ಪುಟ:ದಿಗ್ವಿಜಯ ಪ್ರಕರಣ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೫ ಕಳುಹಿದನು ಮಿಗೆಯಾಪ್ತ ಪತ್ತಾ ವಳಿಯ ತನುಜನ ಬಲಿಯ ತತ್‌ಕ್ಷಣ ದೊಳಗೆ ಹೇಳಿಕೆಯಾಯು ಪರಿವಾರಕೆ ಘಟೋತ್ಕಚನ || ತಿಳಿದ ಕಾರಿರುಳೆನಿಕವೋ ಮೇಣ್ ಖಳಜನರ ಹೃದಯಾಂಧಕಾರದ ಹೊಳೆಕೆಯೋ ತಾನೆನಲು ಮಿಗೆ ನಡೆತಂದನಾ ದನುಜ |೨೧|| ಸಾಳೆಯವ ಹೊಕ್ಕನು ಘಟೋತ್ಕಚ ನಾಳುಸಹಿತಯ್ದಂಗೆ ನಮಿಸಿದ ನೂಲಿಗವ ಬೆಸಸೆನಗೆ ಹೇಡಿತಾರಾಜಕಾರಿಯವ || ವೀಳೆಯವ ತಾ ಯೆನಲು ನಗುತ ವಿ ಶಾಲವಿನಯಕೆ ಮೆಚ್ಚಿದನು ಬಲ ದೊ೪ನಲಿ ಸೆಳೆದಪ್ಪಿ ಮುಂಡಾಡಿದನು ನಂದನನ ||೨೨|| ಮಗನೆ ಲಂಕೆಗೆ ಪೋಗು ಮಾನವ ರಿಗೆ ಮಹೋದಧಿ ಗಮ್ಯವಲ್ಲತಿ ವಿಗಡತನಬೇಡಲ್ಲಿ ವಿನಯದೊಳೆನ್ನು ಕಾರಿಯವ || ಸೊಗಸಿತೇ ಸಾವದಲಿ ಕಪ್ಪವ ತೆಗೆವುದವಗಡಿಸಿದರೆ ಬಿಕ ಲ್ಲಿಗೆ ತರಾಳಿಗಳಿವೆ ವಿಘಾತಿಗೆ ದೋಪವಿಲ್ಲೆಂದ ||೨೩! ೨೧] ಆಸ್ತಪತ್ರಾವಳಿ-ಗುಟ್ಟಾದಕಾಗದ, ತನುಜನಬಳಿಯ-ಮಗನ ಸವಿಾಪಕ್ಕೆ, ಕರಿದು -- ಇರುಳ-ಕಾರಿರುಳ (ವಿ. ಪೂರ್ವ, ಕ) ಘಟೋತ್ಕಚನು ಕತ್ತಲೆಯಿಂದ ತುಂಬಿದ ರಾತ್ರಿಯಂತೆಯೂ, ದುರ್ಜನರ ಮನದಲ್ಲಿರುವ ಅಜ್ಞಾನದಂತೆಯೂ ಇದ್ದನು. ಈ ವಾಕ್ಯದಲ್ಲಿ ಉತ್ಪಕ್ಷಾಲಂಕಾರವಿದೆ. ೨೨॥ ಅಕಾರಾನ್ತ ಶಬ್ದಗಳಿಗೆ ' ಗೆ ' ದಿರ' ಎಂಬ ಪ್ರತ್ಯಯಗಳು ಪರವಾದರೆ ಅನುನ್ಯಾ ರಾಗಮವು ಬರುವುದು; ಎಂಬ ಸೂತ್ರದಂತೆ " ಅಯ್ಯಂಗೆ' ಎಂದಾಯ್ತು; ನಂದನ -ಮಗ, ಇಂದ್ರನ ವನ. ೨೩|| ಲಂಕೆಗೆ ಮನುಷ್ಯರು ಹೋಗಲು ಸಮುದ್ರವು ಅಡ್ಡಲಾಗಿರುವುದರಿಂದ ಶಕ್ತರಲ್ಲ. ಆದಕಾರಣ ನೀನು ಅಲ್ಲಿಗೆ ಹೋಗು, ವಿನಯದಿಂದ ಕಾರವನ್ನು ತಿಳಿಸಿ ನಾಮೋಪಾಯದಿಂದ ಕಪ್ಪವನ್ನು ತೆಗೆದುಕೊಂಡು ಬಾ, ತುಂಟತನವನ್ನು ಮಾಡ -- -- -