ಪುಟ:ದಕ್ಷಕನ್ಯಾ .djvu/೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೧ ದ ಕ ಕ ನ್ಯಾ ಇದೇನು ಬಂದೆ ? ಇಂದೇನಿಷ್ಟು ಸುಪ್ರಸನ್ನ ತೆ ? ಸದ್ದಾಗದಂತೆ ಬಂದು ಹೊಂಚಿ ನೋಡುತ್ತಿರುವುದೇನು ? ಬಂದು ಎಷ್ಟು ಹೊತ್ತಾಯಿತು ?' ಗಂಗೆಯು ಉತ್ತರವೇನನ್ನೂ ಕೊಡದೆ, ಒಂದುಬಾರಿ ಪತಿಯನ್ನು ಪರಿಹಾ ಸದಿಂದ ನೋಡಿ, ಬಲವಾಗಿ ನಕ್ಕುಬಿಟ್ಟಳು. ತಾರಾಪತಿ-ಪತ್ನಿ ಯ ಕೈಹಿಡಿದೆಳೆದು ಮುಂದೆ ನಿಲ್ಲಿಸಿಕೊಂಡು, ಕುತೂ ಹಲದಿಂದ ಕೇಳಿದನು,-' ಹೇಳು, ಗಂಗೆ ! ಸುಮ್ಮನೇಕೆ ಮಾತಿಲ್ಲದೆ ನಗುತ್ತಿರುವೆ ?? ಗಂಗೆ-ಪರಿಹಾಸದಿಂದ ತಲೆದೂಗುತ್ತ " ಜಮಿಾನ್ಯಾರರ ಅಗಾಧಚಿಂತೆಗೆ ಕಾರಣವು ಗೊತ್ತಾದರೆ, ಆ ಬಳಿಕ ನಾನೂ ಹೇಳುವೆನು.' ತಾರಾಪತಿ-ಲೇವಾದೇವಿ ವಿಷಯಗಳಲ್ಲಿ ಸ್ವಲ್ಪ ವ್ಯತ್ಯಾಸವಾಗಿರುವುದೇ ನನ್ನ ವ್ಯಸ್ತತೆಗೆ ಕಾರಣ ! ಗಂಗೆ-ಮೈಮರೆತು ಬೀಗಿಕುಳಿತಿದ್ದ ಜಮೀನ್ದಾರರ ಚಿತ್ರಸೈರವೇ ನನ್ನ ನಗುವಿಗೆ ಕಾರಣ ? ತಾರಾಪತಿ-ಅಷ್ಟಕ್ಕೆ ನಗುವುದೇಕೆ ? ಗಂಗೆ-ಲೇವಾದೇವಿ ವಿಷಯಗಳಲ್ಲಿ ವ್ಯತ್ಯಾಸವಾಗಿದ್ದರೆ, ಊಟ ನಿದ್ರೆಗ ಳನ್ನು ಬಿಡುವುದೇಕೆ ? ತಾರಾಪತಿ-ಬಿಟ್ಟಿರುವವರು ಯಾರು ? ಗಂಗೆ--ನಾನು ಮತ್ತಾರನ್ನೂ ಏಕೆ ಹೇಳಲಿ ? ತಾರಾ ಪತಿ-ನನ್ನ ಸ್ನೇ ಹೇಳುವೆಯೇನು ? ಗಂಗೆ--ಅಹುದು; ಹಾಗೇಕೆಮಾಡಬೇಕು ? ಅಟ್ಟ ಅಡಿಗೆ ಆರಿಹೋಯಿತು. ತಾರಾಪತಿ-ನನಗೆ ದೇಹಾರೋಗ್ಯವು ಕೆಟ್ಟಿದೆ. ಈಗ ನಾನು ಊಟಮಾ ಡುವುದಿಲ್ಲ, ಎಲ್ಲರೂ ಊಟಮಾಡಬಹುದು. ಗಂಗೆ- ಎಲ್ಲರೂ ' ಎಂದರೆ ಅರ್ಧವೇನು ? ತಾರಾಪತಿ- ನೀನೂ, ಅಮ್ಮಾಯಾ, ಮತ್ತು ಮನೆಯವರೆಲ್ಲರೂ.