ಪುಟ:ದಾಮಿನಿ.djvu/೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

1) ಶ್ರೀಕೃಷ್ಣ ಸೂಕ್ತಿಮುಕ್ತಾವಳಿ

  • * * *

ನೇ ತನ್ನ ಮನೆಯನ್ನೂ ಕಾಪಾಡಿಕೊಳ್ಳುವನು, ಈ ಬಗೆಯ ಜ್ಞಾನವು ನಮ್ಮಲ್ಲಿ ಎಷ್ಟೋ ಕಾಲದ ಹಿಂದೆಯೇ ಅಂತರ್ಹಿತವಾಗಿಹೋಗಿದೆ; ಆದುದರಿಂದಲೇ, ಹುಚ್ಚಿ ಯ ಕೂಗಿಗೆ ಆರೂ ಕಿವಿಗೊಡಲಿಲ್ಲ! - ದುರ್ವತ್ಯಯವನರ ಅತ್ಯಾಚಾರವನ್ನು ಆರೂ ನಿವಾರಿಸಲಿಲ್ಲ ! ರಮೇಶನ ತಂದೆ ಅದಿತಿಸಿಶಾರದನು ಕೇವಲ ಏಕಾಕಿ; ಅದರಲ್ಲಿಯೂ ವೃತ್ಪನ್ನು, ದಾಮಿನಿ ಯನ್ನು ರಕ್ಷಿಸುವುದಕ್ಕೆ ಅವನಿಂದಾಗಲಿಲ್ಲ. ಯವನರು ಮನೆಯ ಬಾಗಿಲನ್ನೊಡೆದು ಮಚ್ಚಿರ್ ತೆಯಾದ ಆ ದಾಸಿಯನ್ನು ಎತ್ತಿಕೊಂಡುಹೋದರು ಹುಚ್ಚಿ ನೋಡಿದಳು; ಆರೂ ಏಳಲಿಲ್ಲ; -- ಆರೂ ಸಹಾಯಮಾಡುವರು ಅಲ್ಲದೆಯೋದರು. ರಮೇಶನ ಮನೆಯ ಬಾಗಿಲ ವರೆಗೂ ಒಂದು ನೋಡಿದಳು; ಎಲ್ಲವೂ ಮುಗಿದಿದೆ;--ದಾಮಿನಿಯನ್ನು ಎತ್ತಿಕೊಂಡೇ ಹೋಗಿದ್ದಾರೆ. ಅವಳ ತಲೆ ಯಲ್ಲಿ ಅಗ್ನಿ ಪ್ರಜ್ವಲಿಸತೊಡಗಿತು. ಮೊದಲಿನಂತೆಯೇ ಉನ್ಮತ್ತೆಯಾಗಿ, ಸಿಂಹಿ ಯಂತೆ ಒಂದು ಕ್ಷಣ ಅಲ್ಲಿ ನಿಂದಳು, ಕೊನೆಗೆ ತ್ರಿಶೂಲವನ್ನೆತ್ತಿಕೊಂಡು ಹೊರಟಳು. ಯವನರು ಒಂದು ಅರಣ್ಯದ ಮಧ್ಯದಲ್ಲಿ ದಾಮಿನಿಯನ್ನು ಕರೆದುಕೊಂಡು ಹೋಗುತ್ತಿದ್ದರು. ಪಲ್ಲಕ್ಕಿಯ ನಾಲ್ಕು ಕಡೆಗಳಲ್ಲಿಯೂ ಅಸ್ತ್ರಧಾರಿಗಳಾದ ಸೈನಿ ಕರು, ಎಲ್ಲರಿಗೂ ಹಿಂದೆ, 'ಫೌಜುದಾರನ ಮಗನು ಕುದುರೆಯನ್ನೇರಿ ಹೋಗುತ್ತಿ ದಾನೆ. ಹುಚ್ಚಿಯು ವಾಯುವೇಗದಿಂದ ಅಲ್ಲಿಗೆ ಬಂದ ತ್ರಿಶಲವನ್ನು ಚಚಿ ದಳು, ತ್ರಿಶೂಲವು 'ಫೌಜುದಾರ'ನ ಮಗನ ಟೆಸ್ಸಿನಲ್ಲಿ ಹೊಕ್ಕ, ಎದೆಯಲ್ಲಿ ಸ್ವಲ್ಪ ದೂರ ಮಡಿತು. ಅವನ ದೇಹವು ಅಲುಗಿತು; ಕೊನೆಗೆ ಅಶ್ವಸೃಷ್ಟಚ್ಚುತವಾಗಿ ಆಳಗೆ ಬಿದ್ದಿತ್ತು, ಹುಚ್ಚಿ ಯು ವಿಕಟಹಾಸವನ್ನು ಮಾಡಿದಳು, ಕುದುರೆಯು ಚಕಿ ತವಾಯ್ತು, ಪದಾತಿಕರು ಹಿಂದಿರುಗಿ ನೋಡತೊಡಗಿದರು. ಉನ್ಮಾದಿನಿಯು ವುನ: ವಿಕಟಹಾಸವನ್ನು ಮಾಡುಮಾಡುತ್ತೆ, ಓಡತೊಡಗಿ ದಳು. ಅವಳಿಗೆ ದಾಮಿನಿಯ ಸ್ಮರಣೆಯೇ ಒರಲಿಲ್ಲ. ಆ ಮೇಲೆ ಉನ್ಮಾದಿಸಿಯ ಸ ಆರೂ ನೋಡಲಾರದೆ ಹೋದರು, ಪದಾತಿಕರು ನೋಡಿದರು; 'ಫೌಜುದಾ ರನ ಮಗನಿಗೆ ಅಪಾಯಕರವಾಗಿ ಏಟುಬಿದ್ದಿತು, ಅವನನ್ನೆತ್ತಿಕೊಂಡು ಹೋಗಿ , ಪಲ್ಲಕ್ಕಿಯಲ್ಲಿ ಮಲಗಿಸಿದರು, ಪಲ್ಲಕ್ಕಿಯಲ್ಲಿದ್ದ ದಾಮಿನಿಯನ್ನು ನೆಲದಲ್ಲಿಳಿಸಿ' ಹೊರಟುಹೋದರು. ದಾಮಿನಿಯೋಬ್ಬಳೇ ಅರಣ್ಯ ಮಧ್ಯದಲ್ಲಿ ಬಿದ್ದಿದ್ದಾಳೆ, ನವಪಲ್ಲವಿತ ಪುಪ್ಪಿತ ಅತೆಯನ್ನು ಆಧಾರಭೂತವಾದ ವೃಕ್ಷದಿಂದ ಕಿತ್ತು, ನೆಲದಲ್ಲಿ ಬಿಸುಟರೆ, ಗಾಳಿಯ ಹೊಡೆತದಿಂದ ಅದು ಹೇಗೆ ಪ್ರಕಂಪಿತವಾಗುತ್ತಿರುವುದೋ,- - ಅರಣ್ಯದಲ್ಲಿ ಬಿದ್ದಿದ್ದ ದಾಮಿನಿಯ ಅವಸ್ಥೆಯೂ ಅದೇ ಆಗಿದ್ದಿತು. ಗಾಳಿಗೆ ಅವಳ ಸೀರೆಯ ಸೆರಗು ಹಾ ರಾಡುತ್ತಿತ್ತು. (