ಪುಟ:ದಕ್ಷಕನ್ಯಾ .djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೮೬ ಸ ತಿ ಹಿ ತೃ ಷಿ ಣಿ ರಾಧಾನಾಧ-ಇಂತಹ ಸಂಕಟಕಾಲದಲ್ಲಿ, ತಕ್ಕಷ್ಟೂ ಹಿತವನ್ನಾಡಿ ಸಂತಯಿಸುವುದೇ ಸ್ನೇಹದ ಲಕ್ಷಣವು ; ಹಿಂತೆಗೆದು ಸುಮ್ಮನಿರು ವುದು ನಿಜವಾದ ಸ್ನೇಹವೆನ್ನಿ ಸದು. ಸುಕನ್ಯಾ -ಹಾಗಾದರೆ, ಇಷ್ಟರಲ್ಲಿಯೇ ವಿರಾಮಹೊಂದಿ, ಹೋಗಿ ನೋಡಿ ಬರುವೆನು. ಇರಲಿ ; ಈಚೆಗೆ ನಿಂದೆಯ ವರ್ತಮಾನವೇ ನಾದರೂ ಬಂದಿದೆಯೇ ? ಸಮಾಚಾರವೇನು ? ರಾಧಾನಾಧ-ಇನ್ನೂ ಯಾವ ವಿಚಾರವೂ ಬಂದಿಲ್ಲ, ವಿಚಾರಿಸಬೇ ಕೆಂದೇ ಇಂದು ಬೇಗ ಬಂದೆನು. ಸುಕನ್ಯಾ - ಈ ಪಟ್ಟಣದಲ್ಲಿ ಅಲ್ಲಲ್ಲಿ ನಡೆಯುತ್ತಿದ್ದ ಪುಂಡಾಟಗಳೆಲ್ಲವೂ ಒಂದುಗೂಡಿ, ಜಮಾನ್ದಾರರ ಮನೆಯ ಮೇಲೆ ತಿರುಗಿಬಿದ್ದಿರು ವಂತೆ ತೋರುತ್ತಿದೆ. ಇದರ ಪರಿಣಾಮವು ಹೇಗಾಗುವುದೋ ತಿಳಿಯದು. ರಾಧಾನಾಧ-ಮಾಡುವುದೇನು ? ಪುಂಡಾಟವನ್ನ ಡಗಿಸಿ, ನೆಮ್ಮದಿಯನ್ನು ಕಾಪಾಡಲಿಕ್ಕೆಂದೇ ನೇಮಿಸಲ್ಪಟ್ಟಿರುವ ನಮ್ಮ ವಾಸುದೇವನು, ಇಷ್ಟು ಅನರ್ಧವಾಗಿದ್ದರೂ ಸುಮ್ಮನಿರುವುದನ್ನು ನೋಡಿದರೆ, ಸಂಶಯವಾಗುತ್ತಿದೆ. ಸುಕನ್ಯಾ-ನಮ್ಮ ವಾಸುದೇವನ ನಡತೆಯು ನನಗೆ ತೃಪ್ತಿಕರವಾಗಿಲ್ಲ. ಈಗ ಏಳೆಂಟು ದಿನಗಳಿಂದ ಅವನ ಮುಖವೇ ವಿಕಾರವಾಗಿ ಕಾಣುತ್ತಿದೆ ; ಅವನ ಬಾಯಿಂದ ಹೊರಡುವ ಪ್ರತಿಮಾತುಗಳೂ, ಪೂರ್ವಾಪರ ವಿರುದ್ದ ಗಳಾಗಿಯೇ ತೋರುತ್ತಿವೆ. ಈಗ ಅವನು ನಿಸ್ಸಹನಾಗಿಲ್ಲವೆಂಬುದನ್ನು ಆತನ ನಡೆ-ನುಡಿ-ನೋಟಗಳಿ೦ದ ಚೆನ್ನಾಗಿ ತಿಳಿಯಬಹುದು. ಈಚೆಗೆ, ಅವನು ದುಸ್ಸಹವಾಸದಲ್ಲಿ ಸೇರಿ ಕೆಡುತ್ತಿರುವನೆಂಬುದೇ ನನ್ನ ಭಾವನೆಯಾಗಿದೆ. ಅದಲ್ಲದೆ, ಮೊನ್ನೆಯ ರಾತ್ರಿ ಹೊರಟುಹೋದವನು, ಇನ್ನೂ ಮನೆಗೆ