ಪುಟ:ದಾಮಿನಿ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಾಮಿನಿ. 23 »# ಷಷ್ಟ ಪರಿಚ್ಛೇದ. ಹತ್ತು ಹನ್ನೆರಡು ದಿನಗಳ ಮೇಲೆ, ರಮೇಶನು ಮನೆಗೆ ಬಂದು, ಎಲ್ಲ ವೃ ತಾಂತಗಳನ್ನೂ ಕೇಳಿದನು. ತಂದೆಯನ್ನೇನೂ ಎನ್ನಲಿಲ್ಲ: ಮಲತಾಯಿಯ ಮೇಲೆ ದೋಷವನ್ನೂ ಆರೋಪಿಸಲಿಲ್ಲ: ಆರಿಗೂ ಏನನ್ನೂ ಹೇಳದೆ, ಮನೆಯಿಂದ ಹೊರಗೆ ಹೊರಟನು. ಊರೂರುಗಳಲ್ಲಿಯೂ ಕೇರಿಕೇರಿಗಳಲ್ಲಿಯೂ ಆರೇಳು ದಿನಗಳು ಸು ಮನೆ ಸುತ್ತಿದನು; ಎಲ್ಲಿಯೂ ದಾಮಿನಿಯ ಸಮಾಚಾರವು ಗೊತ್ತಾಗಲಿಲ್ಲ. ಕೊನೆ ಗೆ, ಒಂದು ದಿನ ಉಷಃಕಾಲದಲ್ಲಿ ವಿಷಣ್ಣ ಭಾವದಿಂದ ಹಿಂದಿರುಗಿ ಮನೆಯ ಕಡೆಗೆ ಬರು ತಿದ್ದನು, ನದೀತೀರದಲ್ಲಿ ಮುರುಕುಮಾಳಿಗೆಯೊಂದನ್ನು ನೋಡಿ, ಅಲ್ಲಿ ನಿಂದನು. ಆ ಮುರುಕುಮಾಳಿಗೆಯೊಡನೆ ತನ್ನ ಅವಸ್ಥೆಯನ್ನು ಹೋಲಿಸಿನೋಡಿದನು. ಮಾ ಳಿಗೆಯ ಮಾಡೆಲ್ಲವೂ ಮುರಿದುಬಿದ್ದಿದೆ. ಅಲ್ಲಿಯಲ್ಲಿ ಅಶ್ವತ್ಥ ವಟ, ಮೊದಲಾದ ವೃಕ್ಷಗಳು ತಮ್ಮತಮ್ಮ ಬೇರುಗಳನ್ನು ಗೋಡೆಯ ತುಂಬ ಪಟ್ಟುಕೊಂಡು, ಅಹಂ ಕಾರದೊಡನೆ ಆಂದೋಲನವಾಡುತ್ತಿವೆ. ದುರ್ಬಲವಾದ ಮಾಳಿಗೆಯು ಏಕಾಕಿ ಯಾಗಿ ನದೀತೀರದಲ್ಲಿದ್ದು ಕೊಂಡು, ಅದೆಲ್ಲವನ್ನೂ ಸಹನಮಾಡುತ್ತಿದೆ. - ರಮೇಶನು ಮುಂಬರಿದು, ಭಗ್ರಮಂದಿರದ ಬಾಗಿಲಲ್ಲಿ ಬಂದು ನಿಂದನು. ಬಾಗಿಲು ತೆರೆದಿದ್ದಿತು; ಮನೆಯೊಳಕ್ಕೆ ಪ್ರವೇಶಮಾಡಿದನು. ಅವನು ಸವಿಾಪಕ್ಕೆ ಬಂದ ಶಬ್ದವನ್ನು ಕೇಳಿ, ಲೆಕ್ಕವಿಲ್ಲದ ಬಾವುಲಿ ಹಕ್ಕಿಗಳು ಆ ಅಂಧಕಾರದಲ್ಲಿ ಹಾರಾಡತೊಡಗಿದುವು. ಅನಂತರ, ಕ್ರಮಕ್ರಮವಾಗಿ ಅವುಗಳ ಸದ್ಯ ಅಡಗಿತು. ಗೃಹವು ಭಯಾನಕವಾಗಿಯೂ ಗಂಭೀರವಾಗಿಯೂ ತೋರಬಂದಿತು. ರಮೇಶನು ನಿಂದಲ್ಲಿಯೆ ನಿಂದುಬಿಟ್ಟನು. ಉತ್ತರಕ್ಷಣದಲ್ಲಿಯೇ, ಕೋಣೆಯೊಳಗಿಂದ ಮನು ವ್ಯ ಕಂಠದಿಂದ ಹೊರಟ ಮೃದುಶಬವೊಂದು ಕೇಳಬಂದಿತು. ರಮೇಶನ ಮೆಯ್ಕೆ ಲವೂ ರೋಮಾಂಚಿತವಾಯ್ತು. ಮೆಲ್ಲಮೆಲ್ಲನೆ, ಅವಧಾನದಿಂದ, ನಿಶ್ಯಬ್ದವಾಗಿ ಆ ಸ್ವರವು ಕೇಳಬಂದ ಕಡೆಗೆ ಹೋದನು. ಅಸ್ಪಷ್ಟವಾದ ಬೆಳ್ಳಿಂಗಳ ಬೆಳಕಿನಲ್ಲಿ ನೋಡಿದನು;-ಆವುದೊ ಒಂದು ರೋಗಗ್ರಸ್ತವಾದ ಮಾನುಷಶರೀರವು ಮೃತ್ಯು ಶಯ್ಕೆಯ ಮೇಲೆ ಮಲಗಿಬಿಟ್ಟಿದೆ. - ರಮೇಶನು ಎನನ್ನೋ ಭಾವಿಸಿಕೊಂಡು ಅಳತೊಡಗಿದನು. ನರದೇಹವು ಜ್ಞಾನಹೀನವಾಗಿರಲಿಲ್ಲ. ಅದರ ಕಂಠಸ್ವರವು ಮಾತ್ರ ಸ್ವಲ್ಪ ಸ್ವಲ್ಪವಾಗಿ ಕಡಮೆ ಯಾಗುತ್ತ ಬರುತ್ತಿದ್ದಿತು. ಕ್ಷೀಣವಾದ ಆ ಕಂಠಸ್ವರದಿಂದ ಈ ಪರಿಯಾಗಿ ಹೇ ಳುತ್ತಿದ್ದಿತು:- ಅವ್ವಾ! ಬಂದೆಯ? ಕುಳಿತುಕೊ: ಇನ್ನು ವಿಳಂಬಮಾಡುವುದಿಲ್ಲ. ಕೇವಲ ಒಂದು ಬಾರಿ ಮಾತ್ರ ಆ ನನ್ನ ರಮೇಶನನ್ನು ನೋಡಿ ಬರುತ್ತೇನೆ."- ರಮೇಶನು ಚೀತ್ಕಾರಮಾಡುತ್ಯ- “ದಾಮಿನಿ: ದಾಮಿನಿ! ನಾನು ಬಂದಿ