ಪುಟ:ದಕ್ಷಕನ್ಯಾ .djvu/೬೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನ್ಯಾ ೫೩. ಗಂಗೆ--ಕೈಯಾರ ಕೊಂಡುಬಂದುದಕ್ಕೆ ಏನುಮಾಡುವಿರಿ ? ತಾರಾಪತಿ-ಅದಾವುದು ? ಕೈಯಾರ ಕೊಂಡುಬಂದುದು ? ಗಂಗೆ - ನಾನೇಕೆ ಹೇಳಲಿ ? ಮೊದಲೇ ನಾನು ನಿಮಗಾಗದವಳು ; ಸಾಲ - ದುದಕ್ಕೆ ನಿಮಗಿಷ್ಟರಾದವರ ಮಾತನ್ನೂ ಹೇಳಿ, ಬೇಸರವನ್ನು ಹೆಚ್ಚಿಸಲೇ ? ನನಗೇನು ಬೇಕಾಗಿದೆ ? ಲೋಕದಲ್ಲಿ ಪತಿಯ ಉದಾ ಸೀನಕ್ಕೆ ಪಕ್ಕಾಗಿ ಬಾಳುವುದಕ್ಕಿಂತ, ಮರಣವೇ ಲೇಸಾಗಿ ಕಾಣು ತದೆ. " ಕಿರಿಯ ಹೆಂಡತಿ ಕಿರಿಕಿತ್ತರೂ ಪ್ರಯಳು ' ಎಂದು ಹೇಳುವುದುಂಟು. ಅದು ನನ್ನ ಪಾಲಿಗೆ ಮಾತ್ರ ಸುಳ್ಳಾಗಿ ಹೋಗಿದೆ. ಇನ್ನು ನನ್ನ ......... ಮುಂದೆ ಹೇಳಲಾಗಲಿಲ್ಲ. ಕೊರಳು ಕಟ್ಟಿತು; ಕಣ್ಣುಗಳಲ್ಲಿ ನೀರು ತುಂಬಿತು. ಗಂಗೆಯು ಮಾತಿಲ್ಲದೆ ನೆಲದಮೇಲೆ ಬಿದ್ದು ಬಿಟ್ಟಳು ತಾರಾಪತಿರಾಯನ ಶರಭಾವವು ಈಗಲೀಗ ಮರೆಯಾಯ್ತು! ಹೃಕ್ರೋಶದಲ್ಲಿ ಅಡಗಿದ್ದ ಪತ್ನಿ ವಿಷಯಕವಾದ ಪ್ರೇಮವು ಹೊರಹೊ ಮ್ಮಿತು. ರಾಯನು ಧಿಗ್ಗನೆದ್ದುಬಂದು, ನೆಲದಮೇಲೆ ಬಿದ್ದಿದ್ದವಳನ್ನು ಎತ್ತಿ, ತನ್ನ ಉರಸ್ಥಲಕ್ಕೆ ಒರಗಿಸಿ ಕುಳ್ಳಿರಿಸಿಕೊಂಡು, ಕಣ್ಣಿರಸಿ, ಪ್ರೀತಿ ವ್ಯಂಜಕಸ್ವರದಿಂದ-' ನೀನಿನ್ನೂ ಅರಿಯದ ಹುಡುಗಿಯರಂತೆ ಆಡುತ್ತಿ ರುವೆ ; ನನ್ನ ಮನಸ್ಸನ್ನು ನೀನು ತಿಳಿದಿದ್ದ ಪಕ್ಷದಲ್ಲಿ, ನೀನು ಎಂದಿಗೂ ಹೀಗೆ ಹೇಳುತ್ತಿರಲಿಲ್ಲ. ಅಭಿಮಾನನಗಿತದ ನಿನ್ನ ಮನದಲ್ಲಿ, ನನ್ನ ವಿಚಾರವಾದಿ - ಮರೆವಂತಿದ್ದರೂ ಲೇಸಾಗುತ್ತಿ ದ್ವಿತು. ಇನ್ನು ನವ ಉಡುವು ತೊಡುವುಗಳಿಗಾಗಿ ನೀನು ಅಳಬೇಕಾಗಿಲ್ಲ, ನಿನಗೆ ಯಾರಲ್ಲಿ ಅನುಮಾನವುಂಟೋ ತಿಳಿಯ ಹೇಳಿದರೆ, ತಕ್ಕಮಟ್ಟಿಗೂ ಕಟ್ಟು ಮಾಡುವೆನು.' ಗಂಗೆ--ನಾನು ಹೇಳುವುದು ನಿಮಗೆ ಹೇಗೂ ಪಥ್ಯವಾಗದು. ಆದರೂ, ಹೇಳದೆತೀರದು, ಮನೆಯಲ್ಲಿ ಬಹುದಿನಗಳಿಂದ ಆಪ್ತರಂತಿದ್ದು,