ಪುಟ:ದಾಮಿನಿ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾಮಿನಿ. 15 \r\\ \ \ * * * * \ # * * * * * * *

  • * * * * * * *
  • * * * * * * * - * * * * * *

ನಲ್ಲದೆ ಬೇರೆಯಿಲ್ಲ, ನಾನು ಹಾಗೆ ಹೇಳಿದೆನೆ? ಏನೆಂದು ಹೇಳಿದೆನು? ಏನೂ ಇಲ್ಲ. 'ಫೌಜುದಾರ'ನ ಮಗನಿಗೆ ನನ್ನಿಂದ ಕೇಡು ಸಂಭವಿಸಿತೆಂದರೆ, ಸಂಭವನೀ ಯವೆ? ಎಂದಿಗೂ ಅಲ್ಲ. ಆಗಳಿನಿಂದಲೂ ನಾನು ಹೇಳುತ್ತಿದ್ದುದು ಒಂದೇ. ನನ್ನನ್ನಿಷ್ಟು ಕೂಗಿದರೂ, ನಾನು ಮಾತನಾಡಿದೆನೆ? ರಮೇಶನು ದೊಡ್ಡವನೋ – 'ಫೌಜುದಾರ'ನ ಮಗನು ದೊಡ್ಡವನೋ?”” ಹೇಳುಹೇಳುತ್ತೆ, ಅವನು ಅಲ್ಲಿಂದ ಕಾಲ್ಗೆಗೆದನು. 'ಫೌಜುದಾರ'ನ ಮಗನ ಮರಣಸಂವಾದವನ್ನು ತಂದ ಆ ಕೃಷಕನು ಅದಿತಿ ವಿಶಾರದನನ್ನು ಕುರಿತು- “ಮಹಾಶಯ! ತಮ್ಮ ಸೊಸೆಯವರೂ ಹಿಂದಿರುಗಿ ಮನೆ ಗೆ ಬರುತ್ತಿದ್ದಾರೆ” – ಎಂದನು. ಕೇಳಿದೊಡನೆಯ, ವಿಶಾರದನು ಎಲ್ಲರ ಮೊಗವನ್ನೂ ನೋಡಿದನು. ಆರೂ ಏನನ್ನೂ ಹೇಳಲಿಲ್ಲ. ಕೊನೆಗೆ, ವಿಶಾರದನು ತಾನಾಗಿಯೇ ಎಲ್ಲರೊಡನೆ “ಅ ಯ್ಯ! ಈಗ ಮಾಡತಕ್ಕುದೇನು? ನನ್ನ ಸೊಸೆ ಯವನಸ್ಪರ್ಶಿತೆಯಾಗಿರುವಳು; ಅಂತಹಳನ್ನು ಪುನಃ ಗ್ರಹಣಮಾಡಬಹುದೇ-ಕೂಡದೇ?”-ಎಂದು ಕೇಳಿದನು. ಅದಕ್ಕೆ ಅವರೆಲ್ಲ ರೂ-“ ಮಹಾಶಯ! ತಾವು ಅದ್ವೀತಿಯ ಪಂಡಿತರು. ಇದರ ಇತ್ಯರ್ಥವನ್ನು ತಾವೇ ಮಾಡಬೇಕಾಗಿದೆ.” ಎಂದರು. ವಿಶಾರದನು ಕೊಂಚ ಹೊತ್ತು ಏನನ್ನೋ ಯೋಚಿಸುತ್ತಿದ್ದು, ಕೊನೆಗೆ ಒಳಗೆ ಹೋಗಿ, ಗೃಹಿಣಿಯೋಡ ನೆ ಈ ವಿಚಾರವನ್ನು ಕುರಿತು ಆಲೋಚಿಸತೊಡಗಿದನು. ಗೃಹಿಣಿಯು ಹೇಳಿದಳು: “ಅದೇ ಹುಡುಗಿಯನ್ನು ಪುನಃ ಮನೆಗೇ? ಅದೇ ನಿಮ್ಮ ಇಷ್ಟವಾದರೆ, ಬೇರೆಯ ಮನೆಮಾಡಿಕೊಂಡು, ಸಂಸಾರಮಾಡಬಹುದು!” ಅದಿತಿ:- “ಏನು ಹಾಗೆಂದರೆ? ಅವಳಲ್ಲಿ ಏನು ದೋಷ??? ಗೃಹಿಣಿ:—“ದೋಷವೆಲ್ಲವೂ ನನ್ನದೇ, ಹಾಗಾದರೆ!' ಅದಿತಿ:- “ಇಲ್ಲ; ನಿನ್ನನ್ನು ದೋಷಿಯೆಂದು ಹೇಳಲಿಲ್ಲ. ಸೊಸೆಯನ್ನು ಪು ನಃ ಕರೆದುಕೊಳ್ಳುವುದರಿಂದಾದರೂ ಉಂಟಾಗುವ ದೋಷವೇನೆಂದು ಕೇಳಿದೆನು; ಅಷ್ಟೇ.” ಗೃಹಿಣಿ:- “ದೋಷವು ಏನೇ? ದೋಷವು ಎಷ್ಟೋ ಇದೆ. ಮೊದಲು, ಜನರು ಮುಖಕ್ಕೆ ಕಪ್ಪು ಸುಣ್ಣವನ್ನು ಬರೆಯುವರು. ಆಮೇಲೆ, ಶಿಷ್ಯರು ಗುರುಗ ಳನ್ನು ತ್ಯಾಗಮಾಡುವರು. ಆಗ, ನಮ್ಮ ಮಕ್ಕಳುಮರಿಗಳಿಗೆ ಏನು ಗತಿ?” | ಅದಿತಿ:-“ಜನರೇತಕ್ಕೆ ದೂರುವರು? ಶಿಷ್ಯರೇತಕ್ಕೆ ತ್ಯಜಿಸುವರು? ನಮ್ಮ ಸೊಸೆಯೇನೂ ಕುಲತ್ಯಾಗಿನಿಯಲ್ಲ; ಇಚ್ಛಾಪೂರ್ವಕವಾಗಿ ಹೋದವಳಲ್ಲ; ಹೋದ