ಪುಟ:ದಕ್ಷಕನ್ಯಾ .djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೦. ಸ J ಹಿ ತ್ಯ ಷಿ ಣಿ ಗಂಗೆಯ ಸ್ಥಿತಿಯೂ ಪರಿವರ್ತಿತವಾಗಿದೆ' ಎಂದಿನಂತೆ ಇಂದಿಗಳು ಅಲಗಳಾಗಿರುವದಿಲ್ಲ ; ಪಟಚಂಡಿನಂತೆ ಹಾರಾಡುತ್ತಿರುವಳು. ಇವಳ ಮುಖದಲ್ಲಿ ಕಲೆಯೇರುತ್ತಿರುವುದು ; ಕಟಾಕ್ಷ ಕಾಂತಿಯಿಂದ ಮನೆಯೇ ನರ್ತಿಸುತ್ತಿರುವಂತೆ ಕಾಣುವುದು. ಉಪ್ಪರಿಗೆಯಿಂದ ಕೆಳಗೂ, ಕೆಳಗಿಂದ ಉಪ್ಪರಿಗೆಗೂ ಇಳಿದೇರುತ್ತಿರುವುದೆಂದರೆ, ಇವಳಿಗೆ ಮಕ್ಕಳಾಟಿಕೆಯಂ ತೆಯೇ ಆಗಿರುವುದು, ಅಷ್ಟೇ ಅಲ್ಲ ! ಅತ್ತೆಯನ್ನು ನುಡಿಯಿಸುವಳು ; ಯಮುನೆಯನ್ನು ಅಡಿಗಡಿಗೂ ಬೆಸಗೊಳ್ಳುವಳು ; ಅಡಿಗೆ-ಪರಿಚಾರಕ ರನ್ನು ಸವಿನುಡಿಯಿಂದ ಉಬ್ಬೇರಿಸುವಳು ; ಪತಿಯಒಳಿಗೆ ಹೋಗಬೇ ಕೆಂದು ಸಮಯವನ್ನೇ ನೋಡುತ್ತಿರುವಳು. ಇಂದಿನ ಇವಳ ಉತ್ಸಾಹಕ್ಕೆ ಕಾರಣವೇನೋ ಪರಮೇಶ್ವರನೊಬ್ಬನಿಗೆ ಗೊತ್ತು. ತಾರಾಪತಿರಾಯನು ಸುನಂದೆಯ ವಿಚಾರವಾಗಿ, ಇಂದಿನವರೆಗೂ, ಗಂಗೆಯ ಬಳಿಯಲ್ಲಿ ಹೇಳಿಲ್ಲ. ಗಂಗೆಗೆ ತಿಳಿದಿದೆಯೋ, ಇಲ್ಲವೋ ಅದನ್ನೂ ಹೇಳುವಂತಿಲ್ಲ. ಇವಳಾಗಿ ಗಂಡನಲ್ಲಿ ಈ ಪ್ರಸ್ತಾಪವನ್ನೆತ್ತಿಯೂ ಇಲ್ಲ. ಆವುದಕ್ಕೂ ಸಮಯವೊದಗಬೇಕಷ್ಟೆ. ಆದರೆ, ಈಗಲೀಗ ಸಮಯಸಿ ಕ್ಕಿತು. " ಮಾಡಿದ ಅಡಿಗೆಯೆಲ್ಲವೂ ತಣ್ಣಗಾಗುತ್ತಿದೆ. ಯಜಮಾನರಿನ್ನೂ ಸ್ನಾನಕ್ಕೆದ್ದಿಲ್ಲ, ಹೇಗಾದರೂ ಮಾಡಿ ಎಬ್ಬಿಸಬೇಕು.' ಹೀಗೆಂದು ಮನೆ ಯವರೆಲ್ಲರೂ ಬಂದು, ಗಂಗೆಯಲ್ಲಿ ಮೊರೆಯಿಟ್ಟರು. ಗಂಗೆಯು ವಿಳಂಬಿ ಸದೆ ಪತಿರಾಜನೆಡೆಗೆ ನಡೆತಂದಳು. ಪ್ರಿಯಪಧ್ಯಾನದಲ್ಲಿಯೇ ಕುಳಿತಿದ್ದ ತಾರಾಪತಿಗೆ, ಗಂಗೆಯು ಬಂದುದೇ ತಿಳಿಯಲಿಲ್ಲ, ಗಂಗೆಯಾದರೂ ಸದ್ದಾ ಗದಂತೆ ಮೆಲ್ಲನೆ ಬಂದು, ಪತಿಯ ಹಿಂದೆ ನಿಂತು, ತನ್ನ ಕೋಮಲಹಸ್ತ ವನ್ನು ಪತಿಯ ಭುಜಪ್ರದೇಶದಲ್ಲಿರಿಸಿದಳು. - ಬಿನ್ನನಾಗಿ ಕುಳಿತಿದ್ದಾತನಿಗೆ, ಪತ್ನಿ ಯ ಶೀತಲ ಕರಸ್ಪರ್ಶದಿಂದ ಜ್ಞಾನೋದಯವಾಯಿತು ; ತಲೆಯೆತ್ತಿ ನೋಡಿದನು ; ಗಂಗೆಯ ಮಂದ ಸ್ಮಿತ ವದನಾರವಿಂದವನ್ನು ಕಂಡು, ಚಕಿತನಾಗಿ ಕೇಳಿದನು,-' ಗಂಗೆ !