ಪುಟ:ದಕ್ಷಕನ್ಯಾ .djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

وع ಸ ತಿ ಹಿ ಷಿ ಣಿ ಗಂಗೆ-ಆದೀತು, ನಾನು ಕುಂಭರಿಯೆಂಬುದೂ, ಅವಿಶ್ವಾಸಿನಿಯಂ ಬುದೂ ಎಲ್ಲರಿಗೂ ಗೊತ್ತಿದೆ. ಆದರೆ, ಅಮ್ಮಾಯಿಯವರಿಗೆ ನೀವೇ ಹೇಳುವಿರೇನು ? ತಾರಾಪತಿ-ಆತುರದಿಂದ, ನಿನ್ನನ್ನು ' ಅವಿಶ್ವಾಸಿನಿ' ಯೆಂದವರಾರು ? ಗಂಗೆ-ಬಾಧ್ಯ ಪಟ್ಟವರಿರುವಾಗ ಮತ್ತಾರು ಹೇಳುವರು ? ತಾರಾಪತಿ-ನಾನೆಂದು, ನಿನ್ನನ್ನು ಹಾಗೆ ಹೇಳಿರುವುದು ? ಗಂಗೆ-ಬಾಯ್ದೆರೆದು ಹೇಳಿಲ್ಲ ; ಮನದಲ್ಲಿಯೇ ಭಾವಿಸುತ್ತಿರುವಿರಿ. ಮುಂದೆ ಬಾಯ್ದೆರೆದು ಹೇಳಿದರೂ ಹೇಳಬಲ್ಲಿರಿ | ತಾರಾಪತಿ-ಗಂಗೆ ! ನಿನಗೆ ನೀನೇ ಹೀಗೆ ಬೇರೆಬೇರೆ ಕಾರಣಗಳನ್ನು ತೆಗೆದು, ನನ್ನನ್ನು ನೋಯಿಸುವುದು ಸರಿಯಲ್ಲ. ಹಾಗೇನಾದರೂ ತಪ್ಪಿದ್ದರೆ ತಿಳಿಯಹೇಳು. ಗಂಗೆ-ನಂಬುವುದೊಂದು ಗೊತ್ತಾದರಲ್ಲವೇ ಹೇಳುವುದು ? ತಾರಾಪತಿ-ಗಂಗೆ ! ನಿನ್ನ ಸಂಶಯಕ್ಕೆ ನಾನು ಎಷ್ಟು ಮಾತ್ರಕ್ಕೂ ಕಾರಣನಲ್ಲ, ನಾನಾವಾಗಲೂ ನಿನ್ನನ್ನು ಅವಿಶ್ವಾಸಿನಿಯೆಂದೂ - ಭಾವಿಸಿಲ್ಲ. ಹೀಗಿದ್ದೂ ನಿನಗಿಷ್ಟರಕೋಪವೇಕೆ ? ಗಂಗೆ-ಮಂದಹಾಸದಿಂದ “ ನಿಮಗೆ ನನ್ನಲ್ಲಿ ಹಾಗೆ ಭರವಸೆಯಿರುತ್ತಿ ದ್ದರೆ, ನಿಮ್ಮ ವ್ಯಾಕುಲಕ್ಕೆ ಕಾರಣವೇನೆಂಬುದನ್ನು ನನಗೆ ಹೇಳ ದಿರುತ್ತಿದ್ದೀರೇನು? ಈಗಲೂ ಮುಳುಗಿಹೋಗಲಿಲ್ಲ; ಸ್ನಾನಕ್ಕೇಳಿರಿ.' ತಾರಾಪತಿ-ಇಲ್ಲ; ಕೋಪಿಸಬೇಡ, ನಾನು ಊಟಮಾಡುವುದಿಲ್ಲ, ಗಂಗೆ--ಹುಬ್ಬುಗಂಟಿಕ್ಕಿ ' ನಾನು ಎಷ್ಟು ಬಗೆಯಾಗಿ ಹೇಳಿದರೂ ಲಕ್ಷ್ಯ ಕ್ಕೆ ಬಾರದು. ಈ ಭಾಗ್ಯಕ್ಕೆ ನನ್ನ ಸ್ನೇಕೆ ಉಳಿಸಿರಬೇಕು ? ಇಷ್ಟ ವಸ್ತುವನ್ನೇಕೆ ಕರೆದೊಯ್ಯ ಬೇಕು ? ದೈವಕ್ಕೂ ನಾನು ಬೇಕಾಗಿ ಇವೇನು ? ಆಕೆಯಂತೆಯೇ ನಾನೂ ಸತ್ತಿದ್ದರೆ,......? ತಾರಾಪತಿ-ಆತುರದಿಂದ, ಪತ್ನಿ ಯಬಾಯನ್ನು ಮುಚ್ಚಿ " ಹಾಗೆ ಮನ ಬಂದಂತೆ ಹೇಳಬೇಡ, ಆಕೆಯೂ ಸತ್ತಿಲ್ಲ; ನೀನೂ ನನಗೆ ಅಹಿತಳಲ್ಲ.'