ಪುಟ:ದಕ್ಷಕನ್ಯಾ .djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೨ ಸ ತಿ ಹಿ ತೃ ಷಿ ಬಾಯಿಂದ ಇಂತಹ ಅಮೃತತುಲ್ಯವಾದ ವಾಣಿಯು ಹೊರಬಿದ್ದುದನ್ನು ಅವನು ಕಂಡು ಕೇಳಿರಲಿಲ್ಲವಾದುದರಿಂದ, ಇಂದಿನ ಪತ್ನಿ ಯ ಪರಿವರ್ತನವೂ ದೈವಾಯತ್ತವೆಂದೇ ಭಾವಿಸಿ, ಪದ್ವಯವನ್ನು ನೋಡಿನೋಡಿ ತಣಿಯ ಲಾರದವನಾಗಿದ್ದನು ಸುನಂದೆಯ ಜತೆಯಲ್ಲಿ ಬಂದಿದ್ದ ಭಟರೆಲ್ಲರೂ ಅಪ್ಪ ಣೆಹೊಂದಿ ಹೊರಟುಹೋದರು. ಮನೆಯಲ್ಲಿದ್ದ ದಿವಾನ-ಗೊಲ್ಲ-ಕರಣಿ ಕರೇ ಮೊದಲಾದವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸುನಂದೆಯನ್ನು ಕಂಡು, ಕೈಮುಗಿದು ಕೆಲಸಗಳಿಗೆ ಹೋದರು. ಜಮಿಾನ್ಮಾರನು ಪತೀಪು ತ್ರಸಹಿತನಾಗಿ ಭೋಜನಾನಂತರದಲ್ಲಿ ಲಕ್ಷ್ಮಿ ನಿಲಯವನ್ನು ಪ್ರವೇಶಿಸಿ ದನು, ಅಂದಿನ ಸಂಭ್ರಮವನ್ನು ಹೇಳುವಂತಿರಲಿಲ್ಲ. ಆದರೆ, ಸಂಭ್ರಮಮ ಧ್ಯದಲ್ಲಿಯ ಸುನಂದೆಯು, ಪುತ್ರಿ ಕಾವಿರಹಸಂತಾಪವನ್ನು ತಡೆಯಲಾರದೆ ಮನದಲ್ಲಿಯೇ ಮರುಗುತ್ತಿದ್ದಳು, ಪತಿಯ ಮುಖೋಲ್ಲಾಸಕ್ಕಾಗಿ ಹೃತ್ರಾ ಪವನ್ನಡಗಿಸಿಕೊಂಡು ಪ್ರಸನ್ನ ಮುಖಿಯಾಗಿದ್ದಳು. ಇದಲ್ಲವೇ, ಸಾದ್ವಿ ವರ್ತನವೆಂಬುದು ! ಹೀಗಲ್ಲವೇ ಇರಬೇಕು ? ನಮ್ಮ ಮಹಿಳಾಮ್ರಾತಕ್ಕೆ ಕಾಂತಿದಾಯಕವಾದ ಭೂಷಣವಾದರೂ ಇದೇ ಅಲ್ಲವೇ ? ಅಂತಾದರೆ ಅದು ನಿರಂತರವೂ ನಮ್ಮನ್ನೆಡಬಿಡದೆ ಅಲಂಕರಿಸುತ್ತಿರಲಿ •��