ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೮ ದಿವ್ಯಸುಂದರಿ ಅಥವಾ ದೀರ್ಘ ಪ್ರಯತ್ನ, vvvvvvvvkwwMMMw ವೇಗದಿಂದ ಹೋದವು; ಅದರೆ ಮುಂದೆ ಏರುದಾರಿಯಾದದ್ದರಿಂದ ಗಾಡಿಗಳು ಮೆಲ್ಲ ಮೆಲ್ಲನೆ ಹೋಗಹತ್ತಿದವು. ಗಾಡಿಗಳು ಈ ಪ್ರಕಾರ ಏರುದಾರಿಯಲ್ಲಿ ಏರಹತ್ತಿದ ಕೂಡಲೆ ದಿವ್ಯಸುಂದರಿಯ ಮುದ್ರೆಯು ಒಮ್ಮೆಲೆ ಭಯಾಂಕಿತವಾಯಿತು, ಅವಳು ಮಧುರೆಯನ್ನು ಸಮೀಪಕ್ಕೆ ಕರೆದು ಭಯಭೀತಸ್ವರದಿಂದ:- ಮಧುರಕ್ಕೆ, ಅದು ನೋಡು ಭೂತ ” ಎಂದಳು. ದಿವ್ಯಸುಂದರಿಯ ಪುಕ್ಕ ಸ್ವಭಾವವನ್ನು ನೋಡಿ ರಾಮರಾಯ-ಮಧುರೆಯರು ನಕ್ಕರು. ರಾಮರಾಯನು:- ದಿವ್ಯಸುಂದರಿ, ಸುಮ್ಮನೆ ಭ್ರಮೆಯಿಂದ ಹೆದರಬೇಡ, ಜಗತ್ತಿನಲ್ಲಿ ಭೂತದ ಅಸ್ತಿತ್ವವೇ ಇಲ್ಲವೆಂದು ಈಗಿನ ಎಷ್ಟೋ ವಿದ್ವಾಂಸರ ಅಭಿಪ್ರಾಯವದೆ. ಒಂದು ವೇಳೆ ಇದ್ದರೂ ಇಷ್ಟು ಜನರು ಸಂಗಡವಿರಲು ಹೆದರುವ ಕಾರಣವಿಲ್ಲ. ?” ಎನ್ನಲು ದಿವ್ಯಸುಂದರಿಯು ಗಾಬರಿಯ ಸ್ವರದಿಂದಲೇ:-( ಅಣ್ಣಾ, ನನಗೆ ಭ್ರಮೆಯಿಲ್ಲ. ಅದೇ ನೋಡು, ಆ ಗಿಡದ ಕೆಳಗೆ ಇನ್ನೂ ಬೆಳ್ಳಗೆ ಏನೋ ಕಾಣಿಸುತ್ತದೆ. ” ಎಂದನ್ನಲು ಎಲ್ಲರ ದೃಷ್ಟಿಗಳೂ ಆ ದಿಕ್ಕಿನ ಕಡೆಗೆ ಹೊರಳಿದವು, ಅತ್ತ ಕಡೆಗೆ ನೋಡುತ್ತಿರುವಾಗ ಎಷ್ಟೋ ಜನರು : ಛೇ! ಅಲ್ಲಿ ಯೇನೂ ಇಲ್ಲ. ' ಎಂಬದಾಗಿ ಅಂದು ಹಾಸ್ಯ ಮಾಡಿದರು. ಕೆಲವರು ಅಲ್ಲಿ ಏನೋ ಕಾಣಿಸುವದು ನಿಜವು; ಆದರೆ ಅದು ಭೂತವು ಮಾತ್ರವಲ್ಲ. ” ಎಂದರು. ಇತರರಂತೆ ವಿನಾಯಕನೂ ಆ ದಿಕ್ಕಿನ ಕಡೆಗೆ ನೋಡುತ್ತಿದ್ದನು. ಆ ದಿಕ್ಕಿನ ಕಡೆಗೆ ಅವನು ತನ್ನ ಕುದುರೆಯನ್ನು ಮುಂದೆ ಸ್ವಲ್ಪ ಹೊಡೆದುಕೊಂಡು ಹೋಗಲಾಗಿ ಗಿಡದ ಕೆಳಗೆ ಬಿಳೇ ಪೋಷಾಕನ್ನು ಹಾಕಿಕೊಂಡ ಒಬ್ಬ ಮನುಷ್ಯನು ನಿಂತಿದ್ದಾನೆಂದು ಅವನಿಗೆ ಸ್ಪಷ್ಟ ವಾಗಿ ತೋರಹತ್ತಿತು. ಕೆಲ ಹೊತ್ತು ವಿನಾಯಕನು ತಟಸ್ಥ ನಾಗಿ ನಿಂತಮೇಲೆ ಗಿಡದ ಕೆಳಗಿದ್ದ ಬಿಳೇ ಪೋಷಾಕಿನ ಮೂರ್ತಿಯು ಗಿಡದ ನೆರಳನ್ನು ಬಿಟ್ಟು, ಮಂದ ಹೆಜ್ಜೆ ಯಿಂದ ಮುಂದಕ್ಕೆ ಬಂದು ವಿನಾಯಕನನ್ನು ಉದ್ದೇಶಿಸಿ ಕೈ ಬೀಸಿತು, ಆ ಕೂಡಲೆ ವಿನಾಯಕನು ಆ ದಿಕ್ಕಿನ ಕಡೆಗೆ ಕುದುರೆಯನ್ನು ಓಡಿಸಿದನು, ಕುದುರೆಯು ಆ ದಿಕ್ಕಿಗೆ ಹೋದದ್ದನ್ನು ನೋಡಿ ಸರ್ವರಿಗೂ ಆಶ್ಚರ್ಯವಾಯಿತು, ಕೆಲವರ ಅಂತಃಕರಣದಲ್ಲಿ ಸ್ವಲ್ಪ ಭೀತಿಯೂ ಉತ್ಪನ್ನ ವಾಯಿತು. ವಿನಾಯಕನ ಮಿತ್ರನು ಇಷ್ಟು ಹೊತ್ತು ಕುದು ರೆಯನ್ನು ನಿಲ್ಲಿಸಿಕೊಂಡು ಸುಮ್ಮನೆ ನೋಡುತ್ತಿದ್ದನು; ಆದರೆ ವಿನಾಯಕನೊಬ್ಬನೇ। ಆ ದಿಕ್ಕಿಗೆ ತಿರುಗಿದ್ದನ್ನು ನೋಡಿ, ಅವನೂ ಆ ದಿಕ್ಕಿಗೆ ತನ್ನ ಕುದುರೆಯನ್ನು ಓಡಿಸಿ ದನು, ಕುದುರೆಯು ವೇಗದಿಂದ ಹೋಗಿ ವಿನಾಯಕನ ಕುದುರೆಯನ್ನು ಹಿಂಬಾಲಿ ಸಿತು. ವಿನಾಯಕನು ಆ ಗಿಡದ ಸಮೀಪಕ್ಕೆ ಹೋದ ಕೂಡಲೆ ( ಯಾರು ವಿನಾ ಯಕರಾಯರೇನು ? " ಎಂಬ ಮಧುರಶಬ್ದವು ಆ ಗಿಡದ ಕೆಳಗೆ ನಿಂತಿದ್ದ ಮೂರ್ತಿಯ ಮುಖದಿಂದ ಹೊರಟಿತು. ವಿನಾಯಕನಿಗೆ ಆ ಧ್ವನಿಯು ಪರಿಚಯವುಳ್ಳದ್ದಿದ್ದುದರಿಂದ ಅವನಿಗೆ ಬಹಳ ಆಶ್ಚರ್ಯವಾಗಿ ಅವನು:- ಯಾರು ಇಂದಿರೆ ? ” ಎಂದನು, ಗಿಡದ ಕೆಳಗಿನ ಆಕೃತಿ:- ( ಸತಸ್ವರದಿಂದ ) ಹೌದು ಅವಳೇ, ?”