ಪುಟ:ದಿವ್ಯಸುಂದರಿ ದ್ವಿತೀಯ ಕುಸುಮ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫ನೆಯ ಪ್ರಕರಣ-ವನದೇವತೆ ! MMMMMAMIMMMrMrMorwwmmmmmm MMM ಅವರಿಗೆ ಶಾಮರಾಯ-ಗೋಪಾಳರಾಯರು ಸ್ಪಷ್ಟವಾಗಿ ಕಾಣಿಸಿದರು, ಮತ್ತಷ್ಟು ದೂರ ಹೋದಮೇಲೆ ಅವರಿಗೆ ಆ ಇಬ್ಬರ ಮಾತುಗಳೂ ಸ್ಪಷ್ಟವಾಗಿ ಕೇಳ ಹತ್ತಿದವು. ಶಾಮರಾಯ, ಗೋಪಾಳರಾಯ ಇವರು ಹಾದಿಯ ಕಡೆಗಿರುವ ಕಲ್ಲಿನ ಮೇಲೆ ಕುಳಿತುಕೊಂಡಿದ್ದರು. ಅವರಿಬ್ಬರೂ ಮರಡಿಯ ಮೇಲೆ ಇದ್ದದರಿಂದ ಅವರಿಗೆ ಹಾದಿ ಯಲ್ಲಿ ಓಡಿಬರತಕ್ಕ ಕುದುರೆಯ ಗಾಡಿಗಳು ಸ್ಪಷ್ಟವಾಗಿ ಕಾಣಿಸುತ್ತಿದ್ದವು, ಇಬ್ಬರೂ ಶಿಪಾಯಿಯರಂತೆ ಪೋಪ್ರಾಕು ಹಾಕಿಕೊಂಡು, ಬಂದೂಕು ಬಾರ ಮಾಡಿಕೊಂಡು ಏಕಾಗ್ರದೃಷ್ಟಿಯಿಂದ ಹಾದಿಯ ಕಡೆಗೆ ನೋಡುತ್ತಿದ್ದರು. ಗಾಡಿಗಳು ಓಡುತ್ತ ಬರು ವಾಗ ಒಮ್ಮೆಲೇ ನಿಂತಿದ್ದನ್ನು ನೋಡಿ, ಆ ಇಬ್ಬರ ಅಂತಃಕರಣದಲ್ಲಿ ಅನೇಕ ವಿಚಾರ ಗಳು ಉತ್ಪನ್ನವಾಗಿ ಅವರು ಆ ಸಂಬಂಧವಾಗಿ ಮಾತಾಡುತ್ತಿದ್ದರು. - ಗೋಪಾಳ:-( ಗಾಡಿಗಳು ಮಧ್ಯದಲ್ಲಿಯೇ ಯಾಕೆ ನಿಂತವು ? ಶಾಮ:-(( ಏನಾದರೂ ಹರಿಮುರಿಯಾಗಿ ನಿಂತಿದ್ದಾವು, ಈಗ ೧೦-೧೫ ಮಿನೀಟಿನಲ್ಲಿ ಇಲ್ಲಿಗೆ ಬಂದಾವು, ಗೋಪಾಳರಾಯ, ನೀಟವಾಗಿ ಗುರಿಯನ್ನು ಮಾತ್ರ ಹೊಡೆ, ಇಲ್ಲವಾದರೆ ಮಾಡಿದ್ದೆಲ್ಲ ಮಸಿನುಂಗಿಹೋದೀತು. " ಗೋಪಾಳ:-( ನಾನಂತೂ ನೀಟವಾಗಿ ಹೊಡೆಯುವೆನು, ನೀವೂ ಸರಿ ಯಾಗಿ ನೋಡಿ ಹೊಡೆಯಿರಿ, ಅಂದರೆ ಬಹಳ ಮಾಡಿ ಇಬ್ಬರ ಗುಂಡುಗಳೂ ತಾಕಿ ಯಾವು, ಕಡೆಗೆ ಒಂದಾದರೂ ತಾಕುವದರಲ್ಲಿ ಸಂದೇಹವಿಲ್ಲ. ಶಾಮರಾಯ, ಇಂದು ವಿನಾಯಕನು ನಮ್ಪಿ ಕೃತಿಯಿಂದ ಸತ್ತದ್ದಾದರೆ, ಭಲೆ ! ನಮ್ಮ ಸ್ಥಿತಿಯಲ್ಲಿ ಎಷ್ಟು ಹೆಚ್ಚು ಕಡಿಮೆಯಾಗುವದು ! ! ) ಶಾಮ:-" ( ನಕ್ಕು ) ನೀಲಕಂಠರಾಯನ ಎಲ್ಲ ಆಸ್ತಿಯನ್ನು ಅಪಹರಿಸಲಿಕ್ಕೆ ಅನುವಾಗುತ್ತದೆ. ಅಲ್ಲದೆ ಇದರಿಂದ ದೀನನಾದ ವಸಂತನ ಒಂದು ಕಾರ್ಯವೂ ಆಗು ವದು, ಚಿಂತಾಮಣಿರಾಯನಿಗೆ ದಿವ್ಯಸುಂದರಿಯೆಂಬ ಮಗಳಿದ್ದಾಳೆ; ಅವಳು ಮೊದಲು ವಸಂತನನ್ನು ಪ್ರೀತಿಸುತ್ತಿದ್ದಳು; ಆದರೆ ವಿನಾಯಕನು ದೃಷ್ಟಿಗೆ ಬಿದ್ದಂದಿನಿಂದ ಅವಳು ವಸಂತನನ್ನು ತಿರಸ್ಕರಿಸಿ, ವಿನಾಯಕನೊಡನೆ ಸ್ನೇಹ ಬೆಳಿಸುತ್ತಿದ್ದಾಳೆ. ಒಂದುವೇಳೆ ವಿನಾಯಕನು ಸತ್ತದ್ದಾದರೆ ಅವಳು ಪುನಃ ವಸಂತನ ಮೇಲೆ ಪ್ರೀತಿಮಾಡಬಹುದು. ಅವಳೊಡನೆ ವಸಂತನ ಲಗ್ನವಾದರೆ ಕೇಳುವದೇನು ? ಚಿಂತಾಮಣಿರಾಯನ ಮಾನ ಖಂಡನೆಯನ್ನು ಅರಗಳಿಗೆಯಲ್ಲಿ ಮಾಡಬಹುದು ! ಒಳ್ಳೇದು, ಅದೇ ನೋಡು-ಗಾಡಿ ಗಳ ಸಪ್ಪಳವಾಗಹತ್ತಿತು. ಲಕ್ಷಗೊಟ್ಟು ನೀಟವಾಗಿ ಕೂಡ್ರು. ” ಈ ವೇಳೆಯಲ್ಲಿ ಗಾಡಿಗಳ ಸಪ್ಪಳವಾದದ್ದು ನಿಜವಿದ್ದಿತು. ದಿವ್ಯಸುಂದರಿ-ಮಧು ರೆಯರಿಗೆ ವಿಶೇಷವಾಗಿ ನೀರಡಿಕೆಯಾದದ್ದರಿಂದ ಗಾಡಿಹೊಡೆಯುವವರು ಹತ್ತರ