನು ನಾನು, ನೋಡಿದುದಿಲ್ಲ, ಮಗನಿಗೆ ಸುಖ-ಸಮಾ ಧಾನದ ವಿಷಯಗಳಲ್ಲಿ ಹೇಳಹೋದರೆ, ಮೊದಲಹೆಂಡತಿಯ ಗುಣ ಗಳನ್ನೇ ಎತ್ತಿ ಹೇಳಿ, ಕಣ್ಣೀರ್ಗರೆದು, ಅಲ್ಲಿ ನಿಲ್ಲದೆ ಹೊರಟುಹೋಗು ವನು, ಸುನಂದೆಯ ಸ್ಮರಣೆಯು, ಶುದ್ಧಾಂಗವಾಗಿ ಅಳಿಸಿಹೋಗು ವವರೆಗೂ, ನಾನು ಮತ್ತೊಂದು ವ್ಯಕ್ತಿಯಲ್ಲಿ ಸರಸವನ್ನು ಬೆಳೆಯಿ ಸಲಾರೆನು ?” ಎಂದು ಮುಕ್ತ ಕಂಠದಿಂದ ಹೇಳುತ್ತಿರುವನು. ಇದ ಕಿನ್ನೇನು ಹೇಳಲಿ ? ಯಮುನಾ-ಕಿರುನಗೆಯಿಂದ : ಸುನಂದಾದೇವಿಯ ಸದ್ಗುಣಗಳ ಉಜ್ವ ಲಸ್ವರೂಪವು, ಹೇಗೂ ಮಲಿನವಾಗುವಂತಿಲ್ಲ ಹಾಗೂ, ಯಾವ ಮೂರ್ತಿಯ ನೆನಪು, ಮರೆಯಾಗಬೇಕೆನ್ನು ವುದೋ, ಅದೇ ಮೂರ್ತಿ ಯೇ, ಇದಿರಾಗಿ ಬಂದು ನಿಂದರೆ, ಹೇಳುವುದೇನು ? ಅಮ್ಮಾ ಯಾ!