ಪುಟ:ದಕ್ಷಕನ್ಯಾ .djvu/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೪ ಸ ತಿ ಹಿ ತೈ ಷಿ ಆಡಳಿತಗಳನ್ನೆಲ್ಲಾ ತಿಳಿದಿದ್ದ ನಿಮ್ಮ ಮುಸಲ್ಮಾನ ಪಹರೆಯವರಲ್ಲದೆ, ಮುಸಲ್ಮಾನರು ಮತ್ತಾರು ಬಂದಿದ್ದರು ? ಇನ್ನೂ ಅವರು ಬಾರ ದಿರಲು ಕಾರಣವೇನು ? ತಾರಾಪತಿ ಇದ್ದರೂ ಇರಬಹುದು, ಮತ್ಯಾರಲ್ಲಿಯಾದರೂ ಅನುಮಾ ನವುಂಟೇ ? ಗಂಗೆ-ಅನುಮಾನವಲ್ಲ ನಿಮ್ಮ ಯಮುನೆಯೇ ಇಷ್ಟು ಅನರ್ಧಗಳಿಗೂ ಮೂಲವೆಂದು ಹೇಳಬಲ್ಲೆನು. ತಾರಾ ಸತಿ-ಹೇಗೆ ಹೇಳುವೆ ? ಗಂಗೆ--ಅವಳು, ನಿನ್ನೆ ರಾತ್ರಿ, ನನ್ನಲ್ಲಿ ಇಲ್ಲದ-ಸಲ್ಲದ ಮಾತುಗಳನ್ನೆತ್ತಿ, ಮಾತಿನ ನೆವದಿಂದ ಮನೆಯಲ್ಲಿದ್ದುದನ್ನೆಲ್ಲಾ ಚೆನ್ನಾಗಿ ಗೊತ್ತು ಮಾಡಿಕೊಂಡು ಹೋದುದೂ, ಹೋದವಳು ಯಾರಲ್ಲಿಯೋ ಪಿಸು ಗುಟ್ಟಿ ಬಂದು, ಮತ್ತೆ ಹುಕಥೆಯ ನೆವದಿಂದ ಹೊರಟುಹೋ ದುದೂ ಏತರಿಂದ ” ಎಂದೂ ಹೊರಗೆ ಹೋಗದಿದ್ದವಳಿಗೆ ಇಂದು ಹರಿಕಥೆಯು ಬೇಕಾಯ್ತಲ್ಲವೇ ? ತಾರಾಪತಿ -- ಹಾಗಾದರೆ, ಇನ್ನೂ ಮನೆಗೆ ಬಂದಿಲ್ಲವೇ ? ಗಂಗೆ-ಬಂದಿದ್ದಳು. ಅತ್ತೆಯವರು, ಮತ್ತೆ ಎಲ್ಲಿಗೋ ಕಳಿಸಿರಬಹುದು. ಅವಗೆ ಅವಳು, ನನಗಿಂತ ಹೆಚ್ಚಿನವಳು ತಾರಾಪತಿ-ಅಹುದು, ಅವಳ ನಿರುಷ್ಟವಾದ ಶೀಲವೇ ಹಾಗೆ ಮಾಡಿದೆ. ನಾನಾದರೂ ಆಕೆಯ ವಿಚಾರದಲ್ಲಿ ಸಂದೇಹಪಡಲಾರೆನು. ಗಂಗೆ--ನಾನು ಮೊದಲೇ ನನ್ನ ಮಾತು ಪದ್ಧಾಗದೆಂದು ಹೇಳಿದೆನು. ತಾರಾಪತಿ-ಪತ್ನಿ ಯ ಬೆನ್ನು ತಟ್ಟುತ್ತ-' ಗಂಗ ! ಹೀಗಾಡುವುದು ಸರಿ ಯಲ್ಲ, ಯಾವುದೂ ದುಡುಕುವುದರಿಂದ ಕೆಡುವುದು , ತಾಳ್ಮೆ ಯಿರಲಿ, ಕೂಡಿದಮಟ್ಟಿಗೂ ಜಾಗ್ರತೆಯಾಗಿಯೇ ನಿತಾಂಶವನ್ನು ಕಂಡುಹಿಡಿದು ಸರಿಪಡಿಸುವೆನು; ಸಮಾಧಾನದಿಂದಿರು, ಹೋಗು.