ಪುಟ:ದಕ್ಷಕನ್ಯಾ .djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬L ಸ ತಿ ಹಿ ತೃ ಷಿ ಣಿ ಸುನಂದೆಯು ಪತಿಯ ಮಾತನ್ನು ಮಾರದೆ ಕಣ್ಣೀರನ್ನು ತಡೆದು, ಪತಿಯ ಮುಖವನ್ನೊಮ್ಮೆ ನೋಡಿದಳು, ಮಾತನಾಡಲಿಕ್ಕಾಗಲೀ-ಮತ್ತೆ ಮತ್ತೆಯೂ ನೋಡಲಿಕ್ಕಾಗಲೀ, ಇವಳಿಂದ ಸಾಧ್ಯವಾಗಲಿಲ್ಲ. ಪತಿಯ ವಾಕ್ಯಕ್ಕೆ ಉತ್ತರವಾಗಿ ಒಂದುಸಾರಿ ಬಲವಾಗಿ ನಿಟ್ಟುಸಿರಿಟ್ಟು ಸುಮ್ಮ ನಾದಳು. ತಾರಾಪತಿ-ಮತ್ತೆ ಪತ್ನಿ ಯ ಮುಖವನ್ನೇ ನೋಡುತ್ತ-' ಮಾತನಾಡ ಲೊಲ್ಲೆಯಾ, ಪ್ರಿಯೆ ? ಈವರೆಗೂ ಇಲ್ಲಿಗೆ ಬರಲಿಷ್ಟವಿರಲಿಲ್ಲವೇ ? ಏಕೆ ಬರಲಿಲ್ಲ ? ಹೇಳು.' - ಸುನಂದೆಗೆ ಇನ್ನು ಸುಮ್ಮನಿರುವುದು ಸರಿಯಾಗಿ ಕಾಣಲಿಲ್ಲ. ಆದರೆ, ನಾಲಿಗೆಯಲ್ಲಿ ದ್ರವವಾದರೂ ಇರಲಿಲ್ಲ, ಮಾತನಾಡುವ ಬಗೆ ಹೇಗೆ ? ಅಡಿಗಡಿಗೂ ನಿಟ್ಟುಸಿರಿಡುತ್ತ, ಬಹು ಕಷ್ಟದಿಂದ ಪತಿಯನ್ನು ಕುರಿತು ಹೇಳಿದಳು-' ನಾನು ಇದಕ್ಕೇನು ಹೇಳಲಿ ? ಇಷ್ಟವಿತ್ತೋ, ಇರ ಲಿಲ್ಲವೋ, ಹೇಗಿದ್ದೆನೊ, ಏಕೆ ಬರಲಿಲ್ಲ ವೋ, ಆ ಸರ್ವಸಾಕ್ಷಿಯಾದ ಭಗವಂತನೊಬ್ಬನಿಗೇ ಗೊತ್ತು ' ಮುಖ್ಯವಾಗಿ, ಅನಿರೀಕ್ಷವಾಗಿ ಬಂದೊದ ಗಿದ ಪ್ರಾಣಾಪತ್ತಿನಲ್ಲಿಯೂ, ಸಮಾಧಾನವನ್ನುಂಟುಮಾಡಿರುವ ಪ್ರಭು ದರ್ಶನವು ಇಷ್ಟವಾಗಿರಲಿಲ್ಲ ವೆಂದು ಹೇಗೆ ಹೇಳಲಿ ? ಇಂದಾದರೂ, ಈ ದೀನಚೇತನದಲ್ಲಿ ಭಗವತ್ಸೆಯುಂಟಾಗಿ, ಜನ್ಮ ಸಾರ್ಥಕತೆ ಹೊಂದುವಂತೆ ಆಯಿತೆಂಬ ಸಂತೋಷವೇ ನನಗೆ ಸಾಕು. ಆದರೆ,.........' ಎಂದು ಅರ್ಧೋಕ್ತಿಯಲ್ಲಿಯೇ ನಿಲ್ಲಿಸಿ, ಕ್ಷಣಕಾಲ ಸುಮ್ಮನಿದ್ದು ಬಳಿಕ ದೈನ್ಯ ದಿಂದ-' ಹಾ, ಕಂದಾ ! ಮಿತ್ರವಿಂದಾ !! ಅಯ್ಯೋ, ನನ್ನ ಮೋಹದು ಕ್ಯಂದಾ !!! ನೀನೆಲ್ಲಿರುವೆ ? ಏನಾದೆ ? ಈ ಪಾಪಿಗೆ ಮೊಗದೋರು !? ಎಂದು ಕೂಗುತ್ತೆ ಮತ್ತೆ ಮೈಮರೆದಳು. ತಾರಾಪತಿರಾಯನು, ಪತ್ನಿಯ. ಆರ್ತಾಲಾಪದಿಂದ ಮತ್ತೂ ಅಧೀರನಾಗಿ, ಕರ್ತವ್ಯಜ್ಞಾನಶೂನ್ಯತೆಯಿಂದ ಸ್ತಬ್ದನಾಗಿ ಕುಳಿತನು.