ವಿಷಯಕ್ಕೆ ಹೋಗು

ಪುಟ:ದಾಮಿನಿ.djvu/೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ



Preface.

ಪೀಠಿಕೆ.

ಮಾಧವೀಲತಾ" ಗ್ರಂಥಕರ್ತೃಗಳಾದ ಸಂಜೀವಚಂದ್ರ ಚಟ್ಟೋಪಾಧ್ಯಾಯರು ಕರ್ಣಾಟಕದೇಶಸ್ಥರಿಗೆ ಅಪರಿಚಿತರಲ್ಲ. ದಿವಂಗತ ಶ್ರೀಯುತ ಬಿ. ವೆಂಕಟಾಚಾರ್ಯರು ಅವರ ಗ್ರಂಥಗಳಲ್ಲಿ ಒಂದೆರಡನ್ನು ಪರಿವೃತ್ತೀಕರಿಸಿ, ಮುಂದಿರಿಸಿ, ಮಹೋಪಕಾರಮಾಡಿರುವರು. ಸಾಹಿತ್ಯಸಮ್ರಾಜರಾದ ಬಂಕಿಮಚಂದ್ರರ ಸಹೋದರರಾದ ಈ ಗ್ರಂಥಕರ್ತೃಗಳ ಉಲ್ಲೇಖಗಳು ವಂಗಸಮಾಜದಲ್ಲಿಯೆಲ್ಲ ಆದರಣೀ ಯಗಳಾಗಿರುವುದರಲ್ಲಿ ಅಡ್ಡಿಯೇನಿದೆ? ಅವುಗಳಲ್ಲಿ ಒಂದಾದ ಈ "ದಾಮಿನಿ”ಯನ್ನು, ಗ್ರಂಥಪ್ರಕಾಶಕರಾದ “ವಸುಮತೀ"ಸಂಪಾದಕರ ಅನುಮೋದನದೊಡನೆ, ಕನ್ನಡಿಗರ ಸರಸಾವಲೋಕನಕ್ಕಾಗಿ,ಕನ್ನಡಿಸಿರುವೆನು. ಇದೊಂದು ಶೋಕಪರ್ಯವ ಸಾಯಿಯಾದ ಸಾಂಸಾರಿಕಚಿತ್ರ.

ಇದನ್ನು ಪರಿಷ್ಕರಿಸಿ ಮುದ್ರಿಸುವುದರಲ್ಲಿ ನನಗೆ ಸಹಾಯಮಾಡಿದ “ ಶ್ರೀಕೃಷ್ಣ ಸೂಕ್ತಿ” ಪ್ರಕಾಶಕರ ಮಹೋಪಕಾರ ಚಿರಸ್ಮರಣೀಯವಾಗಿರುವುದು.


ಬೆಂಗಳೂರು. ಸಜ್ಜನವಿಧೇಯ,

ಪರಿವರ್ತನಕಾರ

.