ಪುಟ:ದಕ್ಷಕನ್ಯಾ .djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೧ ದ ಕ ಕ ನ್ಯಾ ಈಗಲೂ ಮುಳುಗಿಹೋಗಲಿಲ್ಲ. ಗಂಗೆಯೇ ಇಲ್ಲಿಗೆ ಬರುತ್ತಿರುವಳು ; ನೋಡಿರಿ, ಇವಳ ಮುಖವು ಬಾಡಿಹೋಗಿದೆ ; ಕಣ್ಣಿನಲ್ಲಿ ನೀರು ಸೋರು ತಿದೆ ; ತಲೆಯು ಬಾಗಿದೆ. ಹೀಗಾದುದೇಕೆ ? ಮೊದಲಿದ್ದ ಉತ್ಸಾಹ ಗೆಲ್ಲಿಹೋಯಿತು ? ಯಾರಿಗೆಗೊತ್ತು ? ' ಈವರೆಗೂ ಬಾರದೆ ಎಲ್ಲಿದ್ದಳು ? ಏನುಮಾಡುತ್ತಿದ್ದಳು ?” ಎಂದು ಕೇಳುವಿರಿ, ಅಂಗಳದಲ್ಲಿದ್ದೇ, ವಿಚಾರ ಗಳನ್ನು ನೋಡಿ-ಕೇಳಿ ತಿಳಿಯುತ್ತಿದ್ದಳೆಂದು ಮಾತ್ರ ಹೇಳಬಲ್ಲೆವು. ಬಾರದಿದ್ದುದೇಕೆಂದರೆ, ಅಬಲಾಸ್ವಭಾವದಲ್ಲಿ ಅಭಿಮಾನವೂ ಬಹುವಾಗಿರ ಬೇಕಲ್ಲವೇ ? ಕರೆಯಿಸಿಕೊಳ್ಳದೆ ತಾನಾಗಿಯೇ ಇವರ ಸುಖಸಲ್ಲಾಪದ ಮಧ್ಯದಲ್ಲಿ, ಹೋಗುವುದು ಸರಿಯಲ್ಲವೆಂದು ನಿಂತಿದ್ದಳೆಂದರೆ ಆಕ್ಷೇಪವೋ ? ಅದು ಹೇಗೂ ಇರಲಿ, ಗಂಗೆಯು ಬಂದು ಸುನಂದೆಗೆ ವಂದಿಸಿದಳು. ಸುನಂದೆ-ಗಂಗೆಯ ಕೈ ಹಿಡಿದು ' ತಂಗಿ ! ಬಾ ; ಕುಳಿತುಕೊ, ಭಗ ವಂತನು ನಮ್ಮಿಬ್ಬರನ್ನೂ ಸಮಾನಸುಖಿಗಳನ್ನಾಗಿ ಮಾಡಿರಲಿ. ಇದೇ ನನ್ನ ಹರಕೆ.' ಎಂದು ಬಳಿಯಲ್ಲಿ ಕುಳ್ಳಿರಿಸಿಕೊಂಡಳು. ಗಂಗೆ-ಸುನಂದೆಯಬಳಿಯಲ್ಲಿ ಕುಳಿತು, ಮೋಹನಕುಮಾರನ ಕೈಹಿಡಿದು ಕಂಪಿತಸ್ಕರದಿಂದ ' ಅಕ್ಕ ! ಇಂದಿನವರೆಗೂ ಯಜಮಾನರಲ್ಲಿ ಉತ್ಸಾಹವೆಳ್ಳಷ್ಟನ್ನಾದರೂ ನಾನು ನೋಡಿರುವುದಿಲ್ಲ, ಸಾಕು ; ಬಹುಕಾಲದಿಂದ ನಿರೀಕ್ಷಿಸುತ್ತಿದ್ದ ಫಲವು, ಇಂದು ಕೈಸೇರಿತೆಂಬ ಒಂದು ಸಂತೋಷವೇ ನನಗೆ ಅನಂತವಾಗಿದ್ದರೆ ಸಾಕು. ಆದರೆ, ನಾನು, ಈವರೆಗೂ ಮರೆಯಾಗಿ ಕೇಳುತ್ತ, ವಿಚಾರವೆಲ್ಲವನ್ನೂ ತಿಳಿದೆನು, ಹುಡುಗಿಯು ಕೈತಪ್ಪಿ ಹೋಗಿರುವುದು ಶೋಚನೀಯ ಸಂಗತಿಯಾಗಿದೆ. ಅವಳೂ ಸಿಕ್ಕಿದರೆ, ನಮ್ಮ ಆನಂದಕ್ಕೆ ಮೇರೆಯೇ ಇಲ್ಲದಂತಾಗುವುದು.' ತಾರಾಪತಿರಾಯನಿಗೆ ಗಂಗೆಯ ಹಿತವಚನಗಳಿಂದ ಮಾಧಾನವು ಅಷ್ಟಿಷ್ಟೆಂದು ವಿವರಿಸುವಂತಿಲ್ಲ, ಈವರೆಗೂ ಇವಳ ಕೈ