ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ದಿವ್ಯ ಸುಂದರಿ ಅಥವಾ ದೀರ್ಘ ಪ್ರಯತ್ನ, AAAAAAA++++v/ AAfsh/\ N/ ಇಂದಿರ:-( ಹಾಗಾದರೆ ನಾನಿಷ್ಟು ಸೂಚಿಸಿದರೂ ನೀವು ಹೀಗೆಯೇ ಹೋಗುವಿರಾಯಿತು. ” - ವಿನಾ:-( ಇಲ್ಲ. ಸಂಕಟದ ಸೂಚನೆಯಾಗಿಯೂ ಆ ಸಂಕಟದಿಂದ ಉಳಿ ಯಲಿಕ್ಕೆ ಪ್ರಯತ್ನ ಮಾಡದಿದ್ದರೆ, ಈಶ್ವರನ ಅವಜ್ಞೆ ಮಾಡಿದಂತಾಗುತ್ತದೆ. ಶಾಮ ರಾಯನು ನನ್ನ ನ್ನು ಕೊಲ್ಲಲಿಕ್ಕೆ ಯಾವ ಪ್ರಯತ್ನ ಮಾಡಿರುವನು ?” ಇಂದಿರೆ:- ಇಂದು ಸ್ವಚ್ಚವಾಗಿ ಬೆಳದಿಂಗಳು ಬಿದ್ದಿರುವದರಿಂದಲೂ, ನೀವು ಕುದುರೆಯ ಮೇಲೆ ಕುಳಿತು ಹೋಗುವದರಿಂದಲೂ ನಮ್ಮ ತಂದೆಗೆ ಸಹಜವಾಗಿ ನಿಮ್ಮ ಗುರ್ತುಹಿಡಿಯಲಿಕ್ಕೆ ಬರುವಂತಿದೆ. ಈ ಏರುದಾರಿಯನ್ನು ಏರಿಹೋದ ಕೂಡಲೆ ಬಲಭಾಗಕ್ಕೆ ಒಂದು ಸಣ್ಣ ಮರಡಿಯಿರುತ್ತದೆ. ಆ ಮರಡಿಯ ಮೇಲೆ ನನ್ನ ತಂದೆಯೂ, ಗೋಪಾಳರಾಯನೂ ಚಲೋ ಎರಡು ಬಂದೂಕುಗಳನ್ನು ಹಿಡಿದು ಕೊಂಡು ನಿಂತಿದ್ದಾರೆ. ನೀವು ಈ ಹಾದಿಯಲ್ಲಿ ಇಂಥ ವೇಳೆಯಲ್ಲಿಯೇ ಹೋಗುತ್ತೀ ರೆಂಬುವದು ಅವರಿಗೆ ಮೊದಲೇ ತಿಳಿದಂತೆ ಕಾಣಿಸುತ್ತದೆ. ನೀವು ಆ ಮರಡಿಯ ಎದುರ್ಭಾಗಕ್ಕೆ ಹೋದ ಕೂಡಲೆ ನಿಮ್ಮ ಮೇಲೆ ಬಂದೂಕುಗಳ ಪ್ರಯೋಗ ಮಾಡಿ ಅಡವಿಯಲ್ಲಿ ಓಡಿಹೋಗಬೇಕೆಂದು ಅವರು ಆಲೋಚಿಸಿದ್ದಾರೆ. ಅವರ ಈ ದುರಾ ಲೋಚನೆಯು ನನಗೆ ತಿಳಿದ ಕೂಡಲೆ ತಮ್ಮ ಭೆಟ್ಟಿಯನ್ನು ತಕ್ಕೊಳ್ಳಬೇಕೆಂದು ನಾನು ಈ ರೀತಿ ಪ್ರಯತ್ನ ಮಾಡಿದೆನು, ನೀವು ಈಗ ನಿಮ್ಮ ಪ್ರಾಣರಕ್ಷಣೆಯ ಉಪಾ ಯವನ್ನು ಮಾಡಿರಿ; ಆದರೆ ನನ್ನ ತಂದೆಯ ಜೀವಕ್ಕೆ ಮಾತ್ರ ಅಪಾಯ ಮಾಡಬೇಡಿರಿ. ಅವನಿಗೆ ಯಾವ ತರದ ಶಿಕ್ಷೆಯನ್ನೂ ಮಾಡಬೇಡಿರಿ, ಕೃತಘ್ನ ಸ್ವಭಾವರೋಗಕ್ಕೆ ತಕ್ಕ ಔಷಧವನ್ನು ಕೊಡುವ ಸಾಮರ್ಥ್ಯವು ನನ್ನಲ್ಲಿಲ್ಲ; ಆದರೆ ಆ ಸಾಮರ್ಥ್ಯವು ನಿಮ್ಮಲ್ಲಿದ್ದರೂ ನೀವೇ ಆತನ ಪಾತಕಕ್ಕೆ ಪ್ರತಿಫಲವನ್ನು ಕೊಡಬೇಡಿರಿ, ಆ ತರದ ಪ್ರತಿಫಲದಾಯಕ ಕಾರ್ಯವನ್ನು ಈಶ್ವರನು ಕೈಕೊಂಡೇ ನಿಂತಿರುವನು.” ಹೀಗನ್ನುತ್ತ ಸುಮ್ಮನೆ ನಿಂತಳು. ವಿನಾಯಕನು ಇಂದಿರೆಯ ಮಾತಿನ ಸಂಬಂಧ ವಿಚಾರಮಾಡಹತ್ತಿದನು. ಶಾಮರಾಯನಿಗೆ ಶಿಕ್ಷೆಯನ್ನು ಮಾಡದೆ, ಜೀವವನ್ನು ಹೇಗೆ ಉಳಿಸಿಕೊಳ್ಳಬೇಕೆಂಬ ಬಗ್ಗೆ ಅವನು ಕೆಲಹೊತ್ತು ಅಲೋಚಿಸಿ ಅನಂತರ ತನ್ನ ಮಿತ್ರ ನಿಗೆ ಕುದುರೆಯ ಮೇಲಿಂದ ಇಳಿದು ಬರಲಿಕ್ಕೆ ಸನ್ನೆ ಮಾಡಿದನು. ಆ ಸನ್ನೆ ಯಿಂದ ವಿನಾಯಕನ ಉದ್ದೇಶವೆಲ್ಲ ಅವನ ಲಕ್ಷದಲ್ಲಿ ಬರಲು ಅವನು ಕುದುರೆಯ ಮೇಲಿಂದ ಇಳಿದು ಅದನ್ನು ಒಂದು ಗಿಡಕ್ಕೆ ಕಟ್ಟಿದನು. ವಿನಾಯಕನೂ ತನ್ನ ಕುದುರೆಯನ್ನು ಗಿಡಕ್ಕೆ ಕಟ್ಟಿದನು, ಆ ಮೇಲೆ ಅವರಿಬ್ಬರು ಸಪ್ಪಳವಾಗದಂತೆ ಹೆಜ್ಜೆಯನ್ನು ಹಾಕುತ್ತ ಅಡವಿಯನ್ನು ಹೊಕ್ಕರು. ಹೋಗುಹೋಗುತ್ತ ಶಾಮರಾಯ ಗೋಪಾಳರು ಕುಳಿತ ಮರಡಿಯು ಅವರಿಗೆ ಸ್ಪಷ್ಟವಾಗಿ ಕಾಣಿಸಹತ್ತಿತು. ಸ್ವಲ್ಪ ದೂರ ಹೋದಮೇಲೆ