ಪುಟ:ದಿಗ್ವಿಜಯ ಪ್ರಕರಣ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಳುಹಿ ಕಳದನು ಹಿಂದೆ ಕೂಡಿದ ಬಲವನವನಿಪರೆಲ್ಲ ಯಾಗ ಸ್ಥಳಕೆ ಬಹುನೇಮದಲಿ ಹರಿದರು ನಿಜಪುರಂಗಳಿಗೆ || ನೆಲದ ವಲಯದ ವಸ್ತು ವಿದನೆಂ ತಳವಡಿಸಿದನೋ ಶಿವ ಯೆನುತ ಸುರ ರುಲಿಯೆ ಹೊಕ್ಕನು ಪಾರ್ಥನಿಂದ್ರಪ್ರಸ್ಥ ಪುರವರವ ||೬೩|| `ನಾಲ್ಕನೆಯ ಸಂಧಿ ಸೂಚನೆ ಯಾಗಸಿದ್ದಿಗೆ ನಡೆದು ಪೂರ್ವವಿ ಭಾಗದಲಿ ಭೂಮಿಪರ ಕೈಯಲಿ ಸಾಗರೋಪಮುಧನವನಳವಡಿಸಿದನು ಕಲಿಭೀವು || ಕೇಳು ಜನಮೇಜಯಧರಿತ್ರಿ ಭಾಲ ಯಮ ನ೦ದನನ ಭಾಗ್ಗದ ಹೋಲಿಕೆಗೆ ಬಹರು೦ಟೆ ನಳ ನಹುಷಾದಿರಾಯರಲಿ | ಆಳು ನಡೆದುದು ಭೀಮಸೇನನ ಧಾಅ ಯಿದೆಯೆನೆ ತೆತ್ತರವನೀ | ಪಾಲಕರು ತಂತಮ್ಮ ನಿಜವಿತಾನುರೂಪದಲಿ !!o11 ೬೭|| ನೆಲದವಲಯದವಸ್ತು ವಂದನು-ಭೂಮಂಡಲದ ಎಲ್ಲ ಭಾಗಗಳಲ್ಲಿಯೂ ಇದ್ದ ಈ ಅಪೂತ್ವ ಪದಾರ್ಥಗಳನ್ನು; ಶಿವ + ಎನುತಶಿವಯೆನುತ ಇಲ್ಲಿ ವಿಕಲ್ಪವಾಗಿ ಯಕಾರಾಗಮವು ಬಂದಿರುವುದು. ೧೦ ಸಾಗರೋಪಮಧನವನು-ಸಮುದ್ರಕ್ಕೆ ಸಮಾನವಾದ (ಅಪಾರವಾದ) ದ್ರ ವ್ಯವನ್ನು, ಭೀಮಸೇನನಧಾಳಿಯಿದೆನ-ಭೀಮನು ಇದೋ ದಂಡೆತ್ತಿ ಬಂದಿರುವನು ಎಂದು ಹೇಳಿದಮಾತ್ರಕ್ಕೆ ನಿಜವಿತ್ತಾನುರೂಪದಲಿ-ತಮಗಿರುವ ಐಶ್ವರಕ್ಕೆ ತಕ್ಕಂತೆ; ತಮ್ಮ ತಮ್ಮ-ದ್ವಿರುಕ್ತಿಯಲ್ಲಿ ಪೂರೈಶಬ್ದದ ಕೊನೆಯಕ್ಷರಕ್ಕೆ ಲೋಪಬಂದು ತಂತಮ್ಮ ಎಂದಾಗಿದೆ.