ಪುಟ:ದಕ್ಷಕನ್ಯಾ .djvu/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೮ ಸ ತಿ ° ಹಿ ತ ಷಿ ಣಿ ಜಖಾನ್ಹಾರ-ಆಗಬಹುದೆಂದೊಪ್ಪಿ, ಬೀಗದಕೈಯನ್ನು ತೆಗೆದುಕೊಂಡು ಬಂದು ಕಿರುಮನೆಯ ಬಾಗಿಲನ್ನು ತೆಗೆದು ಮೆಲ್ಲನೆ ಒಳಹೊಕ್ಕು, ಮತ್ತೆ ಕದವನ್ನು ಮುಚ್ಚಿ, ಕಿರುಮನೆಯೊಳಗಡೆಯಲ್ಲಿ ನಾಲ್ಕು ಕಡೆಯನ್ನೂ ಚೆನ್ನಾಗಿ ನೋಡಿದನು. ಮೊದಮೊದಲು ಏನೂ ಕಾಣಿಸಲಿಲ್ಲ, ಬರಬರುತ್ತ ಬೆಳಕು ಕಾಣಬಂದುದಲ್ಲದೆ, ಕಿಟಿಕಿಗೆ ತೆರೆಯನ್ನು ಬಿಟ್ಟಿರುವುದೂ, ಅದಕ್ಕೆ ಮರೆಯಾಗಿ ಯಾರೋ ಕುರ್ಚಿಯ ಮೇಲೆ ಕುಳಿತು ಓದುತ್ತಿರುವುದೂ ತಿಳಿದುಬಂದಿತು. ತಾರಾಪತಿರಾಯನು ಕೌತುಕಗೊಂಡು ಮುಂದೆಬಂದು ಕುಳಿತಿದ್ದ ವನನ್ನು ನೋಡಿದನು , ಬೆರಗಾದನು. ಕುಳಿತಿದ್ದಾತನು ಮತ್ತಾ ರೂಅಲ್ಲ ಉತ್ಮಮಣಾವಸ್ಸೆಯಲ್ಲಿ ತಪ್ಪಿಸುತ್ತಿದ್ದವನನ್ನು, ಅಮೃತ ಪ್ರಾಶನದಿಂದ ಬದುಕಿಸಿದ ಶ್ರೀದತ್ತಕುಮಾರನೇ ಆಗಿದ್ದನು. ಆತನ ಆನಂದವನ್ನು ಕೇಳಬೇಕೆ ' ಗದ್ದ ದಸ್ವರದಿಂದ-'ಕುಮಾರ!' ಎಂದು ಮಾತ್ರ ಹೇಳಿ ಕೈಹಿಡಿದನು. ಶ್ರೀದತ್ತ.-ಜಮಾನ್ದಾರನನ್ನು ಮರಾದೆಯಿಂದ ಕುರ್ಚಿಯ ಮೇಲೆ ಕುಳ್ಳಿರಿಸಿ-'ರಾಯರೇ ! ನೀವು ಈ ಕಡೆ ಒರುವಿರೋ-ಮರೆತು ಬಿಡುವಿರೋ ಎಂಬ ಸಂಶಯವು ಬಲವಾಗಿತ್ತು. ತಾರಾಪತಿ-ಯಾವದನ್ನು ಮರೆವುದು ? ಕುಮಾರ ! ನನ್ನ ಪ್ರಾಣವ ನ್ಯಾದರೂ ಬದಬಲ್ಲೆನಲ್ಲದೆ, ಮಕ್ಕಳೊಡಗೂಡಿರುವ ನನ್ನ ಪ್ರಾಣ ವಲ್ಲಭೆಯನ್ನು ಮಾತ್ರ ಮರೆತಿರಲಾರೆನು. ಹೇಗೂ ನನ್ನ ಜೀವನ ದೀಪವು ನಿನ್ನ ಕೈಯ್ಯಲ್ಲಿ ಸೇರಿದೆ, ಹೇಗೆ ಬೇಕಾದರೂ ಮಾಡ ಬಹುದು. ಶ್ರೀದತ್ತ-ಇದೇಕೆ ಹೀಗೆ ಹುಡುಗರಂತೆ ಹೇಳುತ್ತಿರುವಿರಿ ? ಜಮಾ ಸ್ಟಾರ್ ! ನನ್ನನ್ನು ಹೊರಗಿನವನೆಂದೇ ತಿಳಿದಿರುವಿರೋ ? ಈ ಕೆಲ ಸವು ನನ್ನದಾಗಿರುವುದರಿಂದ ನಿಮ್ಮಿಂದ ಹೇಳಿಸಿಕೊಳ್ಳಬೇಕಾಗಿಲ್ಲ. ,