ಪುಟ:ದಕ್ಷಕನ್ಯಾ .djvu/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀ | ದ್ವಾದಶಪರಿಚ್ಛೇದ.

(ಪರಿವರ್ತನೆ.) * ಪಿ ಯಸೋದರಿಯರೇ! ಕಾಲಚಕ್ರವು ಒಂದೇ ಬಗೆಯಾಗಿರ ೨��3 ಲಾರದಲ್ಲವೇ ? ಅದು, ಪರಿವರ್ತನಾಕ್ರಮದಿಂದ, ಬೇರೆ ಬೇರೆ ರೂಪಗಳನ್ನು ತಾಳಿ ಸುತ್ತುತ್ತಿದೆಯಷ್ಟೆ, ಇಂತಹ ಶ್ರೀ ಕಾಲಚಕ್ರದ ಪರಿವತ್ಯನಾಸ್ಪಿತಿಯನ್ನು ಮುಂದಾಗಿ ತಿಳಿದು ಹೇಳಲು, ಯಾರಿಗಾದರೂ ಅಳವೇ ? ನಮ್ಮ ಜಾನ್ನಾ ರನ ಭವನದ ಕಡೆಗೆ ಗಮನಿಸಿರಿ, ಭವನವೇ ನೂತನಕಾಂತಿಯಿಂದ ಪರಿವ ರ್ತಿತವಾಗಿ ಬೆಳಗುತ್ತಿದೆ. ಕಾರಣವೇನು ? ಭವನಾಧಿಕಾರಿಯ ಆತ್ಮ ಸಮಾ ಧಾನವೇ ಕಾರಣವೆನ್ನು ವಿರೋ ? ನಿಜ ! ಈ ದಿನವೇ ಜಮೀನ್ದಾರನ ಹೃದಯಾನಂದ ಕಾರಿಣಿಯಾದ, ಪ್ರೇಮಮಯಾ ಸುನಂದಾದೇವಿಯು ಬರುವಳೆಂಬ ನಿರೀಕ್ಷೆ ; ಇದಕ್ಕೆಂದೇ ಲಕ್ಷ್ಮಿನಿಲಯವೂ ನವರಾಗದಿಂದ ಪರಿಶೋಭಿಸುತ್ತಿರುವುದು, ಚಂದ್ರಮತಿಗೆ ಆನಂದ , ಯಮುನೆಗೆ ಉತ್ತಾ. ಹ ; ವಿಷಕಂಠನಿಗೆ ಕುತೂಹಲ ; ಅಡಿಗೆ ಪರಿಚಾರಕರಿಗೆ ಕಳವಳ ; ಗೋಪಾ ಲನಿಗೆ ತಳಮಳ ; ಯಶವಂತನಿಗಂತೂ ವ್ಯಾಕುಲವೇ, ಮನೆಯಲ್ಲಿ, ಒಬ್ಬೊಬ್ಬರ ಸ್ಥಿತಿಯೂ ಒಂದೊಂದು ಬಗೆಯದಾಗಿ ರುವುದು, ಇನ್ನು ಜಾನ್ಮಾರ ತಾರಾಪತಿರಾಯನ ವಿಚಾರವಾಗಿ ಹೇಳ ಬೇಕೇ ? " ಇನ್ನೇನು, ನನ್ನ ಮನೋದೇವತೆಯೇ ನನಗಿಂದು ಪ್ರಸನ್ನೆ ಯಾ ಗುವಳು' ಎಂಬ ಆನಂದದಿಂದ ಮನವು ಉಕ್ಕೇರುತ್ತಿರುವುದು, ಕಣ್ಣುಗಳಲ್ಲಿ ಕೌತುಕವು ತೋರುತ್ತಿದೆ ; ಬಾಯೊಳಗೆ ನೀರೂರುತ್ತಿದೆ ; ಕೈಕಾಲುಗಳಂತೂ ಮೆಯ್ಯ ವಿರೆದ್ದಂತಾಗಿ, ಅಡಿಗಡಿಗೂ ನಡುನಡುಗುತ್ತಲಿವೆ. ಇನ್ನೇನಾ?