ಪುಟ:ದಕ್ಷಕನ್ಯಾ .djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೭ ದ ಕ ಕ ನ್ಯಾ ಶುಭವರ್ತಮಾನವನ್ನು ಹೇಳ ಹೋಗಿದ್ದ ಯಮುನೆಯು ಚಂದ್ರ ಮತಿಯಲ್ಲಿ ತಿಳಿಸಿದಳು. ಚಂದ್ರಮತಿಯು ಆನಂದಪಾರವಶತೆಯಿಂದ ಮೊಮ್ಮಗನನ್ನೆತ್ತಿ ಕಂಕುಳಲ್ಲಿಟ್ಟು, ಸೊಸೆಯಿದ್ದೆಡೆಗೆ ಯಮುನೆಯೊಡನೆ ಓಡಿಬಂದಳು; ನೋಡಿದಳು. ಪುತ್ರನು ಪರವಶನಾಗಿ ಕುಳಿತಿದ್ದನು. ಪುತ್ರ ವಧುವು (ಸೊಸೆ) ಮೂರ್ಛಿತೆಯಾಗಿದ್ದಳು. ಹೆತ್ತೊಡಲ ದುಃಖವನ್ನು ಹೇಗೂ ತಡೆಯಲಾರದೆ, ಚಂದ್ರಮತಿಯು ನಿಂತಲ್ಲಿಯೇ ಚಲಿಸದೆ ಕುಳಿತು ಬಿಟ್ಟಳು. ಯಮುನೆಯು, ಸಂತಾಪಾಧಿಕ್ಯದಿಂದ ಬೇಪ್ಪಾರಹಿತರಾಗಿ ಕುಳಿತಿದ್ದ ಸತೀಪತಿಗಳಿಗೆ ಶೈತ್ಯೋಪಚಾರ ಮಾಡಿ ಎಚ್ಚರಿಸಿದಳು, ಸುನಂ ದೆಯು ಸ್ವಲ್ಪ ಹೊತ್ತಿನಲ್ಲಿಯೇ ಎಚ್ಚೆತ್ತು ಕಣ್ಣೆರೆದು ನೋಡಿದಳು. ತಾರಾಪತಿ-ಸುನಂದಾ ! ಹೇಳು, ವಿಂದೆಯೇನಾದಳು ? ವಿಚಾರವೇನು ? ಹೇಳಲಾರೆಯಾ ? ಸುನಂದೆ - ಗದ್ದ ದಸ್ವರದಿಂದ- ನನ್ನ ಎಂದೆ ಕಳ್ಳರ ಪಾಲಾದಳು !? • ಸಿಂದೆಯು ಕಳ್ಳರ ಪಾಲಾದಳು ' ಹಾ ! ಎಂತಹ ಮಲ್ಯಾ೦ ತಿಕ ಶಬ್ದ !” ತಾರಾಪತಿರಾಯನು ತನ್ನೆರಡು ಕೈಗಳಿಂದೆಯೂ ತಲೆಯನ್ನು ಬಿಗಿಯಾಗಿ ಹಿಡಿದು ಕುಳಿತನು. ಯಮುನೆಯು ಶಕ್ತಿ ಶೂನ್ಯಳಾಗಿ ಕುಳಿತುಬಿಟ್ಟಳು. ಚಂದ್ರಮತಿ-ಕಣ್ಣೀರ್ಗರೆದು-' ತಾಯಿಾ ! ಮಗುವೇನಾದಳು ? ಕಳ್ಳ ರೆಲ್ಲಿಂದ ಬಂದರು ? ಹೇಗೆ ಕಳುವಾದಳು ? ವಿಚಾರವೇನು ? ಮೆಲ್ಲನೆ ಹೇಳಬಲ್ಲೆಯಾ ?' ಸುನಂದೆ-ಬಲವಾಗಿ ನಿಟ್ಟುಸುರಿಟ್ಟು, ಕಷ್ಟದಿಂದ ಹೇಳತೊಡಗಿದಳು “ ಇಲ್ಲಿಂದ ಬರಹೇಳಿ ಒರೆದಟ್ಟಿದ ಪತ್ರವು ಮೊನ್ನೆಯೇ ನನ್ನ ಕೈ ಸೇರಿತು. ಇಷ್ಟು ದಿನಗಳ ಬಳಿಕಾದರೂ ಇತ್ತ ಗಮನ ಬಂತೆಂಬ ಸಂತೋಷದಿಂದ, ನನ್ನ ತಂದೆತಾಯಿಯವರು ಆಗಲೇ ನನ್ನನ್ನು ಕಳಿಸಲು ಒಪ್ಪಿದರು. ಆ ದಿನವೇ ಪ್ರಯಾಣಕ್ಕೆ ಬೇಕಾದ ಸನ್ನಾ