ಪುಟ:ದಿಗ್ವಿಜಯ ಪ್ರಕರಣ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

அத் ಅಲ್ಲದಾಕ್ರಮಿಸಿದೊಡೆ ನಿನಗವ ರಲ್ಲಿ ಕಾಣಿಕೆ ದೊರಕಲರಿಯದು ಬಲ್ಲಿದವರುತ್ತರದ ಕುರುಗಳು ನಿಮ್ಮ ಬಾಂಧವರು || ಗೆಲ್ಲದಲಿ ಫಲವಿಲ್ಲ ಸಾಹಸ ವಲ್ಲಿ ಮಹತಿಯದು ಮರಳ ಮರ್ತ್ಯರಿ ಗಲ್ಲಿ ಸುವುದಸಾಧ್ಯವೆಂದರು ಚರರು ಫಲುಗುಣಗೆ ||೬೪| ಮಾಣಲದು ನಮಗವರು ಒಂದು ಶ್ರೇಣಿಗಳು ಗಡ ಹೋಗಲದು ಕ ಟ್ಯಾಣೆಯಾವುದು ನಿಮ್ಮ ದೇಶದೊಳುಳ್ಳ ವಸ್ತುಗಳ | ವಾಣಿಯವ ಮಾಡದೆ ಸುಯಜ್ಞದ. ಕಾಣಿಕೆಯನೀವುದು ಯುಧಿಷ್ಠಿರ ನಾಣೆ ನಿನಗೆನೆ ತಂದು ಕೊಟ್ಟರು ಸಕಲವಸ್ತುಗಳ ||೬೫| ತಿರುಗಿತಲ್ಲಿಂದಿತ್ತ ಪಾಳೆಯ ಮುರಿದು ಬಿಟ್ಟು ಹಿರಣ್ಮಯವನಾ ? ದರಿಸಿ ರಮ್ಯಕದಿಂದಿಳಾವೃತದಿಂದ ದಕ್ಷಿಣಕೆ || ಭರದಿನೆಝೇ ತು ಹರಿವರುಷ ಕಿಂ ಪುರುಷವನು ದಾಟಿತು ಹಿಮಾನ್ವಿತ ಗಿರಿಯನೇದುದಿಂದು ಬಂದುದು ತೆಂಕಮುಖವಾಗಿ ||೬೬|| ೬೪|| ಅಲ್ಲದೆ + ಆಕ್ರಮಿಸಿದೊಡೆ; ಮರ್ತ್ಯ - ಮರಣವನ್ನು ಪಡೆಯತಕ್ಕವನು (ಮನುಷ್ಯ. ೬೫11 ಮಾಣಲಿ ಅದು! ನಮಗವರು ಬಂಧು ಶ್ರೇಣಿಗಳು ಗಡ ? ಅದು ಹೋ ಗಲಿ! (ನಿಮಗೆ) ಕಟ್ಟಾಣೆಯಾವುದು ? ಎಂಬುದು ಆನ್ವಯ, ವಾಣಿಯ-ದ್ಧ, ವಾಣಿಜ್ಯ ತ: ವಾಣಿಯವಮಾಡದೆ ನಿಮ್ಮ ದೇಶದಲ್ಲಿರುವ ಉತ್ತಮ ಪದಾರ್ಥಗಳನ್ನು ಮಾರದೆ ನಮಗೆ ಕಾಣಿಕೆಯಾಗಿ ಕೊಡಿ, ಕಡಿದು + ಆಣೆ-ಕಟ್ನ-ನಿರ್ಬ೦ಧವಾದ ಅಪ್ಪಣೆ. ೬೬] ಈ ಪದ್ಯದಲ್ಲಿ ಅರ್ಜುನನು ಜಯಿಸಿದ ಜಂಬೂದ್ವೀಪದ ಒಂಬತ್ತು ವರ್ಷ ಗಳಲ್ಲಿ (ನವವರ್ಷ) ಹಿರಣ್ಣಯ, ರಮ್ಯಕ, ಇಳಾವೃತ, ಹರಿ, ಕಿಂಪುರುಷ; ಎಂಬ ಐದನ್ನು ಹೇಳಿದ್ದಾನೆ. ಉಳಿದ ಕುರು, ಭದ್ರಾಶ್ವ, ಕೇತುಮಾಲ, ಭಾರತ ಎಂಬ ನಾಲ್ಕು ಹಿಂದೆ ಬಂದಿವೆ. ಇವು ಒಂಬತ್ತು ನವವರ್ಷಗಳೆಂಬ ದೇಶಗಳು.