ಪುಟ:ದಕ್ಷಕನ್ಯಾ .djvu/೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸ ತಿ ಹಿ ತೃ ಷ ಣಿ ಯಮುನಾ-ಅದು ದೈವೇಚ್ಛೆ ! ಮತ್ತೇನು ? ತಾರಾಪತಿ ಇನ್ನು ಎರಡು ಮೂರು ದಿನಗಳಲ್ಲಿ ಸುನಂದೆಯ ಭಾವ ರೂಪ ಪ್ರತಿಷ್ಠೆಯಾಗಬೇಕಾಗಿದೆ. ಲಕ್ಷ್ಮಿನಿಲಯವನ್ನು ಪರಿಷ್ಕ ರಿಸುವ ಕೆಲಸ ನಿನ್ನದಾಗಿದೆ. ಯಮುನಾ-ಸಂತೋಷದಿಂದ-' ಅಗತ್ಯವಾಗಿಯೂ ಮಾಡುವೆನು. ಇ೦ ದಿನ ಆರೋಪಣೆ-ಮತ್ತು ನಿರೂಪಣೆಗಳನ್ನು ಹೇಗೂ ಮರೆಯಲಾ ರೆನು.” ಎಂದು ಹೇಳಿ ಹೊರಟುಹೋದಳು. || ಶ್ರೀ || ದಶಮ ಪರಿಚ್ಛೇದ. (ನಿಯೋಗ, ) ಅತಿಳಿಸಿ ಇವಸಾಯಂಕಾಲ ನಾಲ್ಕು ಗಂಟೆಯ ಸಮಯದಲ್ಲಿ, ದಂಡಪಾಣಿ ರಾಣಾ ಯಾದ ಜಮೀಾನ್ಮಾರನು ಕಾರಾರ್ಧಿಯಾಗಿ ಹೊರಹೊರ ಚನು, ಪ್ರಾಕಾರದ ಬಾಗಿಲನ್ನು ದಾಟಿ, ಮುಂದೆ ಹೊರ ಡುವವರೆಗೂ ಸುಮ್ಮನಿದ್ದ ಗೋಪಾಲನು, ಕಾಲುನಡೆ ೨ ಯಿಂದೆಯೇ ಹೋಗುತ್ತಿರುವ ಜಮಾನ್ದಾರನನ್ನು ಕಂಡು, ಓಡಿಬಂದು-' ಗಾಡಿ ಸಿದ್ಧವಾಗಿದೆ ಎಂದು ಶೃತಪಡಿಸಿದನು. ತಾರಾಪತಿ-ಕುಪಿತನಾಗಿ-' ಗಾಡಿಯು ನನಗೆ ಬೇಕಾಗಿಲ್ಲ ; ನಿನ್ನನ್ನು ಕರೆ ದವರಾರು ? ಕಾರ್ ಗೌರವದಿಂದ ಹೊರಟರೆ, ಪಧನಿರೋಧ ಮಾಡುವೆ ; ಹೊರಟುಹೋಗು.' ಎಂದು ಧಿಕ್ಕರಿಸಿದನು. ಗೋಪಾಲನಿನ್ನೇನು ಮಾಡಬಲ್ಲನು ? ಪಾಪ ! ಮ್ಯಾನಮುಖ ವನ್ನು ಮತ್ತೆ ತೋರಿಸದೆ, ಮೆಲ್ಲಗೆ ಹಿಂತಿರುಗಿ ಹೊರಟುಹೋದನು.