ಪುಟ:ದಾಮಿನಿ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾಮಿನಿ.

  • * * * * - * * * * * * * * * * * *

೨ ಆ +* * 4 ಅದರಲ್ಲಿಯೂ ವೃದ್ದೆ; ಪಾಪ! ಬಿಸಿಲಲ್ಲಿ ನಿನ್ನನ್ನು ಹುಡುಕಿಕೊಂಡು ಬರುವುದಕ್ಕೆ ಸಾಕು!?” – ಎಂದಳು. ಸಮವಯಸ್ಯೆಯು ಮನೆಗೆ ಹೋದಳು; ಆದರೆ, ಅವಳು ಬಹುಕಾಲ ಅಲ್ಲಿ ರುವುದಕ್ಕೆ ಆಗದೆ ಹೋಯಿತು. ಅಪರಾಹ್ನವಾಗುವುದರೊಳಗಾಗಿಯೆ, ಪುನಃ ಅದಿ ತಿಭಟ್ಟಾಚಾರ್ಯನ ಮನೆಯ ಹಿಂಗಡೆ ಬಂದು ನಿಂದಳು, ನೋಡಿದಳು; ದಾಮಿ ನಿಯು ಮೊದಲಂತೆಯೇ ಒಬ್ಬಳೇ ಮರದಡಿಯಲ್ಲಿ ಕುಳಿತು ಅನ್ಯಮನಸ್ಯೆಯಾಗಿ ಒಂ ದು ಹಕ್ಕಿಯನ್ನು ದೃಷ್ಟಿಸಿ ನೋಡುತ್ತಿದ್ದಳು, ಈಗಲವಳ ಕಣ್ಣುಗಳಲ್ಲಿ ನೀರಿರಲಿಲ್ಲ. ಪ್ರತಿವಾಸಿನಿಯು ಮೆಲ್ಲ ಮೆಲ್ಲನೆ ದಾಮಿನಿಯ ಹತ್ತಿರ ಬಂದು, ಕುಳಿತುಕೊಂ ಡಳು. ಕೊಂಚ ಕಾಲದ ವರೆಗೂ, ಇಬ್ಬರೂ ಮಾತನಾಡಲಿಲ್ಲ. ಅನಂತರ ದಾ ಮಿನಿಯು- “ಈ ರಾತ್ರಿಯೇ ಅವರು ಬಂದುಬಿಟ್ಟರೆ?” – ಎಂದಳು. ಪ್ರತಿವಾಸಿನಿ:--“ಆರು? ನಿನ್ನ ಗಂಡನೆ? ಅವನು ಬಂದರೆ, ಒಳ್ಳೆದೇ ಆಯಿತು. ಒಳ್ಳಿದೋ, ಕೆಟ್ಟುದೋ, ಏನಾದರೊಂದು ಇತ್ಯರ್ಥವಾಗಿಹೋಗುವುದು.” ದಾಮಿನಿ:- “ಅವರು ಬಂದೂ, ಅರ್ಧಮಾರ್ಗದಲ್ಲಿಯೇ ಹೊರಟು ಹೋದರೆ?” ಪ್ರತಿವಾಸಿನಿ:- ಅದೇನು? ಹೇಗಾದೀತು?”” ದಾಮಿನಿ:- “ಆಗದೆ ಏನು? ದಾರಿಯಲ್ಲಿ ಅವರಿಗೆ ಆರೂ ಆವ ವೃತ್ತಾಂತವ ನ್ಯೂ ತಿಳಿಸದಿದ್ದರೆ? – ಅಮ್ಮ! ಅವರೂ ನನ್ನನ್ನು ಬಿಟ್ಟು ಬಿಟ್ಟಾರೇ ಏನು?' - ಪ್ರತಿವಾಸಿನಿ:--“ಆರಿಗೆ ಗೊತ್ತಮ್ಮ! ಗಂಡುಸರ ಮನಸ್ಸು ಆವಾಗ ಹೇಗೆ ಇರು ವುವೆಂದು ಆರು ಹೇಳಬಲ್ಲರು??? ದಾಮಿನಿ:- « ಅವರು ನನ್ನನ್ನು ಎಷ್ಟೊಂದು ಪ್ರೀತಿಸುವರು! ನಾನಳುವುದನ್ನು ನೋಡಿದರೆ, ತಾವೂ ಅಳುವರು; ನನ್ನನ್ನು ನೋಡುನೋಡುತ್ತ, ಅಳುವರು. ನನ್ನ ನ್ನು ನೋಡುವುದೆಂದರೆ, ಅವರಿಗೆ ಎಷ್ಟು ಆಸೆ! ನೋಡುವ ನಿಮಿತ್ತವಾಗಿಯೆ » ಷ್ಟೊಂದು ಹಠಮಾಡಿ, ನನ್ನ ಹತ್ತಿರ ಬಂದು ಕುಳಿತುಕೊಳ್ಳುವರು ಎಷ್ಟು ಬಾರಿ, ಎಷ್ಟು ಕಡೆಗಳಲ್ಲಿ ಕುಳಿತು ನೋಡುವರು! ಪುನಃ ನನ್ನ ಹಣೆಯಲ್ಲಿ ಕಯ್ಯನ್ನಿಟ್ಟು ನೋಡುವರು; ಗಲ್ಲಗಳನ್ನು ಹಿಡಿದು ನೋಡುವರು; ತುಟಿಗಳನ್ನು ಮುಟ್ಟಿ ನೋಡು ವರು. ಎಷ್ಟು ನೋಡಿದರೂ ಅವರಿಗೆ ತೃಪ್ತಿಯಿಲ್ಲ, ರಾತ್ರಿಯ ವೇಳೆ ಎಚ್ಚರವಾ ದಾಗಲೆಲ್ಲ ಎದ್ದು ನನ್ನ ಮುಖದ ಕಡೆಗೆ ದೃಷ್ಟಿಸಿ ನೋಡುತ್ತಲೇ ಇರುವರು. ಆದ ರೆ ನಾನು ಈ ಹಾಳ ಕಣ್ಣುಗಳನ್ನು ಮುಚ್ಚಿಕೊಂಡೇ ನಿದ್ದೆ ಮಾಡುತ್ತಿರುವೆನು!” ಹೇಳುಹೇಳುತ್ಯ, ದಾಮಿನಿಯ ಕಣ್ಣುಗಳಲ್ಲಿ ನೀರು ತುಂಬಿತು. ದಾಮಿನಿ ಯು ಅಳತೊಡಗಿದಳು, ಪ್ರತಿವಾಸಿನಿಯು-“ಅಮ್ಮ: ಸಂಜೆಯಾಯಿತು. ಈ