ಪುಟ:ದಕ್ಷಕನ್ಯಾ .djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದ ಕ ಕ ನಾ ೭೯ ತಾರಾಪತಿ-ಭಯದಿಂದ ' ಆಮೇಲೆ ? ? ಸುನಂದೆ-ಮತ್ತೆ ನಾನು ಕಣ್ಣೆರೆದು ನೋಡುವಷ್ಟರಲ್ಲಿ, ಕಳ್ಳರು ಓಡಿಹೋ ಗಿದ್ದರು, ನನ್ನ ಬಂಡಿಯಸುತ್ತಲೂ ಆಯುಧಪಾಣಿಗಳಾದ ವೀರ ಭಟರು ಕಾವಲಿದ್ದು, ನನಗೂ ಮತ್ತು ನಮ್ಮ ಕಡೆಯವರಿಗೂ ಧೈದ್ಯ ವನ್ನು ೦ಟುಮಾಡುತ್ತಿದ್ದರು. ಕಾಲುಗಂಟೆಯೊಳಗಾಗಿ ತರುಣವೀರ ನೊಬ್ಬನು ಮೋಹನನನ್ನು ಕುದುರೆಯ ಮೇಲೇರಿಸಿಕೊಂಡುಬಂದು ಬಂಡಿಯಲ್ಲಿ ಕುಳ್ಳಿರಿಸಿ, ನನ್ನ ಕಟ್ಟನ್ನು ಬಿಚ್ಚಿ ನನ್ನನ್ನು ಕುರಿತು, “ ತಾಯಿ ! ನಿರ್ಭಯವಾಗಿರಿ, ನಿಮ್ಮ ಮಗನ ಪ್ರಾಣವನ್ನು ತೆಗೆಯುತ್ತಿದ್ದವನು ನನ್ನ ಪಿಸ್ತೂಲಿಗೆ ಬಲಿಯಾದನು ನಿಮ್ಮ ಮಗಳಿಗೆ ಪ್ರಾಣಾಪಾಯವಾಗದಂತೆ ಕರೆತಂದೊಪ್ಪಿಸುವ ಭಾರವೂ ನನ್ನದಾಗಿದೆ. ನಾನಾರೆಂಬುದನ್ನು ನೀವು ಈಗ ಕೇಳಬೇಕಾಗಿಲ್ಲ. ನಿಮ್ಮನ್ನು ನಮ್ಮ ಕಡೆಯವರು ಜಾಗರೂಕತೆಯಲ್ಲಿ ಕರೆದುಕೊಂಡು ಹೋಗಿ, ನಿಮ್ಮ ನೆಲೆಗೆ ಬಿಟ್ಟು ಬರುವರು.' ಎಂದು ಹೇಳಿ, ನನ್ನನ್ನು ತನ್ನ ಕಡೆಯವರೊಡನೆ ಇಲ್ಲಿಗೆ ಕಳಿಸಿದನು. ಗಾಯಪಟ್ಟವರನ್ನು ತನ್ನ ಜತೆಯಲ್ಲಿಯೇ ಕರೆದೊಯ್ದನು. ತಾರಾಪತಿ-ಕುತೂಹಲದಿಂದ ' ಆತನಾರಿರಬಹುದು ?' ಚಂದ್ರಮತಿ--ಯಾರಾದರೂ ಆಗಿರಲಿ, ಭಗವಂತನೇ ಅವನಾಗಿ ಬಂದಿ ದ್ದನೆಂದು ನಂಬಿದ್ದರಾಗದೇ ! ಹೇಗಾದರೂ, ಯಾರದಯೆಯಿಂ ದಾದರೂ ಮಗು ಸಿಕ್ಕಿದರೆ ಸಾಕು. ತಾರಾಪತಿ-ದೈವೇಚ್ಛೆ ! ಮೃತ್ಯು ಮುಖದಲ್ಲಿದ್ದ ಮೋಹನನನ್ನು ತಂದಿತ್ತ ವನೇ, ಕೈತಪ್ಪಿ ಹೋಗಿರುವ ನಿಂದೆಯನ್ನೂ ಕರೆತರಬಹುದು. ಆದರೆ, ಆ ಭಾಗ್ಯವು ನನ್ನ ಅದೃಷ್ಟದಲ್ಲಿದೆಯೋ ; ಇಲ್ಲವೋ ? ಯಮುನಾ-ಅಣ್ಣಾ ! ಎಂದೆಗೆ ಅಪಾಯವೇನೂ ಇಲ್ಲವೆಂಬುದು ನನಗೆ ಗೊತ್ತಿದೆ. ಪ್ರತ್ಯಕ್ಷವಾಗಿರುವ ಭಾಗ್ಯದೇವತೆಯ ಮುಂದೆ, ಹೀಗೆ