ಪುಟ:ದಿಗ್ವಿಜಯ ಪ್ರಕರಣ.djvu/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪಿ ಶಿಕ

ಈ ಸಣ್ಣ ಪುಸ್ತಕದಲ್ಲಿ ಮುದ್ರಿಸಿರುವ ದಿಗ್ವಿಜಯ ಪ್ರಕರಣವು ಸಭಾಪರ್ವದ ಒಂದು ಭಾಗವಾಗಿರುವುದು, ಈ ಸಭಾಪರ್ವವು ಕನ್ನ ತದ ಭಾರತದ ಆದಿ ದಶ ಸರ್ವಗಳಲ್ಲೊಂದಾಗಿರುತ್ತದೆ. ಆದಿ ದಶಪರ್ವ ಗಳನ್ನು ನಾರಣಪ್ಪನೆಂಬ ಕವಿಯು ದಕ್ಷಿಣೋತ್ತರ ಮಾರ್ಗಗಳನ್ನು (ಎಂದರೆ ಈಗ ವಾಡಿಕೆಯಾಗಿ ಕರೆಯುವ ಗಳಗನ್ನಡ ಹೊಸಗನ್ನಡಗ ಳನ್ನು ) ಮಿಶ್ರಮಾಡಿ ಬರೆದಿರುತ್ತಾನೆ. ಈತನ ಕಾವ್ಯವು ಸರಳವಾಗಿ ಯ ಮಧುರವಾಗಿಯೂ ಇರುವುದರಿಂದ ಈತನಿಗೆ ಕುಮಾರವ್ಯಾಸ ನೆಂಬ ಹೆಸರು ಬಂತು. ಈತನು ಕೊಡಿವಾಳಗ್ರಾಮದ ಗೌಡನಾಗಿ ವನು. ತಾನು ಬರೆದ ಗ್ರಂಥವನ್ನು ಧಾರ್ವಾಡ ಜಿಲ್ಲೆಯಲ್ಲಿರುವ ಗದು ಗಿನ ವೀರನಾರಾಯಣ ದೇವರಿಗೆ ಸಮರ್ಪಿಸಿದನು. ಈತನ ಗ್ರಂಥವು ಬಹುಬೇಗನೆ ಜನರ ವಿಶ್ವಾಸಕ್ಕೆ ಪಾತ್ರವಾಯಿತು. ಭಾರತದ ಉತ್ತರಭಾಗವನ್ನು ಒರೆದ ತಿಮ್ಮಣ್ಣನು ತನಗೆ ವಿಜಯ ನಗರ ಮಹಾಸಂಸ್ಥಾನವನ್ನಾಳುತ್ತಿದ್ದ ಕೃಷ್ಣರಾಯರವರು “ ಎಲೆ ಮಹಾಕವಿಯಾದ ಭಾನುಪುತ್ರನೆ ! ಕುಮಾರವ್ಯಾಸನು ಭಾರತದ ಆದಿ ದರ ಪರ್ವಗಳನ್ನು ರಸಭರಿತವಾಗಿ ರಚಿಸಿರುವನು, ನೀನು ಉಳಿದ ಪತ್ನಿ ಗಳನ್ನು ರಚಿಸಿ ಭಾರತಕಥೆಯನ್ನು ಪೂರಯಿಸುವವನಾಗು ?” ಎಂದು ಹೋ೪ರಮೇಲೆ ತಾನು ಬರೆವುದಕ್ಕೆ ಈಾರಂಭಿಸಿದಂತೆ ಹೇಳಿಕೊಳ್ಳು ತಾನೆ. ಈ ಕೃಷ್ಣರಾಯರವರು ಕ್ರಿ. ಶ. ೧೧೯ರಿಂದ ೧೨೯ ರ ವರೆಗೆ, ರಾಷ್ಟ್ರವನ್ನಾಳುತ್ತಿದ್ದುದರಿಂದ ತಿಮ್ಮಣ್ಣನು ಬಾಳಿಗ ಕಾಲವು ಕ್ರಿ. ನ. ೧೫೧೧ರಲ್ಲಿತ್ತೆಂದು ಇಟ್ಟು ಕೊಳ್ಳಬಹುದು. ಈ ತಿಮ್ಮಣ್ಣನ ಕಾಲಗಲ್ಲಿ ಕುಮಾರವ್ಯಾಸನ ಭಾರತವ ಸುಪ್ರಸಿದ್ಧವಾದ ಗ್ರಂಥವಾಗಿ ದ್ದುದರಿಂದ, ಕುನರಾರವ್ಯಾಸನು ಕ್ರಿ. ಶ. ೧೫ ನೆಯ ಶತಮಾನದ ಮಧ್ಯ ಭಾಗದಲ್ಲಿಯೋ ಅದಕ್ಕೆ ಹಿಂದೆ ಬಾಳಿದನೆಂದು ಊಹಿಸಬೇಕಾಗಿದೆ. ೨ ದಿ