ಪುಟ:ದಕ್ಷಕನ್ಯಾ .djvu/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

LL ಸ ತಿ ಹಿ ತೈಷಿ ಣ ಬಹದ್ದುರ-ಅಯ್ಯಾ ! ಈಗ ನಾನು ಜಡನಂತಾಗಿರುವೆನು ; ನನ್ನ ಬುದ್ದಿ ಶಕ್ತಿಯೇ ಲೋಪವಾಗಿದೆ. ದಳವಾಯಿ-ಕಿರುನಗೆಯಿಂದ ಇಷ್ಟಕ್ಕೆ ಅಧೀರರಾದರೆ, ಹಿಂದಿನ ಪ್ರಯ ತೃಗಳೇನಾಗಬಹುದು ?? ಬಹದ್ದುರ-ಈ ಲೇಖನಕ್ಕೆ ನಾನು ಹೆದರುವವನಲ್ಲ. ಆದರೆ, ಇದು ನನ್ನ ವಾಚನಶಾಲೆಯ ಮೇಜಿನಮೇಲಿದ್ದ ಪುಸ್ತಕವನ್ನು ಸೇರಿರುವುದ ರಿಂದ ಶಂಕಿತನಾಗಿರುತ್ತೇನೆ. ದಳವಾಯಿ-ಸ್ಯಾ ಮಾ 1 ನೀವು ಮನೆಯದಾಗಿಲನ್ನು ತೆರೆದು ಹೋಗಿದ್ದ ವೇಳೆಯಲ್ಲಿ, ಯಾರಾದರೂ ಮಾಡಬಾರದೇಕೆ ? ಬಹುರ-ಈ ಮನೆಯ ಮತ್ತು ವಾಚಕಮಂದಿರದ ಬೀಗದಕೈಗಳನ್ನು ಯಾವಾಗಲೂ ನನ್ನಲ್ಲಿಯೇ ಇರಿಸಿಕೊಂಡಿರುವೆನಲ್ಲದೆ, ಯಾರ ಲ್ಲಿಯೂ ಕೊಡುವುದಿಲ್ಲ. ಹಾಗಿರುವುದರಿಂದ, ನಾನು ಬಂದು ಕುಳಿ ತುಕೊಳ್ಳುವುದಕ್ಕೆ ಮೊದಲು, ಯಾರಿಗೂ ಪ್ರವೇಶಕ್ಕೆ ಅವಕಾಶ ವಿರುವುದಿಲ್ಲ. ದಳವಾಯಿ-ಬೇರೆ ಕದಗಳಿಲ್ಲವೇ ? ಬಹದ್ದು ರಇದ್ದರೂ ಅವುಗಳನ್ನು ತೆಗೆಯುವಂತೆ ಬಿಟ್ಟಿಲ್ಲ. ಕಿಟಕಿ ಕದ ಗಳಿಂದ ಹೀಗೆ ಮಾಡಲು ಸಾಧ್ಯವಿಲ್ಲ. ದಳವಾಯಿ-ಕ್ಷಣಹೊತ್ತು ಯೋಚಿಸುತ್ತಿದ್ದು ತಲೆದೂಗಿ ಹೇಳಿದನು. “ ಸ್ವಾಮಿಾ ! ಈಗಲೇ ನಾನು ಯಾವುದನ್ನೂ ಹೇಳಲಾರೆನು. ಆದರೆ, ತಮ್ಮ ಮನೆಬಾಗಿಲುಗಳಿಗೆ ನಾನು ಬೇರೆ ಅಲಾರಂಬೀಗ ಗಳನ್ನು ಕಳಿಸುತ್ತೇನೆ ಅದರಿಂದ ಚೋರರ ಗುಪ್ತ ಸಂಧಾನಕ್ಕೆ ಆತಂಕವುಂಟಾಗಬಹುದು. ಬಹದ್ದುರಆಗಲಿ ; ನಮ್ಮ ಜಮೀನ್ದಾರರಿಗೆ ಸಂಭವಿಸಬಹುದಾಗಿರುವ ಅಪಾಯವನ್ನು ನಿವಾರಿಸುವುದಕ್ಕೂ, ಸಂಚುಗಾರರನ್ನು ಕಂಡು ಹಿಡಿದು ಶಿಕ್ಷಿಸುವುದಕ್ಕೂ ಪ್ರಯತ್ನಿಸಿರುವೆಯೇನು ?