ಪುಟ:ದಾಮಿನಿ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

22 ಶ್ರೀಕೃಷ್ಣ ಸೂಕ್ತಿ ಮುಕ್ತಾವಳಿ. • • • • • • • \ \ # * V V Y vvyyyy ರಾತ್ರಿಯನ್ನು ಹೇಗಮ್ಮ:- ಕಳೆಯುವೆ? ಎಲ್ಲಿ ಮಲಗುವೆ?”.. ಎಂದಳು, ದಾಮಿ ನಿಯು ಪ್ರಥಮತ:- “ಆರಿಗೆ ಗೊತ್ತಮ್ಮ!” ಎಂದು ಹೇಳಿ, ಉತ್ತರಕ್ಷಣದಲ್ಲಿಯೆ - “ ಇಲ್ಲಿಯೆ ಇರುವೆನು. ನನಗಿನ್ನೆಲ್ಲಿ ಸ್ಥಳವಿದೆ?” – ಎಂದಳು. ಪ್ರತಿವಾಸಿನಿಯು ನಡುಗಿದಳು, ಹೇಳಿದಳು:- ( ಅಮ್ಮ ಅದೇನು- ಹೆಂಗು ಸರಿಗೆ ಸಾಧ್ಯವೆ? ಈ ಕತ್ತಲೆಯಲ್ಲಿ, ವನಮಧ್ಯದಲ್ಲಿ ಒಂಟಿಗನಾಗಿ ಆವ ಗಂಡು ಸಾದರೂ ಇರಲಾರನು. ಹಾಗೆಂದ ಮೇಲೆ, ನೀನೊಬ್ಬಳೇ ಇಲ್ಲಿ ಹೇಗೆ ಇರಬಲ್ಲೆ? ರಾತ್ರಿಯ ವೇಳೆಯಲ್ಲಿ - ಮನೆಯೊಳಗೆ ಬೇಡವಮ್ಮ ಮನೆಯ ಹೊರಗಿನ ಆವು ದಾದರೂ ಒಂದು ಚಾವಡಿಯಲ್ಲಿ ಯಾದರೂ ನಿಮ್ಮ ಅತ್ತೆ ಮಾವಂದಿರು ಸ್ಥಳವನ್ನು ಕೊಡಲಾರರೆ? ಅಗತ್ಯವಾಗಿಯೂ ಕೊಟ್ಟಾರು!” - ಎಂದಳು. ದಾಮಿನಿಯೂ ಅದೇ ಆಸೆಯನ್ನು ಮಾಡಿಕೊಂಡಿದ್ದಳು. ನಿಜವಾಗಿಯೂ ಅವಳು ನಿಶ್ಚಯಮಾಡಿಕೊಂಡಿದ್ದಳೇನೆಂದರೆ, – “ರಾತ್ರಿಯಲ್ಲಿ ಯಾರಾದರೂ ತನ್ನ ನ್ನು ಕರೆದುಕೊಂಡು ಹೋಗಬಹುದು' - ಎಂದು, ಆದರೆ, ರಾತ್ರಿಯಾಯಿತು; ಪ್ರತಿವಾಸಿನಿಯು ಹೊರಟುಹೋದಳು; ಇಷ್ಟಾದರೂ, ಆರೂ ತನ್ನನ್ನು ವಿಚಾರಿ ಸಲಿಲ್ಲ, ಇದುವರೆಗೂ ಮನೆಯ ಹಿಂಬಾಗಿಲಾದರೂ ತೆರೆಯಲ್ಪಟ್ಟಿತು; ಈಗ ಅದೂ ಮುಚ್ಚಲ್ಪಟ್ಟಿತು. - ದಾಮಿನಿಯೋಬ್ಬಳೇ ಅಂಧಕಾರದಲ್ಲಿ ಕುಳಿತುಕೊಂಡಿದ್ದಳು. ರಾತ್ರಿಯ ಕ್ರಮಕ್ರಮವಾಗಿಯೂ ಗಭೀರವಾಗುತ್ತ ಬಂದಿತು. ದೂರದಲ್ಲಿ ಅದಾವುದೋ ಒಂದೆರಡು ದೀಪಗಳ ಬೆಳಕು ಕಾಣಬರುತ್ತಿದ್ದಿತು; ಆ ದೀಪಗಳೂ ಒಂದೊಂದಾಗಿ ನಂದಿಹೋದುವು, ಗ್ರಾಮವಾಸಿಗಳೆಲ್ಲರೂ ನಿಶ್ಚಿಂತರಾಗಿ ನಿದ್ದೆ ಹೋಗುತ್ತಿದ್ದರು; ಆರಿಗೂ ದಾಮಿನಿಯ ಯೋಚನೆಯೇ ಇಲ್ಲ. ದಾಮಿನಿಯು ತನ್ನ ವಿಚಾರವನ್ನೇ ಯೋಚಿಸತೊಡಗಿದಳು, ಒಂದೊಂದು ಬಾರಿ ಭಯವೂ ಉಂಟಾಯಿತು; ಒಬ್ಬ ಛೇ ಇರುವುದು ಅವಳಿಗೆ ಕಷ್ಟವಾಗಿ) ತೋರತೊಡಗಿತು. ಒಂದು ಕಡೆ ದಿನವೆಲ್ಲ ವೂ ಆಹಾರವಿಲ್ಲ; ಆಮೇಲೆ ಆದ್ಯಂತದಿನವೂ ಅಳುತ್ತಿದ್ದಳ;- ಹೀಗೆ ಶ್ರಮದಿಂದ ಅವಳ ದೇಹವ ದುರ್ಬಲವಾಗತೊಡಗಿತು. ದಾಮಿನಿಯು ಧೂಳೆಯಲ್ಲಿಯೇ ಶಯನಮಾಡಿದಳು, ನಿದ್ದೆಯೂ ಬೇಗನೆ ಬಂದಿತು. ಸ್ವಪ್ನದಲ್ಲಿಯೆ ಆಲಿಸಿದಳು;-ಆರೋ ತನ್ನನ್ನು “ ಅಮಾ!” ಎಂದು ಕೂಗಿ ಕರೆದರು. • ಅದಕ್ಕೆ ಸ್ವಪ್ನದಲ್ಲಿಯೇ 'ಅಮ್ಮಾ' ಎಂದು ಉತ್ತರವಿತ್ತಳು. ಸ್ವಪ್ನ ದಲ್ಲಿಯೇ ಬೋಧೆಯುಂಟಾಯಿತು; ಅವಳ ಅಮ್ಮನು ಹೇಳುತ್ತಿದ್ದಾಳೆ: -“ಏಳ ಮ್ಮ ಈ ಮನೆಯಲ್ಲಿ ಇನ್ನು ಏನಿದೆ? -- ಎಂದು. ಮರುದಿನ ಬೆಳಗ್ಗೆ ಎದ್ದವರಾರೂ ಪುನಃ ದಾಮಿನಿಯನ್ನು ನೋಡಲಿಲ್ಲ.