ಪುಟ:ದಕ್ಷಕನ್ಯಾ .djvu/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ || ಏಕಾದಶ ಪರಿಚ್ಛೇದ. (ಎಚ್ಚರಿಕೆ ) ನಿಆ ದಿತ್ಯವಾರವಾದುದರಿಂದ, ರಾವಬಹದ್ದುರ್‌ ರಾಧಾನಾ ಧರಾಯನು ಇಂದು ನ್ಯಾಯಸ್ಥಾನಕ್ಕೆ (Court) ಇಳಿದು ಹೋಗಲಿಲ್ಲ ; ಊಟವಾದ ಬಳಿಕ, ಕಾಲಕ್ಷೇಪಕ್ಕಾಗಿ ವಾಚನಶಾಲೆಯ (Reeding Room) ಬಾಗಿಲನ್ನು ತೆಗೆದು ಒಳಹೊಕ್ಕನು. ವಾಚನಶಾಲೆಯು ಈತನ ಸ್ವಂತ ಓಲಗಶಾಲೆಯ ಪಕ್ಕದಲ್ಲಿಯೇ ಇರುವುದು, ವಾಚನಶಾಲೆಯು, ಸುಮಾರು ಇನ್ನೂರುಮಂದಿ ಕುಳಿತು ಕೊಳ್ಳಬಹುದಾದಷ್ಟು ವಿಸ್ತಾರವಾ ಗಿದ್ದಿತು, ಇದರ ಒಂದು ಭಾಗದಲ್ಲಿ, ನಡುವೆ ಎತ್ತರವಾದ ಜಗಲಿ, ಜಗ ಲಿಯ ಮೇಲೆ ಮಣೆಯೂ, ಮಣೆಯ ಮುಂಗಡೆ ಇರಾಣಗ್ರಂಧಗಳನ್ನಿರಿಸಿ ರುವ ಕಾಲುಮಣೆಯ ಇರುವುವು, ಸುತ್ತಲೂ ಪುರಾಣವನ್ನು ಕೇಳಲು ಬರುವವರು ಕುಳಿತುಕೊಳ್ಳುವುದಕ್ಕಾಗಿ ಚಾಪೆಗಳನ್ನು ಹಾಸಿರುವುದು. ಶಾಲೆಯ ಮತ್ತೊಂದು ಭಾಗದಲ್ಲಿ ಮೂರು ದಿಕ್ಕುಗಳಿಗೂ, ಪಠ್ಯ ಪುಸ್ತ ಕಗಳನ್ನೊಳಗೊಂಡಿರುವ ದೊಡ್ಡ ದೊಡ್ಡ ಕನ್ನಡಿ ಬೀರುಗಳೂ, ಬೀರುಗಳ ಮುಂಗಡೆ ನಾಲ್ಕಾರು ಕುರ್ಚಿಗಳೂ, ಕುರ್ಚಿಗಳಿಗೆ ಮಧ್ಯೆ ಮೇಜವೂ ನಿಲ್ಲಿಸಲ್ಪಟ್ಟಿವೆ. ಒಟ್ಟಿನಲ್ಲಿ ಈ ವಾಚನಮಂದಿರದ ನೈರ್ಮಲ್ಯ-ವಿಕಾಂತ ಸ್ವರೂಪಗಳನ್ನು ನೋಡಿದರೆಯೇ ರಾವಬಹದ್ದುರನ ಸದ್ಭಾವನಾಸ್ವರೂಪವು ಎಂತಹದಾಗಿರುವುದೆಂಬುದನ್ನು ತಿಳಿಯಬಹುದು ರಾಧಾನಾಧರಾವಬಹದ್ದುರನು, ವಿರಾಮಕಾಲದಲ್ಲಿ, ಹಗಲುನಿದ್ದೆ, ಸಂಗೀತ, ವಿನೋದಕೂಟ, ನೋಟಗಳೆಂದೇನಾದರೂ ವ್ಯರ್ಥವಿಷಯಗಳಿ