ಪುಟ:ದಕ್ಷಕನ್ಯಾ .djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ L೩ ದ ಕ ಕ ನ್ಯಾ ಗಾಗಿ ಕಾಲಧನವನ್ನು ಹಾಳುಮಾಡಿಕೊಳ್ಳುತ್ತಿದ್ದನೆಂದೋ ? ಹಾಗಿಲ್ಲ. ರಾಧಾನಾಧನು ಆಗರ್ಭ ಶ್ರೀಮಂತನು, ಪೂರ್ಣ ವಿದ್ಯಾವಂತನು, ನಿರಂತ ರೋದ್ಯಮಶೀಲನು, ದಂಡನೀತಿಶಾಸ್ತ್ರ ವಿಶಾರದನು, ಸತ್ಯಸಂಕಲ್ಪನು, ರಾಜಭಕ್ತಿಯು ತನು, ಹೆಚ್ಚೇಕೆ ?-ದೇಶಭಕ್ತನೆಂದರೆ, ರಾಜಕ್ಕಾರ ಧುರೀ ಣನೆಂದರೆ, ನ್ಯಾಯನೀತಿ ಸಂಪನ್ನನೆಂದರೆ ನಮ್ಮ ರಾಧಾನಾಧಠಾಕೂರನೇ ಸರಿ, ಈತನು ಪ್ರತಿನಿತ್ಯವೂ ಊಟವಾದ ಕಾಲುಗಂಟೆಯ ಹೊತ್ತಾ ದರೂ, ಈ ವಾಚನಶಾಲೆಯಲ್ಲಿ ಕುಳಿತು, ವಿಶ್ರಮಿಸಿಕೊಳ್ಳದೆ ಇರುತ್ತಿರ ಲಿಲ್ಲ, ಹಾಗೂ ಭಾನುವಾರವೆಲ್ಲಾ ಇಲ್ಲಿಯೇ ಇದ್ದು, ರಾಜಕೀಯ ತಂತ್ರ ಗಳನ್ನೂ, ಸಾಮಾಜಿಕ ನೀತಿಗಳನ್ನೂ, ಆತ್ಮವಿಚಾರತತ್ವವನ್ನೂ ಒಳಕೊಂಡಿ ರುವ ಸದ್ಧಂಧಗಳನ್ನು ಸಮಾಲೋಚಿಸುತ್ತಿರುವನು. ದಿನವೂ ರಾತ್ರಿ ವೇಳೆಯಲ್ಲಿ ಇಲ್ಲಿಯೇ ಪುರಾಣಶ್ರವಣ ಸತ್ಕಾಲಕ್ಷೇಪವನ್ನು ಮಾಡಿಸು ವುದು ಇವನ ಪದ್ಧತಿಯಾಗಿದೆ. ಆದರೆ ಇದೊಂದು ಮಾತು ನಮ್ಮ ಆಧು ನಿಕ-ಸುಧಾರಕ ಮಂಡಲಿಗೆ ಹಾಸ್ಯಾಸ್ಪದವಾಗಿ ತೋರುವುದೋ, ಹೇಗೋ ತಿಳಿಯದು, ಹೇಗೂ ಇರಲಿ, ಇದ್ದ ಸಂಗತಿಯನ್ನು ತೆಗೆದು ತೋರಿಸು ವುದೊಂದೇ ಈ ಲೇಖನಿಯ ಕೆಲಸವ. ದೇಶಭಕ್ತರಿಗೆ ಪರಮಾದರ್ಶ ಪುರುಷನಾದ ನಮ್ಮ ರಾಧಾನಾಧಬ ಹದ್ದುರನು, ಈ ಪಟ್ಟಣಕ್ಕೆ ಬಂದುದು ಮೊದಲು ಇಂದಿನವರೆಗೆ, ಆ ವಿಶ್ರಾಂತಶ್ರಮದಿಂದ ಪುಂಡಾಟಗಳ ತಂಡಗಳನ್ನು ಕಂಡುಹಿಡಿಯಿಸಿ, ಜನರ ನೆಮ್ಮದಿಯನ್ನು ಕಾಪಾಡುವುದರಲ್ಲಿ ಸಾಹಸಪಡುತ್ತಿರುವನು, ಸಾ ಲದುದಕ್ಕೆ ತಾರಾಪತಿರಾಯನೆ ಮನೆಯಲ್ಲಿ ನಡೆದ ಕಳುವಿನ ವಿಚಾರವೂ ಸೇರಿ, ಈತನ ಆಗ್ರಹ-ಶಪಧಗಳನ್ನು ಮತ್ತೂ ದೃಢಪಡಿಸಿರುವುದು. ಆದ ರೇನು ? ಯಾವುದಕ್ಕೇ ಆಗಲಿ ಕಾಲವು ಅನುಕೂಲಿಸಬೇಕಲ್ಲವೇ ? ಇರಲಿ. ಕಾಲಕ್ಷೇಪಕ್ಕಾಗಿ ಬಂದ ರಾಧಾನಾಧಬಹದ್ದುರನು, ಕುರ್ಚಿಯ ಮೇಲೆ ಕುಳಿತು, ಮೇಜಿನಮೇಲಿದ್ದ ದಂಡನೀತಿಶಾಸ್ತ್ರವನ್ನು ತೆಗೆದು,