ಪುಟ:ದಕ್ಷಕನ್ಯಾ .djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನಾ. L೯ ಬೇಕು ? ಇಂತವನಿಂದ ಕೆಲಸವೇನಾದೀತು ? ಇಂದು ಈತನು, ಪ್ರಾತಃ ಕಾಲದ ಸ್ನಾನವಾದಬಳಿಕ ಬಂದು, ಓಲಗಶಾಲೆಯ ಮುಂಗಡೆ, ಒರಗುವ ಕುರ್ಚಿಯಮೇಲೆ ಕುಳಿತವನು, ಮತ್ತೆ ಅತ್ತಿತ್ತ ಕದಲಿದವನಲ್ಲ ; ಮನೆಯ ವರಲ್ಲಿ ಯಾರೊಡನೆಯ ನುಡಿದು-ನುಡಿಯಿಸುವನಲ್ಲ ; ಒಂದಕ್ಷರವನ್ನಾ ದರೂ ಬರೆದವನಲ್ಲ ; ಓದಬೇಕೆಂದು ಮನದಲ್ಲಿಯಾದರೂ ಎಣಿಸಿದವನಲ್ಲ. ಎಡದ ಕೆನ್ನೆ ಯಮೇಲೆ, ತನ್ನೆಡಗಯ್ದಿರಿಸಿ, ಬಲಗೈ ಬೆರಲುಗಳನ್ನು ಕುಣಿ ಕುಣಿಸುತ್ತೆ ಏನನ್ನೋ ಗುಣಿಸುತ್ತಿದ್ದನು. ಹೀಗೆಯೇ ಎಷ್ಟು ಹೊತ್ತು ನಿರೀಕ್ಷಿಸುತ್ತಿದ್ದರೆ, ದೇವಿಯು ಪ್ರಸನ್ನೆ ಯಾಗಬಹುದು ? ಪ್ರಚಂಡಮಾ ರ್ತಾ೦ಡನು ಮಧ್ಯಾಕಾಶದಲ್ಲಿ ಪ್ರಜ್ವಲಿಸುತ್ತಿರುವನು. ಆತನ ಉಜ್ವಲಸ್ವ ರೂಪದಿಂದ, ಪ್ರಪಂಚವೇ ಪರಿತಪಿಸುವಂತಾಗಿದೆ. ಆದರೆ, ನಮ್ಮ ಜಮೀಾ ನ್ಯಾರನಿಗೆ ಮಾತ್ರ, ಮಾರ್ತಾಂಡನ ಮಹೋಗ್ರತಾಪವು ಹಿತಕರವಾಗಿಯೇ ಇರಬೇಕು ! ಇಲ್ಲದಿದ್ದರೆ, ಈತನಿಂದು ಸ್ನಾನ-ಪಾನಗಳಲ್ಲಿಯೂ ಗಮನವಿ ಇದೆ ಒಡನಂತಾಗಿ ಕುಳಿತಿರುತ್ತಿದ್ದನೇ ? ಎಂದಿಗೂ ಇಲ್ಲ, ಈ ವೇಳೆಯಲ್ಲಿ ಈತನ ಮನಸ್ಸು ಮಾನಿನೀಧ್ಯಾನಮೌನವ್ರತದಲ್ಲಿ ಲೀನವಾಗಿದೆಯಲ್ಲದೆ, ಬಾಹ್ಯವ್ಯಾಪಾರಗಳನ್ನು ಗಮನಿಸುವಂತಿಲ್ಲ. ಕ್ಷಣಕ್ಷಣಕ್ಕೂ, ಬೀದಿಯ ಕಡೆ ನೋಡುವನು ; ಬೀದಿಯಲ್ಲಿ ತಿರುಗಾಡುವ ಬಂಡಿಗಳ ಸದ್ದನ್ನು ಕೇಳಿ, ಹಮ್ಮೆ ಸಿ ನೋಡುವನು ; ನಿರೀಕ್ಷೆಗೆ ಭಂಗವಾಯ್ದೆಂಬ ಉಮ್ಮಳದಿಂದ ಉಸಿರ್ಗರೆದು ತಲೆಬಾಗಿ ಕುಳ್ಳಿರುವನು. ಎಷ್ಟು ಹೊತ್ತು ಕುಳಿತು ನೋಡಿ ದರೂ ನಿರೀಕ್ಷೆಗೆ ಫಲವಾಗದೆಹೋದರೆ, ಆತನ ಮನಸ್ಸಿನ ಯಾತನೆಯಾ ದರೂ ಎಷ್ಟಿರಬೇಕು ? ಈ ವೇಳೆಯಲ್ಲಿ ಈತನನ್ನು ಸಂತಯಿಸುವವರಾರು ? ಓಹೋ ! ತಾಳಿ, ತಪ್ಪಿದೆವು. ಸೋದರಿಯರೇ ! ತಪ್ಪಿನುಡಿದೆವು. ಸ್ವಾಮಿಯು ಚಿನ್ನಾ ಕುಲನಾಗಿ ಕುಳಿತರೆ, ಸ್ವಾಮಿನಿಯೇ ಬಂದು ಸಂತ ಯಿಸುವುದು ಸಹಜಧರ್ಮವು. ' ಹಾಗಾದರೆ, ಗಂಗಾಬಾಯಿಯೇ ಈಗ ಬರಬಾರದೇಕೆ ? ಏನುಮಾಡುತ್ತಿರುವಳು ??