ಪುಟ:ದಾಮಿನಿ.djvu/೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾಮಿನಿ. 11 > # * * * * * * * * * *

  • * * * * * * * * * * * * ***

\ / \ , #\ # ?

  • * * * * * * * * \\
  • \//\r\ •

(3 ವಾಹಕನು ಹೇಳಿದನು:--“ಅದೆಲ್ಲವೂ ನನಗೆ ಚೆನ್ನಾಗಿ ತಿಳಿಯದು. ಅದಾವ ಛೋ ಭಟ್ಟಾಚಾರ್ಯನ ಸೊಸೆಯಂತೆ; ಅವಳ ಗಂಡನು ಕೆಲವು ದಿನಗಳಿಗೆ ಮೊದ ಲು ಆವನೋ ಒಬ್ಬ ಶಿಷ್ಯನ ಮನೆಗೆ ಹೋಗಿರುವನಂತೆ. ಸುಂದರಿಯ ಹೆಸರನ್ನು ದಾಮಿನಿಯೆಂದು ಹೇಳಿದರು.' ಕೇಳಿದೊಡನೆಯೇ, ಉನ್ಮಾದಿನಿಯು ಕಿಡಿಕಿಡಿಯಾಗಿ ಹೆಣ್ಣು ಹಾವಿನಂತೆ ವಾಹ ಕನ ಸಮ್ಮುಖದಲ್ಲಿ ದಾರಿಗಟ್ಟಿ ನಿಂದು, ಬಲಗಯ್ಯಲ್ಲಿ ತ್ರಿಶೂಲವನ್ನು ಒಳಪಿಸಿದಳು. ಆ ಭೀಕರಮೂರ್ತಿಯನ್ನು ನೋಡಿ, ವಾಹಕನು ಭಯಗೊಂಡು,- ತ್ರೈಮ! ನಾನು ಬಡವನು. ಹೊಟ್ಟೆಯ ಪಾಡಿಗಾಗಿ ಇದೆಲ್ಲವನ್ನೂ ಮಾಡುತ್ತಿದ್ದೇನೆ. ನನ್ನನ್ನು ಹೊಡೆದು ಆಗುವುದೇನು? ನಾನು ಹಿಂದೂ; ಹಿಂದೂಗಳ ಮೇಲೆ ಅತ್ಯಾಚಾರವ ನ್ನು ನಡೆಯಿಸುವುದು ನನಗೆ ಇಷ್ಟವಲ್ಲ. ಈಗಲೇನಾದರೂ ಗಂಬೆಮಾಡಿದರೆ, ಈ ಯವನರು ನಿನ್ನನ್ನು ತುಂಡುತುಂಡುಮಾಡಿ ಬಿಸುಡುವರು. ಆದುದರಿಂದ ನನ್ನ ಮಾತನ್ನು ಕೇಳು; ನೀನು ಬೇರೊಂದು ಮಾರ್ಗವಾಗಿ ಬೇಗಬೇಗನೆ ಹೋಗಿ, ಗಾ ಮವಾಸಿಗಳಿಗೆ ಈ ಸಂಗತಿಯನ್ನು ತಿಳಿಹಿ, ಜಾಗ್ರತೆಗೊಳಿಸು, ಎಲ್ಲರೂ ಏಕಸ್ಥರಾಗಿ ಅಡ್ಡಿ ಮಾಡಿದರೆ, ಸಿ 'ಇಷ್ಟವು ಸಫಲವಾದರೂ ಆಗಬಹುದು. ಇದಲ್ಲದೆ ಇನ್ನು ಬೇರೆಯ ಉಪಾಯವಿಲ್ಲ.'-ಎಂದನು. ಆಲಿಸಿದುದೇ ತಡ; ಹುಚ್ಚಿ ಯು ನಿಲ್ಲಲಿಲ್ಲ, ಓಡೋಡು ಹೋಗಿ, ಹಳಿ ಯನ್ನು ಹೊಕ್ಕು, ಪ್ರತಿಯೊಂದು ಮನೆಯ ಬಾಗಿಲಲ್ಲಿಯೂ ಚೀತ್ಯಾಗಮಾಡು ತ್ಯ, ಹೇಳತೊಡಗಿದಳು: - * ಹಿಂದೂಗಳ ಹಿಂದೂತ್ವವ ಹೋಗುತ್ತಿದೆ; ಎಲ್ಲರೂ ಏಳಿ! ಸತಿಯರ ಸತ್ಸವು ಹೋಗುತ್ತಿದೆ; ಒಂದು ಬಾರಿ ಎಲ್ಲರೂ ಏಳಿ! ಅದಿತಿ ಭಟ್ಟಾಚಾರ್ಯನ ಸರ್ವನಾಶವಾಗುತ್ತಿದೆ; ಎಲ್ಲರೂ 5ಳಿ! 'ಫೌಜುದಾರ'ನ ಮಗನು ಬಂದು ಅವನ ಸೊಸೆಯನ್ನು ಸೆಳೆದುಕೊಂಡುಹೋಗುತ್ತಾನೆ; ಎಲ್ಲರೂ ಒಂದು ಬಾರಿ ಏಳಿ; ಏಳಿ!!!” - ಆರೂ ಏಳಲಿಲ್ಲ; ಕೆಲಬರು ಹೇಳಿದರು:-- “ಶತ್ರು ಬಂದರೆ ಬರಲಿ! ಪರರಿಗೆ ಲ್ಲವೆ?” “ಇನ್ನೊಬ್ಬರಿಗಾಗಿ ತಲೆಗೊಡುವುದರಿಂದ ನಮಗೆ ಆಗುವ ಪ್ರಯೋಜನ ವೇನು?” ... ಎಂದು ಕೆಲಬರೆಂದರು, ಮತ್ತೆ ಕೆಲಬರು: – ಅದಿತಿಗೆ ಸರ್ವನಾಶ ವಾದರೆ ಆಗಬಾರದೇಕೆ? ಅದರಿಂದ ನಮಗೆ ಏನು ನಷ್ಟ?” – ಎಂದರು. ಇದೆ: ನಷ್ಟವಿದೆ. ಇತರದೇಶಗಳವರೆಲ್ಲರೂ ಅದನ್ನು ಬಲ್ಲರು; ಆದರೆ, ನಾವು ಮಾತ್ರ ಇನ್ನೂ ಅರಿಯೆವು, ಎಪತ್ತು ಇಂದು ನಮಗೆ; ನಾಳೆ ನಿಮಗೆ! ಅತ್ಯಾಚಾ ರವು ಒಂದು ಮನೆಯನ್ನು ಪ್ರವೇಶಮಾಡಕೂಡಿತೆಂದರೆ, ಎಲ್ಲ ಮನೆಗಳ ದಾರಿಯನ್ನೂ ಕಂಡುಹಿಡಿಯುವುದು, ಒಂದು ಮನೆಗೆ ಅಗ್ನಿಪ್ರವೇಶವಾದರೆ, ಎಲ್ಲ ಮನೆಗಳನ್ನೂ ಹೊತ್ತಿಸಿಬಿಡುವುದು, ಅನ್ಯರ ಮನೆಯ ಅಗ್ನಿಯನ್ನು ಆವನು ಆರಿಸುವನೋ, ಅವ