ಪುಟ:ದಾಮಿನಿ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

|| ಶ್ರೀನಿವಾಸಾಯ ನಮಃ || --**-- Daminee. ದಾ ಮಿನಿ. ಪ್ರಥಮಪರಿಚ್ಛೇದ. `/ # ? • ನಿಕೋ ಅದೆಷ್ಟೋ ಕಾಲದ ಮಾತು. ಒಂದು ದಿನ, ಸಂಜೆಯ ಹೊತ್ತಿನಲ್ಲಿ, ಏಳು ವರ್ಷದ ಒಬ್ಬ ಹುಡುಗಿ ಭಾಗೀರಥಿಯ ತೀರದಲ್ಲಿ ನಿಂದು, ಅನಿಮಿಷನಯನಗಳಿಂದ, ಆ ತೇಲುತ್ತಿರುವ, ತರಂಗತಾಡಿತವಾದ ದೀಪಮಾಲೆಯನ್ನು ನೋಡುನೋಡುತ್ತೆ, ಹಾಗೆಯೆ ಹಿಂದೆ ಬರುತ್ತಿದ್ದ ವೃದ್ಧೆಯೊಬ್ಬಳನ್ನು ದ್ದೇಶಿಸಿ,- ( ಅವಾ: ನನ್ನ ದೀಪವು ತೇಲಿಹೋಯಿತಲ್ಲೇ! - ಎಂದಳು. “ಹೋಗಲ; ಬಿಡು. ಇನ್ನು ಮನೆಗೆ ನಡೆ, ಕತ್ತಲೆಯಾಯಿತು!”....ಎಂದು ಅವ್ವನ ಹೇಳಿದರೂ ಕೇಳದೆ, – “ ತಾಳು! ಇನ್ನೂ ಕೊಂಚ ನೋಡುವ!” - ಎಂದು ಹುಡುಗಿ ಮಾತ್ರ ಹಾಗೆಯೆ ನಿಂದೇ ಇದ್ದಳು. ಹುಡುಗಿಯ ಹೆಸರು ದಾಮಿಸಿ, ಹಣ್ಣು ಮುದುಕಿಯಾದ ಆ ತಾಯ ತಾಯಲ್ಲದೆ, ದಾಮಿನಿಗೆ ಇನ್ನಾರೂ ಇಲ್ಲ, ಇಂದು, ಅಜ್ಜಿಯೊಡನೆ ಒಂದು, ಇದೇ ಮೊದಲು, ತನ್ನ ದೀಪವನ್ನು ತೇಲಿಬಿಟ್ಟಿದ್ದಳು. ದೀಪವು ತೇಲಿಹೋಯಿತು. ಇತರ ಬಾಲಿಕೆಯರಂತೆ, ಅವಳು ನಗಲಿಲ್ಲ. “ನನ್ನ ದೀಪವು ಹೋಗುತ್ತಿದೆ; ನೋಡು!” – ಎಂದು ಆಹ್ಲಾದದಿಂದ ಅದನ್ನು ತನ್ನ ಸಖಿಯರಿಗೆ ಪ್ರದರ್ಶನಮಾಡಿಸ ಲಿಲ್ಲ. ಕೇವಲ ಗಂಭೀರಭಾವದಿಂದ, ನಟ್ಟ ದೃಷ್ಟಿಯಿಂದ, ಅದನ್ನು ನೋಡುತಿ ದಳು;-ಅಷ್ಟೆ. - ತುಂಬಿ ಹರಿಯುತ್ತಿದ್ದ ಆ ನದಿಯಲ್ಲಿ ದಾಮಿನಿಯ ದೀಪವು ಏಕಾಕಿಯಾಗಿ ತೇಲಿಹೋಗತೊಡಗಿತು. ಸ್ವತಃ ದಾಮಿನಿಯೇ ತನ್ನ ದೀಪವನ್ನು ತೇಲಿಬಿಟ್ಟಿದ್ದಳು ಈಗಳಿನ್ನು ಉಪಾಯವಿಲ್ಲ!“ ಹೇ ಜಗದೀಶ್ವರ! ನನ್ನ ದೀಪವನ್ನು ಕಾಪಾಡು!”... ಎಂದು ಕಾತರಹೃದಯದಿಂದ ಸಂಪ್ರಾರ್ಥಿಸತೊಡಗಿದಳು. ಅಂಧಕಾರವು ಕ್ರಮಕ್ರಮವಾಗಿ ಅತಿಶಯಿಸುತ್ತ ಒಂದುದನ್ನು ನೋಡಿ