ಪುಟ:ದಾಮಿನಿ.djvu/೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

10 ಶ್ರೀಕೃಷ್ಣ ಸೂಕ್ತಿ ಮುಕ್ತಾವಳಿ.

  • * * * * * * * * * * * / # V/ /

- - - - - - - - - -

  • * * * * * - * *–

ಬಂದಂತೆ ಪ್ರಶ್ನೆಮಾಡತೊಡಗಿದಳು: “ವರನೆಲ್ಲಿಯವನು? ಕನೈಯೆಲ್ಲಿಯವಳು?” “ಹಿಂದೂಗಳ ಕನೆ; ಮುಸಲಮಾನರ ವರ!” “ಸಳ್ಳು ಮಾತು!” ರಮಣಿಯ ಹುಚ್ಚಿಯೆಂದು ತಿಳಿದುಕೊಂಡ ವಾಹಕನು ಅವಳೊಡನೆ (ತಮಾಷೆ' ಮಾಡಲಾರಂಭಿಸಿದನು. ವರನಾರೆಂದು ಉನ್ಮಾದಿನಿಯು ಪದೇಪದೇ ಕೇ ಳುತ್ತಿದ್ದುದರಿಂದ, ಅವನು ಅಶ್ವಾರೋಹಿಯನ್ನು ತೋರಿಕೊಟ್ಟನು. ಉನ್ಮಾದಿನಿ ಯೂ ನೋಡಿದಳು; ಅಸಂಭವವೆಂದು ತೋರಲಿಲ್ಲ, ವಯಸ್ಸು ಚಿಕ್ಕದು; ಜರತಾ ರಿಯ ಬಟ್ಟೆಗಳನ್ನು ಉಟ್ಟು ತೊಟ್ಟಿದ್ದಾನೆ; ಇದರ ಮೇಲೆ, ಏನನ್ನು ಕೇಳುವುದು? ಮತ್ತೇನನ್ನೂ ಮಾತನಾಡದೆ, ಅವಳು ಅವರ ಚಿತೆಯಲ್ಲಿಯೇ ಮುಂದೆ ನಡೆದಳು. ಸಂಗಡಿಗರ ಪರಿಚಯವನ್ನು ಕೊಡಕೂಡದೆಂದು ವಾಹಕನಿಗೆ ಕಾಣತಿಯಾ ತು. ಆ ಆಣತಿಯ ಕ್ರಮಕ್ರಮವಾಗಿ ಅವನಿಗೆ ಭಾರವೆಂದು ತೋರುತ್ತ ಒಂದಿದ್ದಿತಾಗಿ, ಹುಚ್ಚಿ ದೊರೆದೊಡನೆಯೆ ಅದನ್ನು ಇಳಿ ಹಿಬಿಡುವೆನೆಂದು ಅವನು ಆಲೋಚಿಸಿದ್ದನು. ಆದರೆ, ಆ ಹುಚ್ಚಿ ಆವ ಮಾತನ್ನೂ ಕೇಳದೆ ಹೋದುದರಿಂದ, ಅವನ ಆ ಆಸೆ ಪೂರಯ್ಯುವುದಕ್ಕೆ ವ್ಯಾಘಾತವೊದವಿತು. ಕೊನೆಗೆ ಏನಾದರೂ ಆಡಿಯೇ ಬಿಡುವೆನೆಂದು ನಿರ್ಧರಿಸಿ, ಅವನೇ ಹುಚ್ಚಿಯೊಡನೆ ಸಂಭಾಷಣೆಯನ್ನು ಪ್ರಾರಂಭಿಸಿದನು. ಹೇಳಿದನು: -- “ ನೀನು ಹೆಂಗುಸು, ನಮ್ಮ ಜೊತೆಯಲ್ಲಿ ಬರುವುದು ಒಳ್ಳೆದಲ್ಲ, ಇನ್ನು ಕೊಂಚ ಹೊತ್ತಿನಲ್ಲಿಯೇ `ಮಾರಾಮಾರಿ'ಗೆ ಆರಂಭವಾಗ) ವದು, ಸೀಸೀಗಲೇ ಪಲಾಯನಮಾಡು.” ವಿವಾಹವೆಂದರೆ ಶುಭಕಾರ್ಯ, ಅದರಲ್ಲಿಯೂ ಮಾರಾಮಾರಿ? ಯೇಕೆ?' ವಾಹಕ: – “ ಈ ವ್ಯಾಪಾರವು ವಿವಾಹವಲ್ಲ. ಅದೊ! ಅಲ್ಲಿ ನೋಡು. ಆವನು ಜರತಾರಿಯ ಬಟ್ಟೆಗಳನ್ನು ಧರಿಸಿ, ಕತ್ತಿಯನ್ನು ಹಿರಿದು, ಕುದುರೆಯ ಮೇಲೆ ಹೋಗುತ್ತಿರುವನೋ ಅವನು ನಮ್ಮ 'ಫೌಜುದಾರ'ರ ಮಗನು, ಈ ಗ್ರಾಮಾಂತರ ದಲ್ಲಿ ಅಪೂರ್ವಸುಂದರಿಯೊಬ್ಬಳಿರುವಳೆಂದು ಕೇಳಿ, ಅವಳನ್ನು ಬಲಾತ್ಕಾರದಿಂದ ಅಪಹರಿಸಿ ತರುವುದಕ್ಕಾಗಿ ಹೊರಟಿರುವನು. ಅದರಿಂದಲೇ ಹೇಳಿದೆನು- ಮಾರಾ) ಮಾರಿ'ಯಾಗುವುದೆಂದು.? ಹುಚ್ಚಿಯು ಭಯದಿಂದ ಕಂಪಿಸತೊಡಗಿಗಳು, ಕೇಳಿದಳು: “ಅಪ್ಪ! ಆರ ವಗಳನ್ನು ಅಪಹರಿಸಿ ತರಬೇಕೆಂದಿರುವಿರಿ?”