ಪುಟ:ದಿಗ್ವಿಜಯ ಪ್ರಕರಣ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆದರಿಸಿ ಸಾಕೆನಲು ಗಜಹಯ ವಾದಿಯಾದ ಸಮಸ್ತ ವಸ್ತುವ ನೈದೆಕೊಟ್ಟನು ಫಲುಗುಣಂಗೆ ಸುಮಿತ್ರಭಾವದಲಿ 11೨೨!! ಒಂದು ತಿಂಗಳು ಹಲವು ಮನ್ನಣೆ ಯಿಂದ ಮನ್ನಿಸಿ ತನ್ನ ಸೇನಾ ವೃಂದವನು ಕಳುಹಿದನು ಬಳಿಯಲಿ ನರನ ಸತ್ಕರಿಸಿ || ಮುಂದೆ ನಡೆದನು ರಾಮಗಿರಿಯಲಿ | ನಿಂದು ಕಪ್ಪವ ಕೊಂಡು ತೆರಳಯೆ ಮುಂದಣೀ ಶಾನ್ಯದಲಿ ಹೊಕ್ಕನು ಭವನ ಪರ್ವತವ ||೨೩|| ಆ ಗಿರೀಂದ್ರ ನಿವಾಸಿಗಳ ಸರಿ ಭಾಗಧನವ ರು ಕೊಂಡು ಬ೦ಕ ಮು ಹಾಗಜಾತೃವನೆಯೇ ಕೊಂಡನು ಮುಂದೆ ದಂಡೆತ್ತಿ || ಆಗ ಯಾಳರ ಗಾವಿಲರ ನಿ ರ್ಭಾಗಧೇಯರ ಮಾಡಿ ಯುತ್ತರ ಭಾಗದಲಿ ತಿರುಗಿತ್ತು ಪಾಳೆಯವರಸ ಕೇಳೆಂದ ||೨೪|| ಗಿರಿಯ ತಪ್ಪಲ ವನಚರರ ಸಂ ಹರಿಸಿ ಮುಂದೆ ಬೃಹಂತಕನ ಕಾ ತರಿಸಿ ಕಾಣಿಸಿಕೊಂಡು ಸೇನಾಬಿಂದು ನಗರಿಯಲಿ !! - - - - - - - - - (ದೇವತೆಗಳು) ಅಮರಪತಿಇಂದ್ರ, ಮೇದಿನಿ-ಮಧು ಕೈಟಭರೆಂಬ ರಾಕ್ಷಸರ ಮೇದಸ್ಸಿ ನಿಂದ ಆದುದು (ಭೂಮಿ), ಸಮ್ರಾಜ-ಚಕ್ರವರ್ತಿ, ಅವನ ಭಾವ ನಾಮ್ರಾಜ್ಯ. ೨೩| ಮನ್ನಣೆ-ಧ್ವ, ಮಾನ್ಯತಾ-ತ್ಸ ; ಭವನಪರೈತ-ಈಶ್ವರನ ಬೆಟ್ಟ-ಕೈಲಾಸ ಪಕ್ವತ : ಈಶಾನನ (ಈಶ್ವರನ) ದಿಕ್ಕು-ಈಶಾನ್ಯ ೨೪!! ಗಾವಿಲ-ಧ್ಯ, ಗ್ರಾಮೀಣ-ತ್ಸ ; ಭಾಗಧೇಯವಿಲ್ಲದವರು-ನಿರ್ಭಾಗದೇ ಯರು (ಪ್ರಾದಿ ಬ, ವ್ರ, ಇತು, ಇತ್ತು, ಎಂಬೆರಡು ಪ್ರತ್ಯಯಗಳೂ ಉಂಟು. ಉದಾ-ತಿರುಗಿತು, ತಿರುಗಿತ್ತು; ನೋಡಿತು, ನೋಡಿತ್ತು. ೨೫|| ವನ-ಕಾಡಿನಲ್ಲಿ, ಚರರು-ಸಂಚರಿಸುವವರು (ಬೇಡರು), ಪರ ತದೇಶದಲ್ಲಿ ವಾಸಮಾಡುವವರು-ಪಾಶ್ವತೇಯರು.