ಪುಟ:ದಕ್ಷಕನ್ಯಾ .djvu/೬೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೨ ಸ ತಿ ಹಿ ತೃ ಷಿ ಣಿ ಗಂಗೆ-ನಾಳೆಯಾಗುತ್ತಿದ್ದರೆ, ಈಗಲೇ ಬರುತ್ತಿರಲಿಲ್ಲ. ತಾರಾಪತಿ-ಹೇಗೂ ಇರಲಿ, ಈಗ ನನಗೆ ಹೇಳಿ ಕೇಳಲು ವೇಳೆಯಲ್ಲ. ಇಷ್ಟವಿದ್ದಲ್ಲಿ, ಬೇಕಾದವರಲ್ಲಿ ಹೇಳಬಹುದು. ಗಂಗೆ ತಿರಸ್ಕಾರದಿಂದ ನೋಡುತ್ತ' ಕೈಹಿಡಿದ ಗಂಡನೇ ಹೆಂಡತಿ ಯನ್ನು ಹೋಗೆನ್ನುವ ಕಾಲದಲ್ಲಿ, ಹೆರವರಲ್ಲಿ ಹೇಳಬೇಕಲ್ಲವೇ ? ಆದೀತು ! * ಪ್ರಾಣ ಸಂಕ ಪವಾದರೆ ನೇಣುಹಾಕಿಕೊಳ್ಳಿ' ಎಂದು ಹೇಳುವಂತಾಯ್ತು, ನನ್ನ ದುರದೃಷ್ಟಕ್ಕೆ ಯಾರೇನನ್ನು ಮಾಡುವರು ? ತಾರಾಪತಿ-ಕಿರುನಗೆಯಿಂದ-* ಅಷ್ಟರ ಪ್ರಾಣಸಂಕಟವೇನುಬಂದಿದೆ ? ಗಂಗೆ-ಪ್ರಾಣಹೋದರೆ, ನೆಮ್ಮದಿಯಾದೀತು. ನಿಮಗೇನೋ ವಿನೋದ ವಾಗಿದೆ ; ನೀವು ನಗುತ್ತಿರುವಿರಿ, ನನ್ನ ಹೊಟ್ಟೆಯಲ್ಲಿ ಉರಿಯೇ ಇುತ್ತಿರುವುದು ; ನಿಮಗೇನು ಗೊತ್ತು ? ನನ್ನ ಉಡುವು, ತೊಡ ವುಗಳೂ ; ಕಷ್ಟ ಪಟ್ಟು ಹಾಕಿದ ಕಸೂತಿ, ಹೆಣಿಗೆ ಸಾಮಾನು ಗಳೂ ಕಳುವಾಗಿಹೋಗಿವೆ. ತಾರಾಪತಿ-ಅಷ್ಟೇಯೋ ? ಮತ್ತೇನಾದರೂ ಉಂಟೋ ? ಗಂಗೆ-ಇನ್ನೂ ಹೋಗಬೇಕೇ ? ಇಷ್ಟು ಸಾಲದೇ ? ತಾರಾಪತಿ-ಹೋಗುವುದೆಲ್ಲವೂ ಹೋಗಲಿ ; ಅದೃಷ್ಟವನ್ನು ಯಾರೂ ಕೊಂಡುಹೋಗಲಾರರು, ಹೋದ ವಸ್ತುಗಳೊಡನೆಯೇ ಹೋಗು ವವರಾರು ? ಇದಕ್ಕೆ ಅತ್ತು ಹೊಂದ್ದುವ ಲಾಭವೇನು ? ಗಂಗೆ-ಹಾಗೆಂದು ಸುಮ್ಮನಿರಲಾದೀತೇ ? ತಾರಾಪತಿ-ಮತ್ತೇನನ್ನು ಮಾಡಬೇಕು ? ಆಗುವುದು, ಹೇಗಿದ್ದರೂ ತಪ್ಪುವುದಿಲ್ಲ, ನನ್ನ ಕೈಪೆಟ್ಟಿಗೆಯ ಕಾಗದಪತ್ರಗಳೂ, ಹೋ ದುವು. ನಾನೇನು ಮಾಡಿದೆನು ? ಲಭ್ಯವಿಲ್ಲದುದು ಹೋಗಲೆಂದು ಸುಮ್ಮನಿಲ್ಲವೆ ?