ಪುಟ:ದಾಮಿನಿ.djvu/೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾಮಿನಿ. ಒಂದು ದಿನ ರಾತ್ರಿ ಸುಮಾರು ಎರಡು ಚಾವಗಳಾಗಿರಬಹುದು; ಶೀತಲ ವಾದ ಗಂಗಾಜಲದಲ್ಲಿ ಉನ್ಮಾದಿನಿಯು ಅವಗಾಹನಸ್ನಾನಮಾಡಿ, ಆ ಭಗ್ನಮಂದಿ ರದ ಮಾಳಿಗೆಯ ಮೇಲೆ ಕತ್ತಲೆಯಲ್ಲಿ ಕುಳಿತು ಕೂದಲನ್ನು ಒಣಗಿಸಿಕೊಳ್ಳುತ್ರಿ ದೃಳು, ಕೂದಲ ರಾಶಿಯು ನಾನಾ ದಿಕ್ಕುಗಳಲ್ಲಿ ನಾನಾವಿಧವಾಗಿ ಹಾರಾಡು ತಿತ್ತು; ಓಲಾಡುತ್ತಿತ್ತು, ಅಷ್ಟರಲ್ಲಿ ಯೆ, ಪೂರ್ವನಿಯ ಅರಳಿಯ ಮರದ ಕೆಳಗೆ ಹಠಾತ್ತಾಗಿ ಒಂದು ಕುದುರೆಯ ಹೇಷಾರವವು ಕೇಳಬಂದಿತು, ಬಲಗಯ್ಯಲ್ಲಿ ಕೇ ತಗುಡ್ಡ ವನ್ನು ಹಿಡಿದು, ಅತೀತೀಕದೃಷ್ಟಿಯಿಂದ ಉನ್ಮಾದಿನಿಯು ಆ ವೃಕ್ಷ ಮೂಲ ವನ್ನು ನೋಡುತ್ತ ನಿಂದಳು. ನೋಡಿಗಳು;- ಕ್ರಮಕ್ರಮವಾಗಿ ಒಂದೆರಡು ದೀವ ಟಿಗೆಗಳನ್ನು ಹಚ್ಚಿದರು. ಅದರ ಬೆಳಕಿನಲ್ಲಿ ಅಸ್ತ್ರಧಾರಿಗಳಾದ ಕೆಲವು ಸೈನಿಕರೂ। ಅಶ್ವಾರೋಹಿಯಾದ ಪುರುಷನೊ ಬ್ಬನೂ ಕಾಣಬಂದರು, ಅವರು ಕಳ್ಳರಿರಬಹು ದೆಂದು ಅವಳು ಮೊದಲು ಯೋಚಿಸಿದಳು. ಆಮೇಲೆ ಎಲ್ಲಿಯಾದರೂ ತನ್ನ ದಾ ಮಿನಿಯ ಮನೆಯಲ್ಲಿ ಕಳವುಮಾಡಿಬಿಟ್ಟರೆ? - ಉನ್ಮಾದಿನಿಗೆ ಅದೇ ಭಯ; ಅದೇ ಆಶಂಕೆ, ಬೇಗಬೇಗನೆ ಮಾಳಿಗೆಯನ್ನಿಳಿದು, ಕಳ್ಳರ ಬಳಿಗೆ ಹೋಗಬೇಕೆಂದು ಹೊರ ಟಳು, ಹೊರಟವಳಿಗೆ ಮನಸ್ಸಿನಲ್ಲಿ ಏನೋ ತೋರಿತು. ಪುನಃ ಮನೆಯೊಳಕ್ಕೆ ಹೋii, ಭೈರವೀವೇಷವನ್ನು ಧಾರಣಮಾಡಿಕೊಂಡು, ಭೀಕರವಾದ ತ್ರಿಶೂಲವನ್ನು ಕಯ್ಯಲ್ಲಿ ಹಿಡಿದು, ದರ್ಪದಿಂದ ಹೊರಸಾರಿದಳು. ಸ್ವಲ್ಪ ಸವಿಾಪಕ್ಕೆ ಹೋದ ಮೇಲೆ, ಪಲ್ಲಕ್ಕಿಯೊಂದು ಕಾಣಿಸಿತು. ಉನ್ಮಾಟಸಿಯ ಮನಸ್ಸಿನಲ್ಲಿಯೆ ಯೋ ಚಿಸತೊಡಗಿದಳು:- “ ಇವರು ಕಳ್ಳರು ಕಳ್ಳರಿಗೆ ಪಲ್ಲಕ್ಕಿಯೇಕೆ? ಬಹಳಮಾಡಿ ಇವರಾರೋ ಕನ್ಯಾರ್ಥಿಗಳಾಗಿರಬೇಕು.” - ಹೀಗೆಂದು ಉನಾದಿಸಿಯೂ ಅವರೊ ರೊಡನೆ ಹೊರಟಳು. ದಾಮಿನಿಯ ಮದುವೆಯನ್ನು ನೋಡುವುದಂತೂ ಆಗಲಿಲ್ಲ; ಈ ವಿವಾಹವನ್ನಾದರೂ ನೋಡುವವೆಂದು ಪರಮಾಹ್ಲಾದದಿಂದ ಪಲ್ಲಕ್ಕಿಯ ಬೆಳೆ ಬೆತೆಯಲ್ಲಿಯೇ ಮುಂದೆ ನಡೆದಳು, ಕತ್ತಲೆಯಲ್ಲಿ ಆರೂ ಅವಳನ್ನ ಮೊದ: ನೋಡಲಿಲ್ಲ: ಹಾಗೆಯೇ ಸ್ವಲ್ಪ ದೂರ ಹೋದ ಒಳಿಕ, ಪಲ್ಲಕ್ಕಿಯನ್ನ ಹೊತ್ತವ ರಲ್ಲಿ ಯೊಬ್ಬನು ಅವಳನ್ನು ಕಂಡು ಕೋಪದಿಂದ-“ಯಾರೆ ನೀನು? ಇಂತಹ ಅವೇಳೆಯಲ್ಲಿ ನಮ್ಮ ಚಿತೆಯಲ್ಲಿ ಬರುತ್ತಿರುವೆ?.ಎಂದು ಕೂಗಿಕೊಂಡನು. ಅದಕ್ಕೆ ಹುಚ್ಚಿಯು- “ ಅಣ್ಣ! ಕೂಗಬೇಡ, ನಿಮ್ಮೊಡನೆ ವಿವಾಹವನ್ನು ನೋಡುವದ ಕೈಂದು ಬರುತ್ತಿದ್ದೇನೆ. ಆದರೆ, ವಾಲಗದವರೇಕೆ ಇಲ್ಲ?” – ಎಂದಳು. ಸೃಸಿಕನು ಹೇಳಿದನು: “ಇಗೊಂದು ಭಯಂಕರವಿವಾಹವು. ಇಂತಹ ಎ ವಾಹಕ್ಕೆ ವಾದ್ಯಗಳಿರುವುದಿಲ್ಲ.” ಆ ಮಾತನ್ನು ಹುಚ್ಚಿ ಯು ಕಿವಿಗೆ ಹಾಕಿಕೊಳ್ಳಲಿಲ್ಲ; ಅವನನ್ನು ತನ್ನ ಮನ