ಪುಟ:ದಕ್ಷಕನ್ಯಾ .djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ L೬ ದ ಕ್ಷ ಕ ನ್ಯಾ ದಳವಾಯಿ-ಸ್ವಾಮಿಾ ! ನನ್ನ ಕರ್ತವ್ಯದಲ್ಲಿ ನಿರತನಾಗಿಯೇ ಇರುವ ನನಗೆ ಹೇಳಬೇಕೇ ? ಆದರೂ, ಈ ಕೆಲಸಕ್ಕಾಗಿಯೇ ನಿಯಮಿಸ ಲ್ಪಟ್ಟಿರುವ ತಮ್ಮ ಮೈದುನರ ಕೈಕೆಳಗಿನ ಉದ್ಯೋಗಸ್ಥರನ್ನು ಪರೀಕ್ಷಿಸಬೇಕಾಗಿದೆ. ಬಹುರ-ಅಯ್ಯಾ ! ನನ್ನ ಮೈದುನನು ವಿದ್ಯಾವಂತ ; ತಕ್ಕಮಟ್ಟಿಗೂ ಸದ್ವರ್ತನದಲ್ಲಿರತಕ್ಕವನು. ಆದರೂ, ಈಗ ನಾಲ್ಕಯ್ತು ದಿನಗಳಿಂದ ಅವನ ಮುಖಭಾವವೂ, ಗಮನವೂ ಬದಲಾಯಿಸಿದಂತೆ ತೋರು ತಿದೆ. ಕಾರಣವೇನೋ ಗೊತ್ತಾಗಲಿಲ್ಲ. ಮನೆಯಲ್ಲಿ ಅವನನ್ನು ಕಾಣುವುದೇ ದುರ್ಲಭ ; ಕಂಡಾಗ ಕೇಳಿದರೆ, ' ಸಂಚುಗಾರರು ಅಲ್ಲಲ್ಲಿ ತಲೆದೋರುತ್ತಿರುವರು. ಅವರನ್ನು ಕಂಡುಹಿಡಿಯುವ ಪ್ರಯತ್ನವು ನಡೆಯುತ್ತಿದೆ , ವಿರಾಮವಿಲ್ಲ.' ಹೀಗೆಂದು ಹೇಳು ವನು. ಆತನು ಇಷ್ಟು ಶ್ರದ್ಧೆಯಿಂದ ಪ್ರಯತ್ನಿಸುತ್ತಿದ್ದರೂ ಪುಂಡಾಟವು ಹೆಚ್ಚುತ್ತಿದೆಯೆಂದರೆ ಆಶ್ಚಯ್ಯ ವೇಸರಿ ! ದಳವಾಯಿ-ಈಗಲೇ ನಾವು ಅದನ್ನು, ಬಾಯ್ದೆರೆದು, ಹೇಳಬಾರದು. ಕೂಡಿದಮಟ್ಟಿಗೂ ಜಾಗ್ರತೆಯಾಗಿಯೇ ತಕ್ಕ ಏರ್ಪಾಟುಮಾಡಿ, ವಿದ್ರೋಹಿಗಳನ್ನು ಕಂಡುಹಿಡಿಯುವೆನು , ಧೈದ್ಯವಾಗಿರಬಹುದು. ನನಗಿನ್ನು ಅಪ್ಪಣೆಯೇ ? ಬಹುರ-ಹಾಗೆಯೇಮಾಡು. ಹೇಗೂ ಈ ಕಾಠ್ಯವು ನಿನ್ನಿಂದಲೇ ತೃಪ್ತಿ ಕರವಾಗಿ ನೆರವೇರಬೇಕಾಗಿರುವದು. ಇರಲಿ , ಇನ್ನು ಹೊರಡ ಬಹುದು. ದಳವಾಯಿ-' ಆಗಬಹುದು' ಎಂದು ಕೈಮುಗಿದು ಹೊರಟುಹೋದನು. ರಘುನಾದನು, ತನಗೆ ಸಿಕ್ಕಿರುವ ವೈರಿದಳದ ಎಚ್ಚರಿಕೆಯನ್ನು ಭದ್ರವಾಗಿಟ್ಟು, ಕಾಠ್ಯಗೌರವದಿಂದ ಎದ್ದು ಹೊರಟುಹೋದನು.